Accident ಬೈಕ್ ಅಪಘಾತಕ್ಕೆ ರಾಂಪುರ ಗ್ರಾ.ಪಂ. ಪಿಡಿಒ ಬಲಿ, ನಾಲ್ಕು ಕಡೆ ಪ್ರತ್ಯೇಕ ಅವಘಡಗಳು, ಒಟ್ಟು 4 ಮಂದಿ ಸಾವು

|

Updated on: Mar 19, 2021 | 10:02 AM

ದಾವಣಗೆರೆ, ಚಿತ್ರದುರ್ಗ, ಮೈಸೂರಿನಲ್ಲಿ ಪ್ರತ್ಯೇಕ ಅಪಘಾತಗಳಾಗಿದ್ದು ಓರ್ವರು ಮೃತಪಟ್ಟಿದ್ದಾರೆ. ಹಾಗೂ ಹೋಟೆಲ್‌ನಲ್ಲಿ ಅಡುಗೆ ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದ್ದು ವೃದ್ಧೆ ಸಜೀವ ದಹನ, ಅಂಗಡಿ, 6 ಗುಡಿಸಲು ಸುಟ್ಟು ಭಸ್ಮವಾಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ್​ನಲ್ಲಿ ಸಂಭವಿಸಿದೆ.

Accident ಬೈಕ್ ಅಪಘಾತಕ್ಕೆ ರಾಂಪುರ ಗ್ರಾ.ಪಂ. ಪಿಡಿಒ ಬಲಿ, ನಾಲ್ಕು ಕಡೆ ಪ್ರತ್ಯೇಕ ಅವಘಡಗಳು, ಒಟ್ಟು 4 ಮಂದಿ ಸಾವು
ರಾಂಪುರ ಗ್ರಾ.ಪಂ. ಪಿಡಿಒ ಎಸ್.ಕರಿಸಿದ್ದಪ್ಪ ಮತ್ತು ಚಿತ್ರದುರ್ಗದಲ್ಲಿ ನಡೆದ ಬೈಕ್ ಅಪಘಾತ
Follow us on

ದಾವಣಗೆರೆ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಪಿಡಿಒ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರದಲ್ಲಿ ನಡೆದಿದೆ. ರಾಂಪುರ ಗ್ರಾ.ಪಂ. ಪಿಡಿಒ ಎಸ್.ಕರಿಸಿದ್ದಪ್ಪ(58) ಮೃತಪಟ್ಟಿದ್ದಾರೆ. ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಪಿಡಿಒಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಓರ್ವ ಸಾವು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಓರ್ವ ಸಾವು

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾನೆ. ಬೈಕ್ ಸವಾರ ಹಿರೇಕಂದವಾಡಿಯ ಓಬಳೇಶ್(26) ಮೃತ ದುರ್ದೈವಿ. ಬೈಕ್ ಹಿಂಬದಿ ಕುಳಿತಿದ್ದ ಓಬಳೇಶ(24), ರಮೇಶ್ (30)ಗೆ ಗಂಭೀರ ಗಾಯಗಳಾಗಿದ್ದು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿತ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಾದಚಾರಿಗೆ ಆಟೋ‌ ಡಿಕ್ಕಿ ವ್ಯಕ್ತಿ ಸಾವು
ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವ್ಯಾಪ್ತಿಯ ಚಿಕ್ಕ ಹುಣಸೂರು ಕ್ರಾಸ್‌ನಲ್ಲಿ ಆಟೋ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟಿದ್ದಾರೆ. ಚಿಕ್ಕ ಹುಣಸೂರು ನಿವಾಸಿ ಪ್ರಕಾಶ್(57) ಮೃತ ದುರ್ದೈವಿ. ಅಪಘಾತದ ಬಳಿಕ ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಟೆಲ್‌ನಲ್ಲಿ ಅಡುಗೆ ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದ್ದು ವೃದ್ಧೆ ಸಜೀವ ದಹನ, ಅಂಗಡಿ, 6 ಗುಡಿಸಲು ಸುಟ್ಟು ಭಸ್ಮವಾಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ್​ನಲ್ಲಿ ಸಂಭವಿಸಿದೆ. ಕಾಕಿನಾಡ್​ನ ಗಾಂಧಿ‌ ಪಾರ್ಕ್ ಬಳಿ‌ ಇಂದು‌ ಬೆಳಗಿನ‌ ಜಾವ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಹೊಟೆಲ್‌ವೊಂದರಲ್ಲಿ‌ 3 ಗ್ಯಾಸ್ ಸಿಲಿಂಡರ್​ಗಳು ಸ್ಫೋಟದಿಂದಾಗಿ ಘಟನೆ ಸಂಭವಿಸಿದೆ. ನಿದ್ದೆ ಮಾಡುತ್ತಿದ್ದ ತುಮ್ಮಲಪಲ್ಲಿ ಲಕ್ಷ್ಮಿ(65)ಎಂಬ ವೃದ್ಧೆ ಘಟನೆಯಲ್ಲಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಒಟ್ಟು 6ಸಿಲಿಂಡರ್​ಗಳು ಸ್ಫೋಟಗೊಂಡಿವೆ ಎಂದು ಹೇಳಲಾಗುತ್ತಿದೆ.

ಅಡುಗೆ ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದ್ದು ವೃದ್ಧೆ ಸಜೀವ ದಹನ,

ಅಡುಗೆ ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದ್ದು ವೃದ್ಧೆ ಸಜೀವ ದಹನ,

ಇದನ್ನೂ ಓದಿ: Road Accident ಬೆಂಗಳೂರು, ಚಿತ್ರದುರ್ಗದಲ್ಲಿ ಪ್ರತ್ಯೇಕ ಅಪಘಾತ.. ಪಾರ್ಟಿ ಮುಗಿಸಿ ಸ್ನೇಹಿತನ ಹೊಸ ಬೈಕ್​ ಏರಿದ್ದವ ಅಪಘಾತದಲ್ಲಿ ಸಾವು