ತಿಹಾರ್ ಜೈಲಿನಲ್ಲಿ ಶಿವಕುಮಾರ್ -ಅಹ್ಮದ್ ಪಟೇಲ್​ ಭೇಟಿ, ಡಿಕೆ ಸುರೇಶ್​ ಸಾಥ್​

|

Updated on: Sep 26, 2019 | 12:00 PM

ದೆಹಲಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ನಿನ್ನೆ ತಿರಸ್ಕರಿಸಿದೆ. ಈ ಬೆನ್ನಲ್ಲೆ ಇಂದು ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಅಹ್ಮದ್​ ಪಟೇಲ್​ ತಿಹಾರ್ ಜೈಲ್ ಗೆ ಆಗಮಿಸಿ ಡಿಕೆಶಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ತೊಡಗಿದ್ದಾರೆ. ಡಿಕೆಶಿ ಸೋದರ ಡಿಕೆ ಸುರೇಶ್​ ಅವರೂ ಅಹ್ಮದ್​ ಪಟೇಲ್ ಜೊತೆಗೂಡಿದ್ದಾರೆ.             ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರರನ್ನ ಸೆಪ್ಟೆಂಬರ್ […]

ತಿಹಾರ್ ಜೈಲಿನಲ್ಲಿ ಶಿವಕುಮಾರ್ -ಅಹ್ಮದ್ ಪಟೇಲ್​ ಭೇಟಿ, ಡಿಕೆ ಸುರೇಶ್​ ಸಾಥ್​
Follow us on

ದೆಹಲಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ನಿನ್ನೆ ತಿರಸ್ಕರಿಸಿದೆ. ಈ ಬೆನ್ನಲ್ಲೆ ಇಂದು ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಅಹ್ಮದ್​ ಪಟೇಲ್​ ತಿಹಾರ್ ಜೈಲ್ ಗೆ ಆಗಮಿಸಿ ಡಿಕೆಶಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ತೊಡಗಿದ್ದಾರೆ. ಡಿಕೆಶಿ ಸೋದರ ಡಿಕೆ ಸುರೇಶ್​ ಅವರೂ ಅಹ್ಮದ್​ ಪಟೇಲ್ ಜೊತೆಗೂಡಿದ್ದಾರೆ.

 

 

 

 

 

 

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರರನ್ನ ಸೆಪ್ಟೆಂಬರ್ 3 ರಂದು ಬಂಧನಕ್ಕೆ ಒಳಪಡಿಸಿತ್ತು.  ಪ್ರಸ್ತುತ  ಡಿಕೆಶಿ ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮೊನ್ನೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಿಹಾರ್ ಜೈಲಿಗೆ ಭೇಟಿ ನೀಡಿದ್ದರು. ಆ ವೇಳೆ, ಪಿ ಚಿದಂಬರಂ ಅವರನ್ನ ಭೇಟಿಯಾಗಿದ್ದು, ಡಿಕೆಶಿ ಯನ್ನ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.  ಆದರೆ ಇಂದು ಅಹ್ಮದ್​ ಪಟೇಲ್, ಡಿಕೆಶಿಯನ್ನ ಭೇಟಿಯಾಗಲಿದ್ದಾರೆ.

Published On - 11:53 am, Thu, 26 September 19