ಬೀದರ್: ಹಲವು ವರ್ಷಗಳಿಂದ ಬೀದರ್ ಹೊರವಲಯದ ಬೆಳ್ಳೂರಾ ಗ್ರಾಮದ ಸುತ್ತಮುತ್ತ ಜಾಗದಲ್ಲಿ ಕಾಡು ಪ್ರಾಣಿಗಳು ವಾಸವಾಗಿದ್ದವು. ಕೆರೆಯ ನೀರು ಕುಡಿದು, ಹುಲ್ಲನ್ನ ತಿಂದು ಯಾರ ಭಯವಿಲ್ಲದೆ ಓಡಾಡಿಕೊಂಡಿದ್ದವು. ಆದರೆ ಈ ಈಗ ಜಾಗಕ್ಕೆ ಲ್ಯಾಂಡ್ ಮಾಫಿಯಾ ಕಣ್ಣುಬಿದ್ದಿದ್ದು, ಜಾಗವನ್ನು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ಹಾಕಿದ್ದಾರೆ. ಕೆಐಡಿಬಿಯವರು ಕೂಡಾ ನೂರಾರು ಎಕರೆಯಷ್ಟು ಜಮೀನಿನ ಸುತ್ತಮುತ್ತಲೂ ತಂತಿ ಬೇಲಿ ಹಾಕಿದ್ದಾರೆ. ಇದರಿಂದ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತುಬಂದಿದ್ದು, ವಿನಾಶಕ್ಕೆ ಕಾರಣವಾಗುತ್ತಿದೆ.
ಬೀದರ್ನ ಹೊರವಲಯದಲ್ಲಿ ಬೆಳ್ಳೂರಾ ಗ್ರಾಮದ ಸುತ್ತಮುತ್ತ 650 ಎಕರೆಯಷ್ಟು ವಿಶಾಲವಾದ ಬಯಲು ಪ್ರದೇಶವಿತ್ತು. ಇದು ಸುಂದರವಾದ ಕೆರೆ, ಸಮೃದ್ಧ ಹುಲ್ಲುಗಾವಲು ಹೊಂದಿದ ಪ್ರದೇಶವಾಗಿತ್ತು. ಹೀಗಾಗಿ ಇಲ್ಲಿ ಎತ್ತೇಚ್ಛವಾಗಿ ಜಿಂಕೆ, ಕೃಷ್ಣಮೃಗಗಳು ವಾಸವಾಗಿದ್ದವು. ಆದರೆ ಈ ಜಾಗಕ್ಕೆ ಈಗ ಬಂಗಾರದ ಬೆಲೆ ಬಂದಿದ್ದು, ಜಾಗದ ಮೇಲೆ ಲ್ಯಾಂಡ್ ಮಾಫಿಯಾದವರ ಕಣ್ಣು ಬಿದ್ದಿದೆ. ಇದರ ಪರಿಣಾಮವಾಗಿ ಜಾಗವನ್ನು ಸಾರ್ವಜನಿಕರು ಒತ್ತುವರಿ ಮಾಡಿಕೊಂಡು ಸುತ್ತಮುತ್ತಲೂ ತಂತಿ ಬೇಲಿ ಹಾಕಿದ್ದಾರೆ. ಜೊತೆಗೆ ಈಗಾಗಲೇ ಕೆಐಡಿಬಿಯವರು ಇನ್ನೂರಾ ಐವತ್ತಕ್ಕೂ ಹೆಚ್ಚು ಎಕರೆಯಷ್ಟು ಪ್ರದೇಶವನ್ನ ವಶಪಡಿಸಿಕೊಂಡು ತಂತಿ ಬೇಲಿಯನ್ನ ಹಾಕಿದ್ದಾರೆ.
ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಾಗಿದ್ದ ಕಾಡು ಪ್ರಾಣಿಗಳು ಈಗ ಜಾಗ ಕಾಲಿ ಮಾಡುವ ಸಮಯ ಸನ್ನಿಹಿತವಾಗಿದೆ. ಲ್ಯಾಂಡ್ ಮಾಫಿಯಾದವರು ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ)ಯ ಕಾಮಗಾರಿಗಳು ಪ್ರಾಣಿಗಳ ತುತ್ತಿನ ಚೀಲವನ್ನೇ ಕಿತ್ತುಕೊಳ್ಳುತ್ತಿವೆ. ಪ್ರತಿ ನಿತ್ಯ ಬೆಳ್ಳಂಬೆಳಗ್ಗೆ ಬರುವ ಜಿಂಕೆ, ಕೃಷ್ಣಮೃಗಗಳು ನಮ್ಮ ಕಾಲ ಮುಗಿಯಿತೇ? ಎಂಬ ಆತಂಕವನ್ನ ಪ್ರಾಣಿಗಳು ಎದುರಿಸುವ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಕೂಡಲೇ ಇಲ್ಲಿನ ಕೆಲಸವನ್ನ ಬಂದ್ ಮಾಡಬೇಕು. ಪ್ರಾಣಿಗಳ ಸಂರಕ್ಷಣೆಗೆ ಒತ್ತು ಕೊಡಬೇಕೆಂದು ಬೀದರ್ನ ಪ್ರಾಣಿ ಪ್ರಿಯರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ!
ನೂರಾರು ವರ್ಷಗಳಿಂದ ಬೆಳ್ಳೂರಾ ಗ್ರಾಮದ ಸುತ್ತಮುತ್ತ ಕೃಷ್ಣಮೃಗ ಹಾಗೂ ಜಿಂಕೆಗಳು ವಾಸ ಮಾಡುತ್ತಿವೆ. ಇತ್ತೀಚಿನ ವನ್ಯ ಜೀವಿಗಳು ವಾಸ ಮಾಡುವ ಸ್ಥಳದಲ್ಲಿ ಕೆಐಡಿಬಿಯಿಂದ ಬೃಹತ್ ರಸ್ತೆಗಳು, ಹೈಮಾಸ್ಟ್ ವಿದ್ಯುತ್ ದೀಪಗಳು, ಚರಂಡಿ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನ ಮಾಡಲಾಗಿದೆ. ಈಗ ಮತ್ತೆ ನೂರಾರು ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ಕೆಐಡಿಯವರು ಬೃಹತ್ ತಂತಿಯ ಬೇಲಿ ಹಾಕುತ್ತಿದ್ದು, ಇದು ವಣ್ಯ ಜೀವಿಗಳ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರಣ್ಯ ಪ್ರದೇಶ ಹಾಗೂ ಅರಣ್ಯದಲ್ಲಿ ಇರುವ ಕಾಡು ಪ್ರಾಣಿಗಳು ನಶಿಸಿ ಹೋಗುತ್ತಿವೆ ಎಂದು ಪ್ರಾಣಿ ಪ್ರಿಯರು ವಾದ ಮಾಡುತ್ತಿದ್ದಾರೆ.
ಕಿಐಡಿಬಿ ಹಾಗೂ ಸಾರ್ವಜನಿಕರು ಈ ಪ್ರದೇಶದ ಸುತ್ತಮುತ್ತಲೂ ತಂತಿ ಬೇಲಿ ಹಾಕುತ್ತಿದ್ದಾರೆ. ಇದರಿಂದ ಪ್ರಾಣಿಗಳಿಗೆ ತೀರಾ ತೊಂದರೆಯಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರು ಆ ಜಿಂಕೆಗಳನ್ನ ಬೇರೆ ಕಡೆಗೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದಾರೆಂದು ಸ್ಥಳೀಯರು ಹೇಳುತ್ತಿದ್ದಾರೆ.
ಇದನ್ನೂ ಓದಿ
ಗಣಿಗಾರಿಕೆಯಿಂದ ಬೇಸತ್ತು ದಯಾಮರಣಕ್ಕೆ ರೈತರ ಮನವಿ; ನಂದಿ ಬೆಟ್ಟದಲ್ಲಿ ಭೂಕುಸಿತಕ್ಕೂ ಗಣಿಗಾರಿಕೆಗೂ ಇದೆಯಾ ನಂಟು?
ರಾಯಚೂರಿನಲ್ಲಿ ನಾಪತ್ತೆಯಾಗಿ ಬೆಂಗಳೂರಿನಲ್ಲಿ ಶವವಾಗಿ ಪತ್ತೆ; ಎಫ್‌ಡಿಎ ಸಾವಿಗೆ ಸಿಕ್ತು ಟ್ವಿಸ್ಟ್
(area surrounding the Bellaura village is being occupied by the public in Bidar)