Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಜ್ಯುವೆಲ್ಲರಿಗೆ ಕನ್ನ ಹಾಕಿದ್ದು ಕೇರಳ, ಅಫ್ಘಾನ್ ದರೋಡೆಕೋರರು!

ಮಂಗಳೂರು: ಮಂಗಳೂರಿನ ಭವಂತಿ ಬೀದಿಯಲ್ಲಿರುವ ಅರುಣ್ ಜುವೆಲ್ಲರಿಯಲ್ಲಾದ ದರೋಡೆ ಪ್ರಕರಣಕ್ಕೆ ಈಗ ಮಹತ್ವದ ಸುಳಿವು ಸಿಕ್ಕಿದೆ. ಕಳೆದ 22 ದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣದಲ್ಲಿ ಒಂದು ಕೋಟಿ ಮೌಲ್ಯದ ಮೂರು ಕೆಜಿ ಚಿನ್ನ ಹಾಗೂ 20 ಕೆ.ಜಿ ಬೆಳ್ಳಿ ದರೋಡೆಯಾಗಿತ್ತು.  ಈಗ ಈ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಜ್ಯುವೆಲ್ಲರಿ ದರೋಡೆಗೆ ಅಫ್ಘಾನಿಸ್ತಾನದ ಲಿಂಕ್: ಒಂದು ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದಿಯಲು ದರೋಡೆ ಕೋರರು ದೊಡ್ಡ ಪ್ಲಾನೇ ಮಾಡಿದ್ದರು. ನಟೋರಿಯಸ್ ಕ್ರಿಮಿನಲ್ ಟೀಂನಿಂದ […]

ಮಂಗಳೂರು ಜ್ಯುವೆಲ್ಲರಿಗೆ ಕನ್ನ ಹಾಕಿದ್ದು ಕೇರಳ, ಅಫ್ಘಾನ್ ದರೋಡೆಕೋರರು!
Follow us
ಸಾಧು ಶ್ರೀನಾಥ್​
|

Updated on:Sep 26, 2019 | 4:31 PM

ಮಂಗಳೂರು: ಮಂಗಳೂರಿನ ಭವಂತಿ ಬೀದಿಯಲ್ಲಿರುವ ಅರುಣ್ ಜುವೆಲ್ಲರಿಯಲ್ಲಾದ ದರೋಡೆ ಪ್ರಕರಣಕ್ಕೆ ಈಗ ಮಹತ್ವದ ಸುಳಿವು ಸಿಕ್ಕಿದೆ. ಕಳೆದ 22 ದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣದಲ್ಲಿ ಒಂದು ಕೋಟಿ ಮೌಲ್ಯದ ಮೂರು ಕೆಜಿ ಚಿನ್ನ ಹಾಗೂ 20 ಕೆ.ಜಿ ಬೆಳ್ಳಿ ದರೋಡೆಯಾಗಿತ್ತು.  ಈಗ ಈ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಜ್ಯುವೆಲ್ಲರಿ ದರೋಡೆಗೆ ಅಫ್ಘಾನಿಸ್ತಾನದ ಲಿಂಕ್: ಒಂದು ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದಿಯಲು ದರೋಡೆ ಕೋರರು ದೊಡ್ಡ ಪ್ಲಾನೇ ಮಾಡಿದ್ದರು. ನಟೋರಿಯಸ್ ಕ್ರಿಮಿನಲ್ ಟೀಂನಿಂದ ಈ ದರೋಡೆಯ ಸಂಚು ರೂಪಿಸಲಾಗಿತ್ತು. ಭೂಗತ ಜಗತ್ತಿನ ನೇರ ಸಂಪರ್ಕ ಹೊಂದಿದ್ದ ಕೇರಳ ಮೂಲದ ನಟೋರಿಯಸ್ ರೌಡಿ ಮುತ್ತಾಸಿಮ್ ಅಲಿಯಾಸ್ ತಸ್ಲಿಮ್,  ಅಫ್ಘಾನಿಸ್ತಾನ ಮೂಲದ ವಾಲಿ ಮಹಮ್ಮದ್ ಶಮಿ, ಮತ್ತು ಮಹಮ್ಮದ್ ಅಜೀಂ ಜೊತೆ ಸೇರಿದ ಮೂವರ ದರೋಡೆ ಕೋರರ ಗ್ಯಾಂಗ್  ಜುವೆಲ್ಲರಿ ಮಳಿಗೆಯ ಗೋಡೆ ಕೊರೆದು ಕಳ್ಳತನ ಮಾಡಿದ್ದಾರೆ. ಕಳ್ಳರು ಆಭರಣ ಅಂಗಡಿಯ ಲಾಕರ್ ಮುರಿಯಲು ವೆಲ್ಡಿಂಗ್ ಯಂತ್ರ, ಆಮ್ಲಜನಕ ಸಿಲಿಂಡರ್ ಮತ್ತು ಎಲ್ಪಿಜಿ ಸಿಲಿಂಡರ್ ಬಳಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಬಂಧಿತ ಆರೋಪಿಗಳನ್ನು ಸೆಪ್ಟೆಂಬರ್ 24 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ನಂತರ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ವಿಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಅಫಘಾನ್ ಪ್ರಜೆಗಳಿರುವುದರಿಂದ ಪ್ರೋಟೋಕಾಲ್ ಪ್ರಕಾರ ಅಫ್ಘಾನಿಸ್ತಾನ ರಾಯಭಾರ ಕಚೇರಿಗೆ ಬಂಧನದ ಬಗ್ಗೆ ವರದಿಯನ್ನು ರವಾನಿಸಬೇಕಿದೆ ಹಾಗಾಗಿ ಈಗ  ನವದೆಹಲಿಯ ಉಪ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ವರದಿಯನ್ನ ಕಳುಹಿಸಲಾಗಿದೆ.

Published On - 4:30 pm, Thu, 26 September 19