ಪ್ರತಿ ಟನ್ ಕಬ್ಬಿಗೆ 2,850 ರೂ. ದರ ಕೊಡಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ, ಹೋರಾಟ ಕೈ ಬಿಟ್ಟ ರೈತರು

ಪ್ರತಿ ಟನ್ ಕಬ್ಬಿಗೆ 2,850 ರೂ. ಕೊಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಪ್ರತಿ ಟನ್ ಕಬ್ಬಿಗೆ 2,850 ರೂ. ದರ ಕೊಡಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ, ಹೋರಾಟ ಕೈ ಬಿಟ್ಟ ರೈತರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Updated By: ವಿವೇಕ ಬಿರಾದಾರ

Updated on: Nov 21, 2022 | 7:44 PM

ಬಾಗಲಕೋಟೆ: ಕಬ್ಬಿಗೆ (Sugarcane) ಸೂಕ್ತ ಬೆಲೆ ನಿಗದಿ ಮಾಡುವಂತೆ ಕಳೆದ 53 ದಿನಗಳಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಜಯ ಲಭಿಸಿದೆ. ಪ್ರತಿ ಟನ್ ಕಬ್ಬಿಗೆ 2,850 ರೂ. ದರ ಕೊಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಭರವಸೆ ನೀಡಿದ್ದಾರೆ. ಕಳೆದ 53 ದಿನಗಳಿಂದ ಕಬ್ಬು ಬೆಳೆಗಾರರು ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ‌ ಪ್ರತಿಭಟನೆ ಮಾಡುತ್ತಿದ್ದರು. ಇಂದು (ನ.21) ಸಿಎಂ ಬೊಮ್ಮಾಯಿ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಫೋನ್​ ಮಾಡಿ ಪ್ರತಿ ಟನ್ ಕಬ್ಬಿಗೆ 2,850 ರೂ. ಕೊಡಿಸುವುದಾಗಿ ತಿಳಿಸಿದರು. ಬಳಿಕ ಎಡಿಸಿ ಮಹದೇವ ಮುರಗಿ ಹಾಗೂ ಜಮಖಂಡಿ ಎಸಿ ಸಿದ್ದು ಹುಲ್ಲಳ್ಳಿ ಪ್ರತಿಭಟನಾ ನಿರತರ ಸ್ಥಳಕ್ಕೆ ತೆರಳಿ ಮಾಹಿತಿ ನೀಡಿದ್ದಾರೆ. ಆಗ ಕಬ್ಬು ಬೆಳೆಗಾರರು ಹೋರಾಟ ಕೈ ಬಿಟ್ಟಿದ್ದಾರೆ.

ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟ ಎಂದ ರೈತರು

ಈ ವೇಳೆ ಮಾತನಾಡಿದ ರೈತರು ಸದ್ಯಕ್ಕೆ ಹೋರಾಟ ಅಂತ್ಯಗೊಳಿಸಿ ಕಾರ್ಖಾನೆ ಆರಂಭಕ್ಕೆ ಅವಕಾಶ ಕೊಡುತ್ತೇವೆ. ಸಿಎಂ 7 ದಿನದಲ್ಲಿ ರೈತರ ಜೊತೆ ಸಭೆ ಕರೆಯೋದಾಗಿ ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರಂತೆ. ಒಂದು ವೇಳೆ ಸಿಎಂ ಸಭೆಯಲ್ಲಿ, ನಮಗೆ ನ್ಯಾಯ ಸಿಗದಿದ್ದರೇ ಮತ್ತೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ