ಲಾಕ್​ಡೌನ್​ ಎಫೆಕ್ಟ್: ಐನೂರು ಎಕರೆ ಕಲ್ಲಂಗಡಿ ಬೆಳೆದ ಬಾಗಲಕೋಟೆ ರೈತರಿಗೆ ಸಂಕಷ್ಟ

|

Updated on: May 19, 2021 | 2:58 PM

ಜಿಲ್ಲೆಯ ರೈತರು ಬೆಳೆಗಾಗಿ ಅಂದಾಜು ಮೂರುವರೆ ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದರು. ಅಂದುಕೊಂಡಂತೆ ಮಾರಾಟ ಆಗಿದ್ದರೆ 7 ರಿಂದ 8 ಕೋಟಿ ರೂ. ಹಣ ರೈತರ ಜೇಬು ಸೇರುತ್ತಿತ್ತು. ಲಾಕ್​ಡೌನ್​ ಜಾರಿಯಿರುವ ಕಾರಣ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಜಮೀನಿನಲ್ಲೇ ಕಬ್ಬು ಕೊಳೆಯುತ್ತಿದೆ.

ಲಾಕ್​ಡೌನ್​ ಎಫೆಕ್ಟ್: ಐನೂರು ಎಕರೆ ಕಲ್ಲಂಗಡಿ ಬೆಳೆದ ಬಾಗಲಕೋಟೆ ರೈತರಿಗೆ ಸಂಕಷ್ಟ
ಕಲ್ಲಂಗಡಿ ಬೆಳೆ
Follow us on

ಬಾಗಲಕೋಟೆ: ಕೊರೊನಾದಿಂದ ಆಗುತ್ತಿರುವ ಸಮಸ್ಯೆ ಒಂದೆರೆಡಾ.. ಒಂದು ಕಡೆ ಕುಟುಂಬಸ್ಥರನ್ನು ಕಳೆದುಕೊಂಡ ನೋವು, ಇನ್ನೊಂದು ಕಡೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಕಂಗಾಲಾದ ರೈತರು. ಮಹಾಮಾರಿ ಕೊರೊನಾವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಅನಿವಾರ್ಯವಾಗಿ ರಾಜ್ಯದಾದ್ಯಂತ ಲಾಕ್​ಡೌನ್​ ವಿಧಿಸಿದೆ. ಹೀಗಾಗಿ ಈ ಬಾರಿ ಉತ್ತಮ ಲಾಭವನ್ನು ಗಳಿಸಬಹುದೆಂಬ ಹೆಚ್ಚು ನಿರೀಕ್ಷೆಯಲ್ಲಿದ್ದ ರೈತರಿಗೆ ಲಾಕ್​ಡೌನ್​ ಮಣ್ಣು ಎರಚಿದಂತಾಗಿದೆ. ಬಾಗಲಕೋಟೆ ರೈತರು ಸುಮಾರು 500 ಎಕರೆ ಕಲ್ಲಂಗಡಿ ಬೆಳೆದಿದ್ದರು. 250 ರಿಂದ 300 ರೈತರು ಕಬ್ಬನ್ನು ಬೆಳೆದಿದ್ದರು. ಆದರೆ ಬೇಡಿಕೆ ಇಲ್ಲದೆ ಅನ್ನದಾತರು ಸಂಕಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯ ರೈತರು ಬೆಳೆಗಾಗಿ ಅಂದಾಜು ಮೂರುವರೆ ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದರು. ಅಂದುಕೊಂಡಂತೆ ಮಾರಾಟ ಆಗಿದ್ದರೆ 7 ರಿಂದ 8 ಕೋಟಿ ರೂ. ಹಣ ರೈತರ ಜೇಬು ಸೇರುತ್ತಿತ್ತು. ಲಾಕ್​ಡೌನ್​ ಜಾರಿಯಿರುವ ಕಾರಣ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಜಮೀನಿನಲ್ಲೇ ಕಬ್ಬು ಕೊಳೆಯುತ್ತಿದೆ. ಕೆಲ ರೈತರು ಕಲ್ಲಂಗಡಿ ಹಣ್ಣನ್ನು ಕಟಾವು ಮಾಡಿ ತಿಪ್ಪೆಗೆ ಸುರಿಯುತ್ತಿದ್ದಾರೆ. ಕಳೆದ ವರ್ಷವೂ ಕಲ್ಲಂಗಡಿ ಬೆಳೆಗಾರರು ಇದೆ ಸಂಕಷ್ಟ ಎದುರಿಸಿದ್ದರು. ಬೇಸಿಗೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಅಂತ ಅಂದುಕೊಂಡಿದ್ದರು. ವ್ಯಾಪಾರವಿಲ್ಲದ ಕಾರಣ ಕೆಲ ರೈತರು ಹೊಲ ಸ್ವಚ್ಛಗೊಳಿಸಿದ್ದಾರೆ. ಜಮೀನಿನಲ್ಲಿದ್ದ ಹಣ್ಣು ಕಿತ್ತಾಕಲು ಸಾವಿರಾರು ರೂ. ಖರ್ಚು ಮಾಡಿದ್ದಾರೆ.

ಕಾಲುವೆಗೆ ಹೂವು ಸುರಿದು ರೈತರ ಆಕ್ರೋಶ

ಬೆಂಗಳೂರು: ವ್ಯಾಪಾರವಿಲ್ಲದ ಕಾರಣ ರಾಜ ಕಾಲುವೆಗೆ ಹೂವು ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಹೂವಿನ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ ಐದು ಗಂಟೆಯಿಂದ ಏಳು ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಏಳು ಗಂಟೆಯಾದ ಕಾರಣ ಸ್ಥಳಕ್ಕೆ ಹೊಯ್ಸಳದಲ್ಲಿ ಪೊಲೀಸರು ಬಂದು ಸ್ಥಳದಿಂದ ಹೊರಡುವಂತೆ ಎಚ್ಚರಿಕೆ ನೀಡಿದರು. ಹೀಗಾಗಿ ನಾವು ಬೆಳೆದ ಹೂವಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಅಂತ ರೈತರು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ನಾವು ಕಡಿಮೆ ಬೆಲೆ ಕೇಳಿದರೆ ರೈತರು ಹೂವು ನೀಡುತ್ತಿಲ್ಲ ಆದರೆ ಕಾಲುವೆಗೆ ಹೂವು ಸುರಿದು ಹೋಗುತ್ತಿದ್ದಾರೆ ಅಂತ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

ಹೂವನ್ನು ಕಾಲುವೆಗೆ ಎಸೆದಿರುವ ರೈತರು

ವಿಡಿಯೋ ಮಾಡಿ ಸಂಕಷ್ಟವನ್ನು ಹೇಳಿಕೊಂಡ ರೈತ
ಬೆಳಗಾವಿ: ಲಾಕ್​ಡೌನ್​ ಕಾರಣ ಸಣ್ಣಪುಟ್ಟ ರೈತರಿಗೆ ಸಂಕಷ್ಟ ಎದುರಾಗಿದೆ. ಕಷ್ಟಪಟ್ಟು ಅರ್ಧ ಎಕರೆಯಲ್ಲಿ ಕೊತ್ತಂಬರಿ ಬೆಳೆದಿದ್ದೇನೆ. ಬೆಳಗ್ಗೆ ಕೊತ್ತಂಬರಿ ಕಟಾವು ಮಾಡುವುದಕ್ಕೆ ಮಳೆ ಅಡ್ಡಿಯಾಗಿದೆ. ಮಾರುಕಟ್ಟೆಗಳಲ್ಲಿ ಏಜೆಂಟ್‌ಗಳಿಗೆ ಕಮಿಷನ್ ನೀಡಬೇಕು. ರೈತರ ಕಷ್ಟವನ್ನು ಯಾರಿಗೆ ಹೇಳೋಣವೆಂದು ವಿಡಿಯೋ ಮಾಡಿ ರೈತರೊಬ್ಬರು ತನ್ನ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಲೆ ಸಿಗದೆ ರೈತರ ಪರದಾಟ
ಮೈಸೂರು: ಕೊರೊನಾ ಲಾಕ್​ಡೌನ್​ನಿಂದ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಪರದಾಟ ಪಡುತ್ತಿದ್ದಾರೆ. ಹೀಗಾಗಿ ಮೈಸೂರಿನ ಬಂಡಿಪಾಳ್ಯ ಮಾರ್ಕೆಟ್‌ನಲ್ಲಿ ರೈತರು ಅಳಲು ತೋಡಿಕೊಂಡಿದ್ದಾರೆ. ಕೊಳ್ಳುವವರಿಲ್ಲದೆ ರೈತರು ಟೊಮ್ಯಾಟೊವನ್ನು ರಸ್ತೆಗೆ ಸುರಿದಿದ್ದಾರೆ. ಹೀಗಾಗಿ ಟೊಮ್ಯಾಟೊ ಹಸುಗಳ ಪಾಲಾಗಿದೆ.

ಮೆಣಸಿನಕಾಯಿ ದರದಲ್ಲಿ ಭಾರಿ ಕುಸಿತ
ಗದಗ: ಮೆಣಸಿನಕಾಯಿ ದರದಲ್ಲಿ ಭಾರಿ ಕುಸಿತವಾಗಿರುವ ಕಾರಣ ರೈತ ಸಮೂಹ ಕಂಗಾಲಾಗಿದೆ. 30 ಕ್ಕೂ ಹೆಚ್ಚು ಎಕರೆಯಲ್ಲಿ ‌ಬೆಳೆದ ಮೆಣಸಿನಕಾಯಿಯನ್ನು ಸೂಕ್ತ ಬೆಲೆ ಇಲ್ಲದಕ್ಕೆ ರೋಟರ್​ನಿಂದ ಹರಗಿ ಹಾಳು ಮಾಡಿದ್ದಾರೆ. ರೈತ ಬೆಳೆದ‌ ಮೆಣಸಿನಕಾಯಿ ಕಟಾವು ಆಗುತ್ತಿಲ್ಲ. ಕಟಾವು ಮಾಡಿದರೂ ಮಾರುಕಟ್ಟೆಗೆ ಕೊಂಡೊಯ್ಯಲು ಆಗುತ್ತಿಲ್ಲ. ಮಾರುಕಟ್ಟೆಗೆ ತಂದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ಬೆಳೆದ ಬೆಳೆಯಲ್ಲಿ ಬದುಕು ಕಟ್ಟಲು ಪ್ರಯತ್ನಿಸಿದ ರೈತರು ಸೋತು ಕುಳಿತಿದ್ದಾರೆ.

ಇದನ್ನೂ ಓದಿ

ಕೊವಿಡ್ ಮಿತ್ರ ಮಾದರಿಗೆ ಪ್ರಧಾನಿ ಮೆಚ್ಚುಗೆ; ಕೇಂದ್ರಕ್ಕೆ ಈ ಪರಿಕಲ್ಪನೆ ಕಳುಹಿಸುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಮನವಿ

ಮೈಸೂರಿನಲ್ಲೂ ಬ್ಲ್ಯಾಕ್ ಫಂಗಸ್ ಕಾಟ, ಸೋಂಕಿಗೆ ಮೈಸೂರು ಮಹಾನಗರ ಪಾಲಿಕೆಯ ಗುತ್ತಿಗೆ ನೌಕರರ ಸಾವು

(Bagalkot Farmers who grow watermelon on five hundred acres are bogged down without a appropriate price)

Published On - 8:27 am, Wed, 19 May 21