ಗುಣಮುಖನಾಗಿದ್ದ ವ್ಯಕ್ತಿಗೆ ಕೊರೊನಾ? ಮಹದೇವ್‌ ಪ್ರಸಾದ್ ನಗರ ಸೀಲ್‌ಡೌನ್

|

Updated on: Jun 20, 2020 | 10:28 AM

ಚಾಮರಾಜನಗರದಲ್ಲಿ ಗುಣಮುಖನಾಗಿದ್ದ ವ್ಯಕ್ತಿಗೆ ಮತ್ತೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ವಕ್ಕರಿಸಿರೋ ಆತಂಕ ಶುರುವಾಗಿದೆ. ಗುಂಡ್ಲುಪೇಟೆ ಪಟ್ಟಣದ ಮಹದೇವ್‌ ಪ್ರಸಾದ್ ನಗರ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. 10 ಮಂದಿಗೆ ಕ್ರೂರಿ ಪಾಸಿಟಿವ್? ಕಲಬುರಗಿಯಲ್ಲಿಂದು 10ಕ್ಕೂ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್ ಬರೋ ಶಂಕೆ ವ್ಯಕ್ತವಾಗಿದೆ. ಜಿಮ್ಸ್‌ನ ನರ್ಸ್, ಡಿ ಗ್ರೂಪ್ ನೌಕರನಿಗೆ ಕೊರೊನಾ ಶಂಕೆ ಇದೆ. ಕಲಬುರಗಿಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿರೋದು ಆತಂಕ ಹೆಚ್ಚಿಸಿದೆ. ಐವರು ಗರ್ಭಿಣಿಯರಿಗೆ ಸೋಂಕು […]

ಗುಣಮುಖನಾಗಿದ್ದ ವ್ಯಕ್ತಿಗೆ ಕೊರೊನಾ? ಮಹದೇವ್‌ ಪ್ರಸಾದ್ ನಗರ ಸೀಲ್‌ಡೌನ್
Follow us on

ಚಾಮರಾಜನಗರದಲ್ಲಿ ಗುಣಮುಖನಾಗಿದ್ದ ವ್ಯಕ್ತಿಗೆ ಮತ್ತೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ವಕ್ಕರಿಸಿರೋ ಆತಂಕ ಶುರುವಾಗಿದೆ. ಗುಂಡ್ಲುಪೇಟೆ ಪಟ್ಟಣದ ಮಹದೇವ್‌ ಪ್ರಸಾದ್ ನಗರ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.

10 ಮಂದಿಗೆ ಕ್ರೂರಿ ಪಾಸಿಟಿವ್?
ಕಲಬುರಗಿಯಲ್ಲಿಂದು 10ಕ್ಕೂ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್ ಬರೋ ಶಂಕೆ ವ್ಯಕ್ತವಾಗಿದೆ. ಜಿಮ್ಸ್‌ನ ನರ್ಸ್, ಡಿ ಗ್ರೂಪ್ ನೌಕರನಿಗೆ ಕೊರೊನಾ ಶಂಕೆ ಇದೆ. ಕಲಬುರಗಿಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿರೋದು ಆತಂಕ ಹೆಚ್ಚಿಸಿದೆ.

ಐವರು ಗರ್ಭಿಣಿಯರಿಗೆ ಸೋಂಕು
ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ 12 ಜನರಿಗೆ ಕೊರೊನಾ ದೃಢವಾಗಿದ್ದು, ಒಟ್ಟು 12 ಜನರ ಪೈಕಿ ಐವರು ಸೋಂಕಿತರು ಗರ್ಭಿಣಿಯರು ಅನ್ನೋ ಶಾಕಿಂಗ್ ಸತ್ಯ ಬಯಲಾಗಿದೆ. ಐವರ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತದಿಂದ ಟ್ರಾವೆಲ್ ಹಿಸ್ಟರಿ ಪತ್ತೆ ಕಾರ್ಯ ನಡೀತಿದೆ

ಕರ್ನಾಟಕದ ಕ್ರಮಕ್ಕೆ ಮೆಚ್ಚುಗೆ
ಕರುನಾಡಲ್ಲಿ ಕೊರೊನಾ ಕಂಟ್ರೋಲ್​ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕರ್ನಾಟಕದ ಕಾಂಟ್ಯಾಕ್ಟ್ ಟ್ರೇಸಿಂಗ್, ಮನೆ ಮನೆ ಸರ್ವೆಗೆ ಕೇಂದ್ರ ಶ್ಲಾಘಿಸಿದೆ. ಈ 2 ಮಾದರಿಯಗಳನ್ನ ಎಲ್ಲ ರಾಜ್ಯಗಳು ಅಳವಡಸಿಕೊಳ್ಳಲು ಸೂಚಿಸಲಾಗಿದೆ.

341 ಪ್ರಯಾಣಿಕರಿಗೆ ಸೋಂಕು
ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಿದ್ದ 12 ಲಕ್ಷದ 40 ಸಾವಿರ ಜನರ ಪೈಕಿ 341 ಜನರಿಗೆ ಕೊರೊನಾ ದೃಢವಾಗಿದೆ. ಮೇ 25 ರಿಂದ ಜೂನ್ 15ರವರೆಗೆ ವಿಮಾನದಲ್ಲಿ ಪ್ರಯಾಣಿಸಿದ್ರು. ಆದ್ರೆ, ಶೇಕಡಾ 0.03ರಷ್ಟು ಜನರಿಗೆ ಮಾತ್ರ ಕೊರೊನಾ ದೃಢವಾಗಿದೆಯಂತೆ.

ರೋಬೋಟ್​ ಸೇವೆ
ಅಸ್ಸಾಂನ ಗುವಾಹಟಿಯಲ್ಲಿನ ಹೋಟೆಲ್ ಮಾಲೀಕರೊಬ್ರು ರೋಬೋಟಿಕ್ ತಂತ್ರಜ್ಞಾನ ತಯಾರಿಸಿದ್ದಾರೆ. ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ರೋಗಿ ಬಳಿ ತೆರಳೋ ರೋಬೋಟ್​​ ಸರ್ವೀಸ್ ಮಾಡ್ತಿದೆ. ಅಲ್ಲದೇ ಕೊವಿಡ್ ಬಗ್ಗೆ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ ನೀಡುತ್ತದೆ.

ಸಲೂನ್​ನಲ್ಲಿ ಮುನ್ನೆಚ್ಚರಿಕೆ ಕ್ರಮ
ಮಧ್ಯಪ್ರದೇಶ ಮಧ್ಯಪ್ರದೇಶದಲ್ಲಿ ಸಲೂನ್​​ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ. ಕಟ್ಟುನಿಟ್ಟಿನ ಗೈಡ್​ಲೈನ್ಸ್ ಪಾಲನೆಗೆ ಆದೇಶ ಹಿನ್ನೆಲೆಯಲ್ಲಿ ಸಲೂನ್​​ಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಹರಡದಂತೆ ಎಚ್ಚರಿಕೆ ವಹಿಸಲಾಗಿದೆ