ಮೆಣಸಿನಕಾಯಿ ಖರೀದಿಸಲು 6 ಕಿಲೋಮೀಟರ್ ದೂರ ಬಂದಿದ್ದ ಮೈಸೂರು ವ್ಯಕ್ತಿಗೆ ಎಎಸ್ಐ ತರಾಟೆ

|

Updated on: May 12, 2021 | 8:55 AM

ವಸ್ತುಗಳನ್ನು ಖರೀದಿಸಲು ನೀಡಿದ ಸಮಯವನ್ನು ರಾಜ್ಯದ ಕೆಲ ಜನರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಗಳು ಬರುತ್ತಿವೆ. ಹೀಗೆ ದುರುಪಯೋಗಪಡಿಸಿಕೊಂಡ ವ್ಯಕ್ತಿಯೊಬ್ಬರನ್ನು ಮೈಸೂರಿನಲ್ಲಿ ಎಎಸ್ಐ ತರಾಟೆಗೆ ತೆಗೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಮೆಣಸಿನಕಾಯಿ ಖರೀದಿಸಲು 6 ಕಿಲೋಮೀಟರ್ ದೂರ ಬಂದಿದ್ದ ಮೈಸೂರು ವ್ಯಕ್ತಿಗೆ ಎಎಸ್ಐ ತರಾಟೆ
ಮೈಸೂರು ನಗರ
Follow us on

ಮೈಸೂರು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 14 ದಿನಗಳ ಕಾಲ ಲಾಕ್​ಡೌನ್​ ಜಾರಿಗೊಳಿಸಿದೆ. ಜೊತೆಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಸರ್ಕಾರ ಅವಕಾಶ ನೀಡಿದೆ. ಆದರೆ ವಸ್ತುಗಳನ್ನು ಖರೀದಿಸಲು ನೀಡಿದ ಸಮಯವನ್ನು ರಾಜ್ಯದ ಕೆಲ ಜನರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಗಳು ಬರುತ್ತಿವೆ. ಹೀಗೆ ದುರುಪಯೋಗಪಡಿಸಿಕೊಂಡ ವ್ಯಕ್ತಿಯೊಬ್ಬರನ್ನು ಮೈಸೂರಿನಲ್ಲಿ ಎಎಸ್ಐ ತರಾಟೆಗೆ ತೆಗೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ವ್ಯಕ್ತಿಯೊಬ್ಬರು ಗಾಂಧಿನಗರದಿಂದ ಸಂತೇಪೇಟೆಗೆ ಬಂದಿದ್ದರು. ಮೂರು ಕೆಜಿ ಮೆಣಸಿನಕಾಯಿ ಖರೀದಿಸಲು ಸುಮಾರು 6 ಕಿಲೋಮೀಟರ್​ನಿಂದ ಬಂದಿದ್ದರು. ಈ ವೇಳೆ ನಿಮ್ಮ ಬಡಾವಣೆಯಲ್ಲಿ ಮೆಣಸಿನಕಾಯಿ ಸಿಗುವುದಿಲ್ಲವಾ? ಏಕೆ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನಿಮಗೆ ಇನ್ನೂ ಯಾವ ರೀತಿ ಹೇಳಬೇಕು? ಎಂದು ಎಎಸ್ಐ ವ್ಯಕ್ತಿಗೆ ತರಾಟೆ ತೆಗೆದುಕೊಂಡರು. ಆ ನಂತರ ಎಎಸ್ಐಗೆ ಕ್ಷಮೆಯಾಚಿಸಿ ವ್ಯಕ್ತಿ ವಾಪಾಸ್ಸಾಗಿದ್ದಾರೆ.

ಕೆಆರ್ ಮಾರ್ಕೆಟ್ ಖಾಲಿ ಖಾಲಿ

ಬೆಂಗಳೂರಿನ ಕೆಆರ್ ಮಾರ್ಕೆಟ್ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದೆ. ಮಾರ್ಕೆಟ್​ನಲ್ಲಿ ಎಲ್ಲಾ ರೀತಿಯ ವಸ್ತುಗಳು ಇವೆ. ಆದರೆ ವಸ್ತುಗಳನ್ನು ಖರೀದಿ ಮಾಡಲು ಜನರಿಲ್ಲ. ವ್ಯಾಪಾರಕ್ಕೆ ಅಂತ ವ್ಯಾಪಾರಸ್ಥರು ಮದ್ಯ ರಾತ್ರಿ ಎರಡು ಗಂಟೆಗೆ ಬಂದಿದ್ದಾರೆ. ಮದ್ಯ ರಾತ್ರಿ ಎರಡು ಗಂಟೆಗೆ ಬಂದರು ವ್ಯಾಪಾರ ಆಗುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ

ರಂಜಾನ್ ಸಂಭ್ರಮದಲ್ಲಿ ಕೈ ಕುಲುಕುವಂತಿಲ್ಲ, ಆಲಿಂಗಿಸುವಂತಿಲ್ಲ: ಆಂಧ್ರ ಸರ್ಕಾರದಿಂದ ಮಾರ್ಗಸೂಚಿ

ಪ್ರಾಣಿಗಳಿಗೂ ವಕ್ಕರಿಸುತ್ತೆ ಕೊರೊನಾ.. ಕರ್ನಾಟಕ ರಾಜ್ಯದ ಮೃಗಾಲಯಗಳಲ್ಲಿ ಹೈ ಅಲರ್ಟ್

(ASI alerted a Mysore man who had come 6 km away to buy chilli)