ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ ಮತ್ತು ಭ್ರಷ್ಟಾಚಾರದ(Corruption) ಆರೋಪದ ಮೇಲೆ ಇಂದು(ಜೂನ್ 17) ಬೆಳ್ಳಂಬೆಳಗ್ಗೆ ಎಸಿಬಿ(ACB) ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ರಾಜ್ಯಾದ್ಯಂತ 21 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಕೆಲ ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ನೋಟುಗಳು, ಚಿನ್ನಾಭರಣಗಳು ಪತ್ತೆಯಾಗಿವೆ.
ಬಾಗಲಕೋಟೆ RTO ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆ ಮೇಲೆ ಎಸಿಬಿ ರೇಡ್ ಆಗಿದ್ದು ಧಾರವಾಡದ ಲಕಮನಹಳ್ಳಿ ಕೆಎಚ್‌ಬಿ ಕಾಲೋನಿಯ ಮನೆಯಲ್ಲಿ 3 ಚಿನ್ನದ ನಾಣ್ಯ, 2 ಬೆಳ್ಳಿ ನಾಣ್ಯ ಸೇರಿದಂತೆ ಒಟ್ಟು 16 ಲಕ್ಷ ಹಣ, ಬಂಗಾರದ ಡಾಬು, 250 ಗ್ರಾಂ ಬಂಗಾರ, 400 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಅಪಾರ ಪ್ರಮಾಣದ ನಗದು ಪತ್ತೆಯಾದ ಹಿನ್ನೆಲೆ ನಗದು ತುಂಬಿಕೊಂಡ ಹೋಗಲು ಎಸಿಬಿ ಅಧಿಕಾರಿಗಳು ಕಬ್ಬಿಣದ ಟ್ರಂಕ್ ತರೆಸಿದ್ದಾರೆ. ಇನ್ನು ಬಾಗಲಕೋಟೆ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರ ಗೋಗಿ ನಿವಾಸದಲ್ಲಿ 1 ಲಕ್ಷ 15 ಸಾವಿರ ರೂ. ನಗದು ಹಣ ಪತ್ತೆಯಾಗಿದೆ. ಅಲ್ಲದೆ ಬಂಗಾರದ ಒಡವೆ, ಚಿನ್ನದ ಸರ, ಬೆಳ್ಳಿಯ ಗಣಪತಿ, ಬೆಳ್ಳಿಯ ಚೆಂಬು, ಲೋಟ, ನಗದು ಪತ್ತೆಯಾಗಿದೆ. ಮಗನ ಹೆಸರಿನಲ್ಲಿ 8 ಲಕ್ಷ 90 ಸಾವಿರ ರೂ ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿದೆ. ಸದ್ಯ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರೆಸಿದ್ದಾರೆ. ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಸಣ್ಣ ನೀರಾವರಿ ಇಲಾಖೆ ಎ.ಇ ಹರೀಶ್ ಮನೆಯಲ್ಲಿ ಅಪಾರ ಚಿನ್ನಾಭರಣ, ಕಂತೆ ಕಂತೆ ಹಣ ಪತ್ತೆಯಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ನಕಲಿ ಬ್ರಾಂಡ್ ದಂಧೆ ಪತ್ತೆ; ಬ್ರಾಂಡೆಡ್ ಪ್ರಾಡಕ್ಟ್ ನಕಲಿ ಮಾಡಿ ಮಾರಾಟ, ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ
ಸಣ್ಣ ನೀರಾವರಿ ಇಲಾಖೆ ಎಇ ಹರೀಶ್ ಮನೆಯಲ್ಲಿ ಸುಮಾರು 5 ಲಕ್ಷ ರೂಪಾಯಿ ನಗದು, ದುಬಾರಿ ಬೆಲೆಯ ವಾಚ್ಗಳು, ಮೂರು ವಾಹನ, ಚಿನ್ನದ ತಟ್ಟೆ ಸೇರಿದಂತೆ ಅಪಾರ ಚಿನ್ನಾಭರಣ ಪತ್ತೆಯಾಗಿದೆ. 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಸರ, ನಕ್ಲೇಸ್, ಬ್ರಾಸ್ ಲೈಟ್, ಚಿನ್ನದ ಒಡವೆ, ಉಂಗುರ, ದೇವರ ಮೂರ್ತಿ ಪತ್ತೆಯಾಗಿದ್ದು ಆಸ್ತಿ ಪತ್ರ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಿ.ವೈ.ಪವಾರ್‌ರನ್ನು ಕಚೇರಿಗೆ ಕರೆದೊಯ್ದ ಎಸಿಬಿ ಅಧಿಕಾರಿಗಳು
ಬೆಳಗಾವಿಯಲ್ಲಿ PWD ಇಲಾಖೆ ಅಧಿಕಾರಿ ಮನೆ ಮೇಲೆ ದಾಳಿ ನಡೆದಿದ್ದು ದಾಳೆ ವೇಳೆ ನಿವಾಸದಲ್ಲಿ ಮಹತ್ವದ ದಾಖಲೆ ಪತ್ತೆ ಹಿನ್ನೆಲೆ PWD ಇಲಾಖೆ ಅಧೀಕ್ಷಕ ಬಿ.ವೈ.ಪವಾರ್‌ರನ್ನು ಕಚೇರಿಗೆ ಕರೆದೊಯ್ದ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ನಿವಾಸದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಕ್ಯಾಷ್ ಪತ್ತೆಯಾಗಿದ್ದು ಬಿ.ವೈ.ಪವಾರ್ ಮನೆಯ ಬಾತ್ರೂಮ್ನಲ್ಲಿ 5 ಲಕ್ಷ ಪತ್ತೆಯಾಗಿದೆ.
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ಅವರ ಕಲಬುರಗಿ ಕೆಹೆಚ್ಬಿ ಕಾಲೋನಿಯ ಮನೆಯಲ್ಲಿ ಅನೇಕ ಆಸ್ತಿ ಖರೀದಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಕೋಟಿ ಕೋಟಿ ಆಸ್ತಿ ಸಂಪಾದಿಸಿರುವ ತಿಪ್ಪಣ್ಣ ಸಿರಸಗಿ ಗ್ರಾಮದಲ್ಲಿ 5 ಎಕರೆ ಜಮೀನು ಖರೀದಿ ಮಾಡಿದ್ದಾರೆ. ತಾಯಿ ಹೆಸರಿನಲ್ಲಿ 5 ಎಕರೆ ಜಮೀನು ಇದೆ. ತೋಟದ ಮನೆ ನಿರ್ಮಾಣ, ಒಂದು ಸೈಟ್ ಖರೀದಿ ಹಾಗೂ ಕೆಹೆಚ್ಬಿ ಕಾಲೋನಿಯಲ್ಲಿ ಒಂದು ಸೈಟ್ ಖರೀದಿ ಮಾಡಿದ್ದಾರೆ.
ಬಿಡಿಎ ಗ್ರೂಪ್ ಸಿ ನೌಕರನ ಬಳಿ ಇದೆ ಕೋಟಿ ಕೋಟಿ ಬೆಲೆ ಬಾಳುವ ಮೂರು ಮನೆಗಳು
ಬಿಡಿಎ ಗ್ರೂಪ್ ಸಿ ನೌಕರ ಶಿವಲಿಂಗಯ್ಯ ಬಳಿ ಬೆಂಗಳೂರಿನಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಮೂರು ಮನೆಗಳಿವೆ. ಜೆಪಿನಗರ, K.S.ಲೇಔಟ್, ದೊಡ್ಡಕಲ್ಲಸಂದ್ರದಲ್ಲಿ 3 ಮನೆ ಹೊಂದಿರುವ ಶಿವಲಿಂಗಯ್ಯ ತನ್ನ ಪತ್ನಿ ಪೂರ್ಣಿಮಾ ಹೆಸರಲ್ಲಿ ಅಕ್ರಮ ಸಂಪಾದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪತ್ನಿ ಹೆಸರಿನಲ್ಲಿಯೂ ಕೋಟ್ಯಂತರ ರೂ. ಸಂಪಾದನೆ ಮಾಡಿದ್ದಾರೆ. ಜೆ.ಪಿ.ನಗರದಲ್ಲಿ ಪತ್ನಿ ಪೂರ್ಣಿಮಾ ಹೆಸರಿನಲ್ಲಿ ಬಿಡಿಎ ಸೈಟ್ ಇಟ್ಟಿದ್ದಾರೆ. ಪತ್ನಿ ಹೆಸರಲ್ಲಿರುವ ಮನೆ 1 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:31 am, Fri, 17 June 22