ಬೆಂಗಳೂರು: ರಾಕ್ಷಸ ಮುಖದ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು, ಸೋಂಕಿತರಿಗೆ ನೆರವಾಗಲು ದೆಹಲಿ ಮತ್ತು ಹರಿಯಾಣ ಸರ್ಕಾರಗಳು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಅದರಲ್ಲೂ ಸೋಂಕಿತರನ್ನು ರವಾನಿಸುವ ಆಂಬುಲೆನ್ಸ್ ವಾಹನಗಳ ಉಪಟಳಕ್ಕೆ ಬ್ರೇಕ್ ಹಾಕಿವೆ. ಸೋಂಕಿತರನ್ನು ಯಾವುದೇ ಎಗ್ಗುಸಿಗ್ಗು ಇಲ್ಲದೆ ಸುಲಿಗೆ ಮಾಡುತ್ತಿದ್ದ ಆಂಬುಲೆನ್ಸ್ ಚಾಲಕರಿಗೆ ಕಡಿವಾಣ ಹಾಕಿದೆ.
ಈ ಎರಡು ರಾಜ್ಯಗಳಲ್ಲಿ ಆಂಬುಲೆನ್ಸ್ ಸೇವೆ ಗಗನಕುಸುಮವಾಗಿ, ಸೇವಾ ದರ ಗಗನಕ್ಕೆ ತಲುಪಿತ್ತು. ಅದರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಕೊನೆಗೆ ಎಚ್ಚೆತ್ತ ರಾಜ್ಯ ಸರ್ಕಾರಗಳು ಈ ಉಚಿತ ನಿರ್ಧಾರ ತೆಗೆದುಕೊಂಡಿವೆ. ಆದರೆ ಎಂದಿನಂತೆ ಆಂಬುಲೆನ್ಸ್ ಚಾಲಕರು ಈ ದರ ನಿಗದಿ ವಿರುದ್ಧ ಸೆಟೆದು ನಿಂತಿದ್ದಾರೆ. ಅಲ್ಲಲ್ಲಿ ಪ್ರತಿರೋಧವೊಡ್ಡುತ್ತಿದ್ದಾರೆ.
Ten thousand rupees for a distance of four kms. Ambulance rental in Delhi.
The world is watching us today. Not only the devastation but also our moral values. pic.twitter.com/dZoJpSbF6c
— Arun Bothra (@arunbothra) April 28, 2021
ಹರಿಯಾಣದಲ್ಲಿ ಆಂಬುಲೆನ್ಸ್ ಸುಲಿಗೆಗೆ ಬ್ರೇಕ್ ಹಾಕಿರುವ ಅಲ್ಲಿನ ರಾಜ್ಯ ಸರ್ಕಾರ ಆಂಬುಲೆನ್ಸ್ಗೆ ಪ್ರತಿ ಕಿ.ಮೀ.ಗೆ 13 ರೂ. ನಿಗದಿ ಮಾಡಿದೆ. ದೆಹಲಿಯಲ್ಲಿಯೂ ಇಂತಹುದೇ ಜನಪರ ನಿರ್ಧಾರ ತೆಗೆದುಕೊಂಡಿರುವ ಅಲ್ಲಿನ ರಾಜ್ಯ ಸರ್ಕಾರ, ಆಂಬುಲೆನ್ಸ್ ಸೌಲಭ್ಯದ ಆಧಾರದಲ್ಲಿ ದರ ನೀಡಲು ಬಳಕೆದಾರರಿಗೆ ಸೂಚಿಸಿದೆ.
3 ರೀತಿಯ ಆಂಬುಲೆನ್ಸ್ಗೆ ಮೂರು ಪ್ರತ್ಯೇಕ ದರ ನಿಗದಿ ಮಾಡಲಾಗಿದ್ದು, ರೋಗಿ ಸಾಗಿಸುವ ಸಾಮಾನ್ಯ ಆಂಬುಲೆನ್ಸ್ಗೆ 1,500 ರೂಪಾಯಿ, 10 ಕಿಲೋಮೀಟರ್ವರೆಗೆ 1,500 ರೂಪಾಯಿ ದರ ಮತ್ತು ನಂತರದ ಪ್ರತಿ ಕಿ.ಮೀ.ಗೆ ನೂರು ರೂಪಾಯಿ ದರ ನಿಗದಿ ಮಾಡಿವೆ. ಆಂಬುಲೆನ್ಸ್ ಚಾಲಕರ ಹಗಲು ದರೋಡೆಯಿಂದ ಬೇಸತ್ತಿದ್ದ ಸೋಂಕಿತರು ಇದನ್ನು ಕೇಳಿ ನಿಟ್ಟುಸಿರುಬಿಟ್ಟಿದ್ದಾರೆ.
ಅದೇ ಕರ್ನಾಟಕದಲ್ಲಿ ಇಂತಹ ದುಬಾರಿ,ಹಗಲುದರೋಡೆಗೆ ಯಾವಾಗಪ್ಪ ಕಡಿವಾಣ ಬೀಳುತ್ತದೆ ಎಂದು ಜನ ನಿಡುಸುಯ್ಯುತ್ತಲೇ ಇದ್ದಾರೆ. ಕರ್ನಾಟಕ ಸರ್ಕಾರವು ದೆಹಲಿ ಮತ್ತು ಹರಿಯಾಣ ಸರ್ಕಾರಗಳ ನಿರ್ಧಾರದಿಂದ ಎಚ್ಚೆತ್ತುಕೊಳ್ಳುತ್ತದಾ?
(Ambulance usage rates fixed in delhi and haryana but when it will be in karnataka)
ಹಾವೇರಿ: ಆಂಬುಲೆನ್ಸ್ ನೋಡ್ತಿದ್ದಂತೆ ಮನೆಯಿಂದ ಪರಾರಿಯಾಗಿ ಗದ್ದೆಯಲ್ಲಿ ಅಡಗಿಕೊಂಡ ಸೋಂಕಿತ