AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣಿಗಳಿಗೂ ವಕ್ಕರಿಸುತ್ತೆ ಕೊರೊನಾ.. ಕರ್ನಾಟಕ ರಾಜ್ಯದ ಮೃಗಾಲಯಗಳಲ್ಲಿ ಹೈ ಅಲರ್ಟ್

ಕೊರೊನಾ ಮಹಾಮಾರಿಯ ಎರಡನೇ ಅಲೆ ಕೇವಲ ಮನುಷ್ಯರನ್ನ ಮಾತ್ರವಲ್ಲ ಪ್ರಾಣಿಗಳನ್ನು ಸಹ ಕಾಡುತ್ತಿದೆ. ಹೈದರಾಬಾದ್ ಮೃಗಾಲಯದ ಸಿಂಹಗಳಲ್ಲಿ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೇ ರಾಜ್ಯದ ಮೃಗಾಲಯದ ಪ್ರಾಣಿಗಳ ಬಗ್ಗೆ ಅಧಿಕಾರಿಗಳಲ್ಲಿ ಆತಂಕ ಉಂಟಾಗಿದೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅವರು ಕೈಗೊಳ್ಳುತ್ತಿದ್ದಾರೆ.

ಪ್ರಾಣಿಗಳಿಗೂ ವಕ್ಕರಿಸುತ್ತೆ ಕೊರೊನಾ.. ಕರ್ನಾಟಕ ರಾಜ್ಯದ ಮೃಗಾಲಯಗಳಲ್ಲಿ ಹೈ ಅಲರ್ಟ್
ಸಂಗ್ರಹ ಚಿತ್ರ
ಆಯೇಷಾ ಬಾನು
|

Updated on:May 12, 2021 | 7:07 AM

Share

ಮೈಸೂರು: ಕೊರೊನಾ ಮಾನವ ಕುಲವನ್ನೇ ಅಲುಗಾಡಿಸಿದೆ. ಮನುಷ್ಯರನ್ನ ಬಲಿ ಪಡೆಯುತ್ತಾ ಅಟ್ಟಹಾಸ ಮೆರೆಯುತ್ತಿದೆ. ಈ ನಡುವೆ ಕೊರೊನಾ ಬಗ್ಗೆ ಮತ್ತೆ ನಾನಾ ಪ್ರಶ್ನೆಗಳು ಎದ್ದಿವೆ. ಕೊರೊನಾ ಮಹಾಮಾರಿ ಎರಡನೇ ಅಲೆ ಜನರನ್ನು ಮಾತ್ರವಲ್ಲ ಪ್ರಾಣಿಗಳನ್ನೂ ಕಾಡುತ್ತಾ? ಪ್ರಾಣಿಗಳ ಪ್ರಾಣಕ್ಕೂ ಸಂಚಕಾರ ತರುತ್ತಾ? ಅನ್ನೋ ಪ್ರಶ್ನೆಗಳು ಎದ್ದಿವೆ. ಹೀಗಾಗಿ ರಾಜ್ಯದ ಮೃಗಾಲಯದ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ರಾಜ್ಯದ 5 ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆಗಳಿವೆ. ಯಾವಾಗ ಹೈದರಾಬಾದ್ ಮೃಗಾಲಯದ ಸಿಂಹಗಳಿಗೆ ಕೊರೊನಾ ಮಹಾಮಾರಿ ವಕ್ಕರಿಸಿತೋ ರಾಜ್ಯದ ಮೃಗಾಲಯದ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಪ್ರತಿದಿನ ಹುಲಿ, ಸಿಂಹ ಹಾಗೂ ಚಿರತೆಗಳ‌ ಮೇಲೆ‌ ನಿಗಾ ಇಡ್ತಿದ್ದಾರೆ. ಪ್ರತಿದಿನ ವೈದ್ಯರು ಪ್ರಾಣಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ಸದ್ಯ ರಾಜ್ಯದ ಮೃಗಾಲಯದಲ್ಲಿರುವ ಯಾವ ಪ್ರಾಣಿಗಳಲ್ಲೂ ಮಹಾಮಾರಿಯ ರೋಗ ಲಕ್ಷಣಗಳು ಕಂಡುಬಂದಿಲ್ಲ. ಇನ್ನು ಅಚ್ಚರಿ ಅಂದ್ರೆ ಪ್ರಾಣಿಗಳಿಗೆ ಕೊರೊನಾ ಸೋಂಕು ವಕ್ಕರಿಸಿದ್ರೆ ಪ್ರಾಣಿಗಳು ಸಹ ಕೆಮ್ಮಲು ಶುರು ಮಾಡುತ್ತವೆ. ಮನುಷ್ಯರಂತೆ ಪ್ರಾಣಿಗಳಿಗೂ ಬೇಗ ಸುಸ್ತಾಗುತ್ತೆ. ಅಷ್ಟೇ ಅಲ್ಲ ಊಟವನ್ನೂ ಮಾಡುವುದಿಲ್ಲ. ಈ ಎಲ್ಲಾ ಮಾಹಿತಿಗಳನ್ನ ಹೈದರಾಬಾದ್ ಮೃಗಾಲಯದ ಅಧಿಕಾರಿಗಳಿಂದ ತರಿಸಿಕೊಳ್ಳಲಾಗಿದೆ. ಇದರ ಆಧಾರದಲ್ಲಿ ಪ್ರಾಣಿಗಳನ್ನ ನಿರಂತರವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ‌.

ಹೈದರಾಬಾದ್‌ನಲ್ಲಿ ಪ್ರಾಣಿಗಳಿಗೆ ಸೋಂಕು ಹೇಗೆ ತಗುಲಿತು ಅನ್ನೋ‌ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಪ್ರಾಣಿಗಳನ್ನ ನೋಡಿಕೊಳ್ಳುವವರಿಂದಲೇ ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪ್ರಾಣಿಗಳನ್ನ ನೋಡಿಕೊಳ್ಳುವವರಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್‌ ಆಗಿ ಸೂಚಿಸಲಾಗಿದೆ. ಒಟ್ಟಾರೆ ಮಹಾಮಾರಿಯ ಎರಡನೇ ಅಲೆ ಮನುಷ್ಯರ ಜೊತೆ ಪ್ರಾಣಿಗಳಿಗೂ ವ್ಯಾಪಾಕವಾಗಿ ಹರಡಿದ್ರೆ ಮುಂದಿನ ಪರಿಸ್ಥಿತಿ ಊಹಿಸಲೂ ಸಾಧ್ಯವಾಗೋದಿಲ್ಲ.

ಇದನ್ನೂ ಓದಿ: ಹೈದರಾಬಾದ್​ ಮೃಗಾಲಯದಲ್ಲಿರುವ 8 ಸಿಂಹಗಳಿಗೆ ಕೊರೊನಾ ಸೋಂಕು; ದೇಶದಲ್ಲೇ ಮೊದಲ ಪ್ರಕರಣ ಇದು

Published On - 7:02 am, Wed, 12 May 21

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು