ಅನಗತ್ಯ ವೆಚ್ಚಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಬ್ರೇಕ್!
ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಹೋಗಿದ್ದವು. ಆದ್ರೆ ಕೇಂದ್ರ ಸರ್ಕಾರ ಮಾತ್ರ ರಾಜ್ಯಕ್ಕೆ ಬಿಡಿಗಾಸು ನೆರೆ ಪರಿಹಾರ ನೀಡಿಲ್ಲ. ಆದ್ರೆ ಸಿಎಂ ಬಿ.ಎಸ್.ಯಡಿಯೂರಪ್ಪ ಇದೀಗ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಆದಷ್ಟು ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಬಳಸದಿರಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಕುರಿತು ಸಚಿವರಿಗೂ ಅನಗತ್ಯ ವೆಚ್ಚ ಮಾಡದಂತೆ ಸಿಎಂ ಬಿಎಸ್ವೈ ಸೂಚಿಸಿದ್ದಾರೆ. ಹೆಲಿಕಾಪ್ಟರ್ ಹಾಗೂ ವಿಮಾನ ಬಳಸುವ ಬದಲು ಆದಷ್ಟು ರಸ್ತೆ ಪ್ರಯಾಣ ಮಾಡಲು ಬಿಎಸ್ವೈ ಮುಂದಾಗಿದ್ದು, […]
ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಹೋಗಿದ್ದವು. ಆದ್ರೆ ಕೇಂದ್ರ ಸರ್ಕಾರ ಮಾತ್ರ ರಾಜ್ಯಕ್ಕೆ ಬಿಡಿಗಾಸು ನೆರೆ ಪರಿಹಾರ ನೀಡಿಲ್ಲ. ಆದ್ರೆ ಸಿಎಂ ಬಿ.ಎಸ್.ಯಡಿಯೂರಪ್ಪ ಇದೀಗ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಆದಷ್ಟು ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಬಳಸದಿರಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಕುರಿತು ಸಚಿವರಿಗೂ ಅನಗತ್ಯ ವೆಚ್ಚ ಮಾಡದಂತೆ ಸಿಎಂ ಬಿಎಸ್ವೈ ಸೂಚಿಸಿದ್ದಾರೆ. ಹೆಲಿಕಾಪ್ಟರ್ ಹಾಗೂ ವಿಮಾನ ಬಳಸುವ ಬದಲು ಆದಷ್ಟು ರಸ್ತೆ ಪ್ರಯಾಣ ಮಾಡಲು ಬಿಎಸ್ವೈ ಮುಂದಾಗಿದ್ದು, ದೂರದ ಪ್ರಯಾಣಕ್ಕೆ ಮಾತ್ರ ವಿಮಾನ ಬಳಕೆಗೆ ಸಿಎಂ ಬಿಎಸ್ವೈ ನಿರ್ಧರಿಸಿದ್ದಾರೆ.
Published On - 12:45 pm, Fri, 27 September 19