Gold Silver Price: ಚಿನ್ನ ಕೊಳ್ಳಲು ಇಂದೇ ಶುಭ ಶುಕ್ರವಾರ.. ನೋಡಿ ಹೀಗಿದೆ ದರ !

Gold Silver Rate in Bengaluru: ಅಷ್ಟೊಂದು ದುಬಾರಿ ವಸ್ತುವನ್ನು ಕೊಳ್ಳಲು ಬಯಸಿದ್ದೀರಾ.. ಹಾಗಿದ್ದಾಗ ಶುಭ ಶುಕ್ರವಾರದಂದೇ ಖರೀದಿಸಿ. ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ವಿವರ ನಿಮ್ಮ ಮುಂದಿದೆ.

Gold Silver Price: ಚಿನ್ನ ಕೊಳ್ಳಲು ಇಂದೇ ಶುಭ ಶುಕ್ರವಾರ.. ನೋಡಿ ಹೀಗಿದೆ ದರ !
ಚಿನ್ನದ ಉಂಗುರು (ಸಂಗ್ರಹ ಚಿತ್ರ)
Follow us
shruti hegde
| Updated By: ಆಯೇಷಾ ಬಾನು

Updated on: Mar 19, 2021 | 8:52 AM

ಬೆಂಗಳೂರು: ಶುಕ್ರವಾರ ಚಿನ್ನವನ್ನು ಕೊಳ್ಳಲು ಒಳ್ಳೆಯ ದಿನ. ಸಾಂಪ್ರದಾಯಿಕವಾಗಿ ಒಳ್ಳೆಯ ಕೆಲಸವನ್ನು ಮಾಡುವಾಗ ಒಳ್ಳೆಯ ದಿನವನ್ನೂ ಸಹ ಹುಡುಕುತ್ತೇವೆ. ಇದರಿಂದ ಮನಸ್ಸಿನ ನೆಮ್ಮದಿಯ ಜೊತೆಗೆ ಕಾರ್ಯಸಿದ್ಧಿಯಾಗುತ್ತದೆ ಎಂಬ ನಂಬಿಕೆ. ಬೆಲೆ ಬಾಳುವ ವಸ್ತುವನ್ನು ಅಷ್ಟೊಂದು ದುಡ್ಡುಕೊಟ್ಟು, ಶುಭಕಾರ್ಯಗಳಿಗೋ ಅಥವಾ ವಿಶೇಷಕ್ಕೋ ಖರೀದಿಸುತ್ತೇವೆ. ಹಾಗಿದ್ದಾಗ ಶುಭ ದಿನದಂದು ಚಿನ್ನ ಕೊಳ್ಳುವುದು ಉತ್ತಮವಲ್ಲವೇ? ಒಮ್ಮೆ ಯೋಚಿಸಿ ಶುಭ ಶುಕ್ರವಾರದಂದೇ ಚಿನ್ನ ನಿಮ್ಮ ಕೈಸೇರಲಿ.

ಚಿನ್ನ, ಬೆಳ್ಳಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿನ್ನವನ್ನು ಅತಿ ಆಸೆಯಿಂದ ಖರೀದಿಸಬೇಕು ಎಂಬುದು ಎಲ್ಲರ ಆಸೆ. ಆದರೆ, ಕೊಳ್ಳಲು ದುಬಾರಿ. ಚಿನ್ನ ಕೊಳ್ಳಲೆಂದೇ ಅದೆಷ್ಟೋ ವರ್ಷಗಳಿಂದ ಹಣವನ್ನು ಕೂಡಿಡುತ್ತಾ ಬಂದಿರುತ್ತೇವೆ. ಹಾಗಿದ್ದಾಗ ಇದು ಉತ್ತಮ ಸಮಯ. ದೈನಂದಿನ ದರ ಬದಲಾವಣೆಯಲ್ಲಿ ಇಂದು ಚಿನ್ನ ಏರಿಕೆ ಕಂಡಂತೆ ಅನಿಸಿದರೂ, ವಾರ್ಷಿಕವಾಗಿ ನೋಡುವುದಾದರೆ ಚಿನ್ನ ಕುಸಿದಿದೆ. ಜೊತೆಗೆ ದರ ಕಡಿಮೆ ಇದ್ದಾಗಲೇ ಚಿನ್ನ ಕೊಳ್ಳುವುದು ಒಳಿತು ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

22 ಕ್ಯಾರೆಟ್ 10ಗ್ರಾಂ ಚಿನ್ನ ನಿನ್ನೆ 42,010 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 42,200 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 190 ರೂಪಾಯಿ ಏರಿಕೆ ಕಂಡಿದೆ. 24 ಕ್ಯಾರೆಟ್ 10ಗ್ರಾಂ ಚಿನ್ನ ನಿನ್ನೆ 45,830 ರೂಪಾಯಿಗೆ ಮಾರಾಟವಾಗಿತ್ತು. ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ 210 ರೂಪಾಯಿ ಏರಿಕೆ ಕಂಡಿದೆ. ಇಂದು ದರ 46,040 ರೂಪಾಯಿ ಆಗಿದೆ. ಇನ್ನು, ಬೆಳ್ಳಿ ದರವನ್ನು ಪರಿಶೀಲಿಸಿದಾಗ ದರ ಇಳಿಕೆಯತ್ತ ಸಾಗಿದ್ದು, 1ಕೆಜಿ ಬೆಳ್ಳಿ ದರ ನಿನ್ನೆ 67,800 ರೂಪಾಯಿಗೆ ಮಾರಾಟವಾಗಿತ್ತು, ಇಂದು ದರ 67,700 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಇಳಿಕೆ ಕಂಡು ಬಂದಿದೆ.

22 ಕ್ಯಾರೆಟ್ ಚಿನ್ನ ವಿವರ ಚಿನ್ನ ದರದಲ್ಲಿ ಇಂದು ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ಕೊಂಚ ಏರಿಕೆ ಕಂಡಿದೆ. 1ಗ್ರಾಂ ಚಿನ್ನ ದರ ನಿನ್ನೆ 4,201 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,220 ರೂಪಾಗಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,608 ರೂಪಾಯಿ ಆಗಿದ್ದು ದರ ಏರಿಕೆಯ ನಂತರ 33,760 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 42,010 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ42,200 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,20,100 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 4,22,000 ರೂಪಾಯಿ ಆಗಿದೆ.

24 ಕ್ಯಾರೆಟ್ ಚಿನ್ನ ವಿವರ 1ಗ್ರಾಂ ಚಿನ್ನ ನಿನ್ನೆ 4,583 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 4,604 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,664 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 36,832 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,830 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 46,040 ರೂಪಾಯಿ ಆಗಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,58,300 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ4,58,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,100 ರೂಪಾಯಿ ಏರಿಕೆ ಕಂಡಿದೆ.

ಬೆಳ್ಳಿ ದರ ಮಾಹಿತಿ 1ಗ್ರಾಂ ಬೆಳ್ಳಿ ನಿನ್ನೆ 67.80 ರೂಪಾಯಿಗೆ ಮಾರಾಟವಾಗಿತ್ತು. ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ಕೊಂಚ ಇಳಿಕೆ ಕಂಡಿದೆ. ಇಂದು ದರ 67.70 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ನಿನ್ನೆ 542 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 541 ರೂಪಾಯಿ ಆಗಿದೆ. 10 ಗ್ರಾ ಬೆಳ್ಳಿ ದರ ನಿನ್ನೆ 678 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 677 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,780 ರೂಪಾಯಿಗೆ ಮಾರಾಟವಾಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ 10 ರೂಪಾಯಿಯಷ್ಟು ಇಳಿಕೆ ಕಂಡಿದೆ. ಇಂದಿನ ದರ 6.770 ರೂಪಾಯಿ ಆಗಿದೆ. 1ಕೆಜಿ ಬೆಳ್ಳಿಯನ್ನು ನಿನ್ನೆ 67,800 ರೂಪಾಯಿಗೆ ಗ್ರಾಹಕರು ಖರೀದಿಸಿದ್ದರು. ದರದಲ್ಲಿ 100 ರೂಪಾಯಿಯಷ್ಟು ಇಳಿಕೆ ಕಂಡಿದ್ದು, ಇಂದಿನ ದರ 67,700 ರೂಪಾಯಿ ಆಗಿದೆ.

ಇದನ್ನೂ ಓದಿ: Gold Silver Price: ಚಿನ್ನ ಕೊಳ್ಳಬೇಕು ಅನಿಸಿದಾಗ ಖರೀದಿಸಿ .. ದರ ಹೀಗಿದೆ!

Gold Silver Price: ಚಿನ್ನ ದರದಲ್ಲಿ ಏರಿಕೆಯೂ ಇಲ್ಲ.. ಇಳಿಕೆಯೂ ಇಲ್ಲ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್