ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ಅಯೋಧ್ಯೆಯ ರಾಮ ಮಂದಿರದಲ್ಲಿ ಮೊಳಗಿದ ಕನ್ನಡಿಗ ಡಾ. ಗಜಾನನ ಶರ್ಮಾ ರಚಿತ ರಾಮ ಭಜನೆ

|

Updated on: Jan 09, 2024 | 3:52 PM

“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ” ಹೀಗೊಂದು ಭಜನೆಯ ರಚಿಸಿರುವ ಕೀರ್ತಿ ಕನ್ನಡಿಗ ಡಾ. ಗಜಾನನ ಶರ್ಮಾ(Gajanana Sharma)ರಿಗೆ ಸಲ್ಲುತ್ತದೆ. ಇದೀಗ ಇದೇ ಭಜನೆ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ಪ್ರಸಾರವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೊಂದು ಸುಂದರವಾದ ಸಾಲುಗಳನ್ನು ರಚನೆ ಮಾಡಿದ್ದರೂ ಎಲ್ಲಿಯೂ ಹೇಳಿಕೊಳ್ಳದ ವ್ಯಕ್ತಿತ್ವ ಅವರದ್ದು. ಈ ಹಾಡನ್ನು ಕೇಳುತ್ತಿದ್ದರೆ ಮನಸ್ಸಿಗೆ ಒಂದು ರೀತಿಯ ನೆಮ್ಮದಿಯನ್ನುಂಟು ಮಾಡುವುದಂತೂ ಸತ್ಯ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಹಿರಿಯ ಅಧಿಕಾರಿಯಾಗಿ […]

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ಅಯೋಧ್ಯೆಯ ರಾಮ ಮಂದಿರದಲ್ಲಿ ಮೊಳಗಿದ ಕನ್ನಡಿಗ ಡಾ. ಗಜಾನನ ಶರ್ಮಾ ರಚಿತ ರಾಮ ಭಜನೆ
ಗಜಾನನ ಶರ್ಮಾ ದಂಪತಿ-ರಾಮಮಂದಿರ
Follow us on

“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ” ಹೀಗೊಂದು ಭಜನೆಯ ರಚಿಸಿರುವ ಕೀರ್ತಿ ಕನ್ನಡಿಗ ಡಾ. ಗಜಾನನ ಶರ್ಮಾ(Gajanana Sharma)ರಿಗೆ ಸಲ್ಲುತ್ತದೆ. ಇದೀಗ ಇದೇ ಭಜನೆ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ಪ್ರಸಾರವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇಷ್ಟೊಂದು ಸುಂದರವಾದ ಸಾಲುಗಳನ್ನು ರಚನೆ ಮಾಡಿದ್ದರೂ ಎಲ್ಲಿಯೂ ಹೇಳಿಕೊಳ್ಳದ ವ್ಯಕ್ತಿತ್ವ ಅವರದ್ದು. ಈ ಹಾಡನ್ನು ಕೇಳುತ್ತಿದ್ದರೆ ಮನಸ್ಸಿಗೆ ಒಂದು ರೀತಿಯ ನೆಮ್ಮದಿಯನ್ನುಂಟು ಮಾಡುವುದಂತೂ ಸತ್ಯ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಡಾ. ಗಜಾನನ ಶರ್ಮಾ ಅವರ ಈ ಗೀತೆ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಪ್ರಸಾರ ಮಾಡಲಾಗಿದೆ.

ಈ ಕುರಿತು ರಾಮ ಜನ್ಮಭೂಮಿ ಟ್ರಸ್ಟ್​ ಟ್ವೀಟ್​ ಮಾಡಿದ್ದು, ಪ್ರಭು ಶ್ರೀರಾಮಚಂದ್ರನ ಕುರಿತಾದ ಹೃದಯಕ್ಕೆ ಹತ್ತಿರವಾದ ಈ ಮನೋಜ್ಞ ಗೀತೆಯ ರಚನೆಗಾಗಿ ಡಾ. ಗಜಾನನ ಶರ್ಮರಿಗೆ ಅಭಿನಂದನೆಗಳು! ಜೈ ಶ್ರೀ ರಾಮ್!’ ಎಂದು ಹೇಳಿದೆ.

ಇವರು ಮೂಲತಃ ಲಿಂಗನಮಕ್ಕಿ ಅಣೆಕಟ್ಟಿನ ಸಮೀಪದ ಹುಕ್ಕಲಿನವರು. ಗಜಾನನ ಶರ್ಮಾ ಮೈಸೂರಿನ ಎನ್‌ಐಇ ಕಾಲೇಜಿನಿಂದ ಎಂ ಟೆಕ್ ಪದವಿ, ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಎಂಎ, ಹಂಪಿಯ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಸಾಕಷ್ಟು ಪುಸ್ತಕಗಳನ್ನು ಕೂಡ ಬರೆದಿದ್ದಾರೆ.

ಮತ್ತಷ್ಟು ಓದಿ: Ayodhya Ram Mandir Muhurat Analysis: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಮುಹೂರ್ತ ಹೇಗಿದೆ? ಇಲ್ಲಿದೆ ವಿಶ್ಲೇಷಣೆ

ಇಂಥದ್ದೊಂದು ಅಧ್ಬುತ ರಚನೆ ಮನ ಹಾಗೂ ಕಂಠದಲ್ಲೂ ಮೊಳಗುತ್ತಿದೆ. ಒಮ್ಮೆ ಕೇಳಿದರೆ ಪದೇ ಪದೇ ಕೇಳಬೇಕೆಂಬ ಭಾವನೆ ಮೂಡುವುದು. ಮನತುಂಬಿ ಬರುವುದು. ಯೂಟ್ಯೂಬ್‌ನಲ್ಲಿ ಕೂಡ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಎಂಬ ಗೀತೆ ತುಂಬಾ ಪ್ರಸಿದ್ಧವಾಗಿದೆ.

ಒಂದು ಲೆಕ್ಕಾಚಾರದ ಪ್ರಕಾರ 2 ಕೋಟಿ ಸಲ ಈ ಹಾಡನ್ನು ಮೀಡಿಯಾದಲ್ಲಿ ಕೇಳಲಾಗಿದೆ. ಯೂಟ್ಯೂಬ್‌ನಲ್ಲಿ 1.3 ಲಕ್ಷ, ಇತರ ಮೀಡಿಯಾಗಳಲ್ಲಿ 70 ಲಕ್ಷ ಸಲ ಕೇಳಲಾಗಿದೆ. ಈ ಹಾಡಿಗೆ ಶರ್ಮಾ ಅವರ ಪುತ್ರ ಸಾಕೇತ್ ಶರ್ಮಾ ಸಂಗೀತ ಸಂಯೋಜಿಸಿದರು. ಕೆ.ವಿ.ಸುಪ್ರಭಾ ಅದನ್ನು ಹಾಡಿದ್ದರು.

ತಮಿಳು ತೆಲುಗು ತುಳು ಭಾಷೆಗಳಿಗೆ ಅನುವಾದವಾಗಿ ಅಲ್ಲಿ ಕೂಡ ಅದನ್ನು ಹಾಡಲಾಗಿದೆ. ಆದಿಚುಂಚನಗಿರಿ, ಹೊಸನಗರ ಶ್ರೀಗಳು ಕೂಡ ಇದಕ್ಕೆ ದನಿಗೂಡಿಸಿದ್ದಾರೆ.

ನನ್ನ ಭಜನೆ ಅಯೋಧ್ಯೆಯ ರಾಮನನ್ನು ತಲುಪಿರುವುದು ಗೊತ್ತೇ ಇರಲಿಲ್ಲ
ನನ್ನ ಭಜನೆ ಅಯೋಧ್ಯೆಯ ರಾಮನನ್ನು ತಲುಪಿರುವುದು ಗೊತ್ತೇ ಇರಲಿಲ್ಲ. ಒಬ್ಬರು ಕರೆ ಮಾಡಿ ಹೀಗೆ ನಿಮ್ಮ ಹಾಡು ಅಯೋಧ್ಯೆಯಲ್ಲಿ ಪ್ರಸಾರವಾಗಿದೆ ಎಂದು ತಿಳಿದಾಗ ಎಲ್ಲಿಲ್ಲದ ಸಂತೋಷ, ಗೀತೆ ರಚನೆ ಮಾಡಿದ್ದಕ್ಕೂ ಸಾರ್ಥಕವಾಯಿತು ಎನ್ನುವ ಭಾವ ಮೂಡಿದೆ. ಗೀತೆ ಪ್ರಸಾರ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಡಾ. ಗಜಾನನ ಶರ್ಮಾ ತಿಳಿಸಿದ್ದಾರೆ.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:51 pm, Tue, 9 January 24