ನಾಡಹಬ್ಬ ದಸರಾ: ಆನೆಗಳಿಗೆ 3ನೇ ಹಂತದ ಫಿರಂಗಿ ತಾಲೀಮು
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಶುರುವಾಗಲು ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ದಸರಾದ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳಿಗೆ ಮತ್ತು ಕುದುರೆಗಳಿಗೆ ಇಂದು 3ನೇ ಹಂತದ ಫಿರಂಗಿ ತಾಲೀಮು ನಡೆಸಲಾಗಿದೆ. ಮೈಸೂರಿನ ಅಂಬಾ ವಿಲಾಸ ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಶಸಸ್ತ್ರ ಮೀಸಲು ಪಡೆ ಸಿಬ್ಬಂದಿಯಿಂದ ಫಿರಂಗಿ ತಾಲೀಮು ನಡೆಸಲಾಗಿದೆ. 7 ಫಿರಂಗಿ ಗಾಡಿಗಳ ಮೂಲಕ 3 ಸುತ್ತುಗಳಲ್ಲಿ ಒಟ್ಟು 21 ಕುಶಾಲತೋಪು ಸಿಡಿಸಿ ಪೂರ್ವಾಭ್ಯಾಸ ನಡೆಸಲಾಗಿದೆ. ಈ ಮೂಲಕ ಆನೆಗಳಿಗೆ ಮತ್ತು ಕುದುರೆಗಳಿಗೆ […]
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಶುರುವಾಗಲು ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ದಸರಾದ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳಿಗೆ ಮತ್ತು ಕುದುರೆಗಳಿಗೆ ಇಂದು 3ನೇ ಹಂತದ ಫಿರಂಗಿ ತಾಲೀಮು ನಡೆಸಲಾಗಿದೆ.
ಮೈಸೂರಿನ ಅಂಬಾ ವಿಲಾಸ ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಶಸಸ್ತ್ರ ಮೀಸಲು ಪಡೆ ಸಿಬ್ಬಂದಿಯಿಂದ ಫಿರಂಗಿ ತಾಲೀಮು ನಡೆಸಲಾಗಿದೆ. 7 ಫಿರಂಗಿ ಗಾಡಿಗಳ ಮೂಲಕ 3 ಸುತ್ತುಗಳಲ್ಲಿ ಒಟ್ಟು 21 ಕುಶಾಲತೋಪು ಸಿಡಿಸಿ ಪೂರ್ವಾಭ್ಯಾಸ ನಡೆಸಲಾಗಿದೆ. ಈ ಮೂಲಕ ಆನೆಗಳಿಗೆ ಮತ್ತು ಕುದುರೆಗಳಿಗೆ ಭಾರಿ ಶಬ್ಧವನ್ನು ಪರಿಚಯಿಸಿದ್ದಾರೆ.
ಈಗಾಗಲೇ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ 12 ಆನೆಗಳು ಮತ್ತು 25 ಕುದುರೆಗಳಿಗೆ ಎರಡು ಬಾರಿ ಫಿರಂಗಿಗಳ ಶಬ್ಧ ಪರಿಚಯಿಸಿದ್ದಾರೆ. ಇದೀಗ 3ನೇ ಬಾರಿ ನಗರ ಪೊಲೀಸ್ ಆಯುಕ್ತ ಟಿ.ಬಾಲಕೃಷ್ಣ ನೇತೃತ್ವದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿಯಿಂದ ಫಿರಂಗಿ ತಾಲೀಮು ನಡೆದಿದೆ. ಬೆದರುವ ಲಕ್ಷಣಗಳಿರುವ 6 ಆನೆಗಳ ಕಾಲುಗಳನ್ನ ಸರಪಣಿಯಿಂದ ಕಟ್ಟಿ ಮುಂಜಾಗ್ರತೆ ವಹಿಸಿದ್ದಾರೆ.
Published On - 3:45 pm, Fri, 27 September 19