ಬೆಂಗಳೂರು: ಪ್ರಯಾಣಿಕನೊಬ್ಬ ಬೀಳಿಸಿದ್ದ ಚಿನ್ನದ ಬ್ರೇಸ್ಲೆಟ್ನ ಸಿಬ್ಬಂದಿ ಆತನಿಗೆ ಮರಳಿಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕ ಬೀಳಿಸಿದ್ದ 30 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ನ ಸಿಬ್ಬಂದಿ ಹಿಂದಿರುಗಿಸಿದ್ದಾರೆ.
ಏರ್ಪೋರ್ಟ್ ಟರ್ಮಿನಲ್ ಒಳ ಭಾಗದಲ್ಲಿ ಬಿದ್ದಿದ್ದ 30 ಗ್ರಾಂ ತೂಕದ ಬ್ರೇಸ್ಲೆಟ್ ಗಮನಿಸಿದ ಇಬ್ಬರು ಟ್ರಾಲಿ ಆಪರೇಟರ್ಗಳು ಕೂಡಲೇ ಅದನ್ನು ಭದ್ರತಾ ಪಡೆ ಮೂಲಕ ಮಾಲೀಕರಿಗೆ ಹಿಂದಿರುಗಿಸಿದರು. ಸಿಬ್ಬಂದಿಯ ಕಾರ್ಯ ವೈಖರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪೊಲೀಸರಿಂದ ಭರ್ಜರಿ ಬೇಟೆ: ನೈಜಿರಿಯಾ ಗ್ಯಾಂಗ್ ಅರೆಸ್ಟ್, ₹ 1 ಕೋಟಿ ಮೌಲ್ಯದ MDMA ಮಾತ್ರೆ ಜಪ್ತಿ