ಐಶ್ವರ್ಯಗೆ ಎಲ್ಲವೂ ಇತ್ತು ಆದರೆ ಯಾವುದನ್ನೂ ಅನುಭವಿಸಲಾರದೆ ಬದುಕಿಗೆ ವಿದಾಯ ಹೇಳಿದ್ದು ದುರಂತ

|

Updated on: Nov 03, 2023 | 11:36 AM

ಮಾಹಿತಿ ಪ್ರಕಾರ ರವೀಂದ್ರ ಹೆಸರಿನ ವ್ಯಕ್ತಿಯೊಬ್ಬ ಐಶ್ಚರ್ಯ ತಂದೆ ಸುಬ್ರಮಣಿಯೊಂದಿಗಿದ್ದ (Subramani) ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಐಶ್ವರ್ಯ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಐಶ್ವರ್ಯ-ರಾಜೇಶ್ ದಾಂಪತ್ಯದಲ್ಲಿ ಹುಳಿ ಹಿಂಡಿದ್ದ. ಐಶ್ವರ್ಯ ಚಾರಿತ್ರ್ಯದ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿದ್ದ ಮತ್ತು ರಾಜೇಶ್​ಗೆ ಮೇಸೇಜ್​ಗಳನ್ನು ಕಳಿಸುತ್ತಿದ್ದ.

ಬೆಂಗಳೂರು: ಅಕ್ಟೋಬರ್ 26 ರಂದು ನಗರದ ಗೋವಿಂದರಾಜ ನಗರದಲ್ಲಿರುವ ತನ್ನ ತಂದೆಯ ಮನೆಯಲ್ಲಿ 4-ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ನಹತ್ಯೆಗೆ ಶರಣಾದ ಐಶ್ವರ್ಯ (Aishwarya) ಸೌಂದರ್ಯ, ವಿದ್ಯೆ, ಐಶ್ವರ್ಯ-ಎಲ್ಲ ಇದ್ದರೂ ಸಂಸಾರದ ಸುಖ ಅನುಭವಿಸದೆ, ನೆಮ್ಮದಿಯ ಬದುಕು ನಡೆಸದೆ ಹೋಗಿದ್ದು ದೊಡ್ಡದ ದುರಂತ. ಅಕೆಯ ಸಾವಿಗೆ ಸಂಬಂಧಿಸಿದಂತೆ ಗೋವಿಂದರಾಜ ನಗರ ಪೊಲೀಸರು ಪತಿ ರಾಜೇಶ್ (Rajesh), ಮಾವ ಗಿರಿಯಪ್ಪ (Giriyappa), ಅತ್ತೆ ಸೀತಾ, ಮೈದುನ ವಿಜಯ್, ವಿಜಯ್ ಪತ್ನಿ ತಸ್ಮಿನ್ ಮೊದಲಾದವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ರವೀಂದ್ರ ಹೆಸರಿನ ವ್ಯಕ್ತಿಯೊಬ್ಬ ಐಶ್ಚರ್ಯ ತಂದೆ ಸುಬ್ರಮಣಿಯೊಂದಿಗಿದ್ದ (Subramani) ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಐಶ್ವರ್ಯ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಐಶ್ವರ್ಯ-ರಾಜೇಶ್ ದಾಂಪತ್ಯದಲ್ಲಿ ಹುಳಿ ಹಿಂಡಿದ್ದ. ಐಶ್ವರ್ಯ ಚಾರಿತ್ರ್ಯದ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿದ್ದ ಮತ್ತು ರಾಜೇಶ್​ಗೆ ಮೇಸೇಜ್ ಗಳನ್ನು ಕಳಿಸುತ್ತಿದ್ದ.

ಮೊದಲಿಗೆ ಎಲ್ಲವನ್ನು ಕಡೆಗಣಿಸಿದ್ದ ರಾಜೇಶ್ ಬಳಿಕ ರವೀಂದ್ರನ ಮೇಸೇಗಳನ್ನು ನಂಬಲಾರಂಭಿಸಿ ಅವನು ಮತ್ತು ಅವನ ಮನೆಯವರೆಲ್ಲ ಐಶ್ವರ್ಯಗೆ ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದರು. ಕಿರುಕುಳ ಸಹನೆ ಮೀರಲಾರಂಭಿಸಿದ ಬಳಿಕ ತೀವ್ರ ಹತಾಶೆ ಮತ್ತು ಮಾನಸಿಕ ಕ್ಷೋಭೆಗೊಳಗಾಗಿ ಗೋವಿಂದರಾಜ ನಗರದಲ್ಲಿರುವ ತಂದೆಯ ಮನೆಗೆ ಬಂದ ಐಶ್ವರ್ಯ ಅಂತಿಮವಾಗಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಶ್ವರ್ಯ ಗೋವಿಂದರಾಜ ನಗರ