ಕೊರೊನಾ ಸಂಕಷ್ಟದಲ್ಲಿ ಬರದ ನಾಡಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆ
ಬಳ್ಳಾರಿ: ಬದುಕುವ ಹಾಗೂ ಇತರರನ್ನು ಬದುಕಿಸುವ ಕಲೆ ಮತ್ತು ಮನಸ್ಸಿದ್ರೆ ಎಂಥ ಕಠಿಣ ಸಂದರ್ಭಗಳನ್ನು ಎದುರಿಸಬಹುದು, ಬಾಳಬಹುದು ಬದುಕಿ ತೋರಿಸಬಹುದು ಎನ್ನೋದನ್ನ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎರಡು ಗ್ರಾಮ ಪಂಚಾಯಿತಿಗಳು ತೋರಿಸಿಕೊಟ್ಟಿವೆ. ಈ ಮೂಲಕ ರಾಜ್ಯ ಹಾಗು ದೇಶಕ್ಕೆ ಮಾದರಿಯಾಗಿವೆ. ಹೌದು, ಗಣಿನಾಡು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಬರಪೀಡಿತ ತಾಲೂಕು. ಮಳೆಯಾಶ್ರಿತ ತಾಲೂಕು ಆಗಿರುವ ಕೂಡ್ಲಿಗಿ ಪ್ರತಿ ವರ್ಷ ಕೂಡಾ ಬರಪೀಡಿತ ತಾಲೂಕಾಗಿಯೇ ಉಳಿದುಕೊಂಡಿದೆ. ಈ ಭಾಗದ ಜನರಿಗೆ ದುಡಿಯಲು ಸರಿಯಾದ ಕೆಲಸ ಇಲ್ಲ. ಹೀಗಾಗಿ […]
ಬಳ್ಳಾರಿ: ಬದುಕುವ ಹಾಗೂ ಇತರರನ್ನು ಬದುಕಿಸುವ ಕಲೆ ಮತ್ತು ಮನಸ್ಸಿದ್ರೆ ಎಂಥ ಕಠಿಣ ಸಂದರ್ಭಗಳನ್ನು ಎದುರಿಸಬಹುದು, ಬಾಳಬಹುದು ಬದುಕಿ ತೋರಿಸಬಹುದು ಎನ್ನೋದನ್ನ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎರಡು ಗ್ರಾಮ ಪಂಚಾಯಿತಿಗಳು ತೋರಿಸಿಕೊಟ್ಟಿವೆ. ಈ ಮೂಲಕ ರಾಜ್ಯ ಹಾಗು ದೇಶಕ್ಕೆ ಮಾದರಿಯಾಗಿವೆ.
ಹೌದು, ಗಣಿನಾಡು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಬರಪೀಡಿತ ತಾಲೂಕು. ಮಳೆಯಾಶ್ರಿತ ತಾಲೂಕು ಆಗಿರುವ ಕೂಡ್ಲಿಗಿ ಪ್ರತಿ ವರ್ಷ ಕೂಡಾ ಬರಪೀಡಿತ ತಾಲೂಕಾಗಿಯೇ ಉಳಿದುಕೊಂಡಿದೆ. ಈ ಭಾಗದ ಜನರಿಗೆ ದುಡಿಯಲು ಸರಿಯಾದ ಕೆಲಸ ಇಲ್ಲ. ಹೀಗಾಗಿ ಪ್ರತಿ ವರ್ಷ ಈ ತಾಲೂಕಿನಿಂದಲೇ ಹೆಚ್ಚು ಜನರು ಕೂಲಿ ಅರಸಿ ಗುಳೆ ಹೋಗುತ್ತಾರೆ.
ದೇಶಕ್ಕೇ ಮಾದರಿಯಾದ ಗುಡೇಕೋಟೆ ಗ್ರಾಮ ಪಂಚಾಯಿತಿ ಆದ್ರೆ ಈ ವರ್ಷ ಉದ್ಯೋಗ ಅರಸಿ ಗುಳೆ ಹೋಗವಂತಿಲ್ಲ. ಯಾಕಂದ್ರೆ ಕೊರೊನಾ ಭೀತಿ. ಒಂದೆಡೆ ಬರಪೀಡಿತ ತಾಲೂಕಿನಲ್ಲಿ ದುಡಿಯಲು ಕೆಲಸ ಇಲ್ಲ. ಮತ್ತೊಂದೆಡೆ ಗುಳೆ ಹೋಗಲು ಕೊರೊನಾ ಭೀತಿ. ಇಂತಹ ಸಂದರ್ಭದಲ್ಲಿ ಈ ತಾಲೂಕಿನ ಬಡವರಿಗೆ ಆಸರೆಯಾಗಿದ್ದು ಉದ್ಯೋಗ ಖಾತ್ರಿ ಯೋಜನೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮ ಪಂಚಾಯ್ತಿ ತನ್ನ ವ್ಯಾಪ್ತಿಯ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಿ ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಸ್ಥಳೀಯ ಕೂಲಿಕಾರ್ಮಿಕರಿಗೆ, ರೈತರಿಗೆ ಕೆಲಸ ನೀಡುತ್ತಿದೆ.
ಕೂಲಿ ಕಾರ್ಮಿಕರ ಹಸಿವು ನೀಗಿಸಿದ ಉದ್ಯೋಗ ಖಾತ್ರಿ ಯೋಜನೆ ಗುಡೇಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರದಣಲ್ಲಿ 1.50 ಕೋಟಿ ವೆಚ್ಚದಲ್ಲಿ ಎಕೋ ಪಾರ್ಕ್ ನಿರ್ಮಾಣದ ಕಾಮಗಾರಿ ಆರಂಭಿಸಿದೆ. ಹಾಗೆನೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಬದುಗಳ ನಿರ್ಮಾಣ, ಕೆರೆ ಹೂಳೆತ್ತುವುದು, ಅರಣ್ಯದಲ್ಲಿ ಟ್ರೆಂಚ್ ತೋಡುವುದು ಸೇರಿದಂತೆ ಹತ್ತಾರು ಕಾಮಗಾರಿಗಳನ್ನು ಆರಂಭಿಸಿದೆ. ಈ ಮೂಲಕ ರೈತರು, ಕೂಲಿಕಾರ್ಮಿಕರ ಬದುಕಲ್ಲಿ ಆಶಾಕಿರಣ ಮೂಡಿಸಿದೆ.
ಗುಡೇಕೋಟೆ ಗ್ರಾಮ ಪಂಚಾಯ್ತಿಯು ತನ್ನ ವ್ಯಾಪ್ತಿಯಲ್ಲಿ ಬರುವ 7 ಹಳ್ಳಿಗಳಲ್ಲಿ ಕೊರೊನಾ ವಿರುದ್ಧ ನಿರಂತರ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಿದೆ. ಸ್ಥಳೀಯ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರ ಜತೆ ಸೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಾದ ಗುಡೇಕೋಟೆ, ಕಸಾಪುರ, ಸಿಡೇಗಲ್ಲು, ಶ್ರೀಕಂಠಾಪುರ, ಶ್ರೀಕಂಠಾಪುರ ತಾಂಡ, ಲಿಂಗನಹಳ್ಳಿ ತಾಂಡ, ಯರ್ರೋಬಯ್ಯನಹಟ್ಟಿ ಜನತೆಗೆ ಉದ್ಯೋಗ ಖಾತ್ರಿ ಕೆಲಸದ ಜೊತೆಗೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ.
ಹಸಿದವರ ಹೊಟ್ಟಿ ತುಂಬಿಸಿದ ಚೌಡಾಪುರ ಗ್ರಾಮ ಪಂಚಾಯಿತಿ ಕೇವಲ ಗುಡೇಕೋಟೆ ಗ್ರಾಮ ಪಂಚಾಯಿತಿ ಮಾತ್ರವಲ್ಲ, ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯ್ತಿ ಕೂಡ ಕೊರೋನಾ ವಿರುದ್ದ ನಿರಂತರ ಹೋರಾಟ ಹಾಗೂ ಜಾಗೃತಿ ಮೂಡಿಸುವ ಜೊತೆಗೆ ಉಧ್ಯೋಗ ಖಾತ್ರಿ ಕಾಮಗಾರಿ ಆರಂಭಿಸಿ ಸ್ಥಳೀಯ ಕೂಲಿಕಾರ್ಮಿಕರಿಗೆ, ರೈತರಿಗೆ ಕೆಲಸ ನೀಡಿ ಅವರ ಬದುಕಲ್ಲಿ ಆಶಾ ಕಿರಣ ಮೂಡಿಸಿದೆ.
ಚೌಡಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೬ ಹಳ್ಳಿಗಳು ಬರುತ್ತಿದ್ದು, ಉಧ್ಯೋಗ ಖಾತ್ರಿಯಡಿ ಕ್ಯಾಸನಕೆರೆ,ಅಮಲಾಪುರ, ಸಿದ್ದಯ್ಯನಹಟ್ಟಿ ಹಾಗೂ ಟಿ.ಬಸಾಪುರ ಗ್ರಾಮಗಳಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಮಾಡುವ ಮೂಲಕ ಜೀವಜಲ ವೃದ್ಧಿಸುವ ಕಾಯಕ ಮಾಡಿ ಇತರರಿಗೆ ಮಾದರಿಯಾಗಿದೆ. ಜೊತೆಗೆ ಸ್ಥಳೀಯ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜನತೆಗೆ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ. -ಬಸವರಾಜ ಹರನಹಳ್ಳಿ.
Published On - 11:44 am, Sun, 21 June 20