ಬಿಎಂಟಿಸಿ ಡ್ರೈವರ್​ಗೆ ಕುಡುಕರ ಕಿರಿಕ್, ಯುವಕರ ನಶೆ ಇಳಿಸಿದ ಪ್ರಯಾಣಿಕರು

  • TV9 Web Team
  • Published On - 13:33 PM, 28 Sep 2019
ಬಿಎಂಟಿಸಿ ಡ್ರೈವರ್​ಗೆ ಕುಡುಕರ ಕಿರಿಕ್, ಯುವಕರ ನಶೆ ಇಳಿಸಿದ ಪ್ರಯಾಣಿಕರು

ಬೆಂಗಳೂರು: ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್​ ಡ್ರೈವರ್ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ತಡರಾತ್ರಿ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ನಾಲ್ವರು ಯುವಕರು ರಸ್ತೆ ದಾಟುವಾಗ ಬಸ್​ಗೆ ಅಡ್ಡ ನಿಂತು ಚಾಲಕನಿಗೆ ಆವಾಜ್ ಹಾಕಿದ್ದಾರೆ. ಇದನ್ನ ಪ್ರಶ್ನಿಸಿದ ಡ್ರೈವರ್​ನನ್ನು ಥಳಿಸಿದ್ದಾರೆ. ಈ ವೇಳೆ ಬಸ್​ನಲ್ಲಿದ್ದ ಪ್ರಯಾಣಿಕರು ಚಾಲಕನ ನೆರವಿಗೆ ಬಂದಿದ್ದು, ಹಲ್ಲೆ ಮಾಡಿದವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾಲ್ವರು ಯವಕರಲ್ಲಿ ಮೂವರು ಪರಾರಿಯಾಗಿದ್ದು, ಓರ್ವ ಸಿಕ್ಕಿಬಿದ್ದಿದ್ದಾನೆ. ನಂತರ ಅದೇ ಬಸ್​ನಲ್ಲಿ ಆರೋಪಿಯನ್ನು ಕರೆದೋಯ್ದು ಉಪ್ಪಾರಪೇಟೆ ಪೊಲೀಸರ ವಶಕ್ಕೆ ಪ್ರಯಾಣಿಕರು ಒಪ್ಪಿಸಿದ್ದಾರೆ.