ಬಾಗಲಕೋಟೆ: ಅನೈತಿಕ ಸಂಬಂಧ ಶಂಕೆಯಿಂದ ಕುಡುಕ ಪತಿಯೊಬ್ಬ ಮಲಗಿದ್ದ ಹೆಂಡತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಅಮಾನವೀಯ ಘಟನೆ ತೇರದಾಳ ತಾಲೂಕಿನ ಹನಗಂಡಿ ಗ್ರಾಮದಲ್ಲಿ ನಡೆದಿದೆ. ಕೊಲೆ ಆರೋಪ ಹೊತ್ತವ ಗಣಪತಿ ಕುಚನೂರು, ಉಮಾಶ್ರಿ (32) ಎಂಬಾಕೆ ಕೊಲೆಯಾದಾಕೆ.
ಗಣಪತಿ ಕುಚನೂರು ತನ್ನ ಹೆಂಡತಿ ಉಮಾಶ್ರೀಗೆ ಅನೈತಿಕ ಸಂಬಂಧ ಇದೆ ಎಂಬ ಶಂಕೆಯನ್ನು ಹೊಂದಿದ್ದ. ಈ ಕಾರಣ ಮದ್ಯದ ಅಮಲಿನಲ್ಲಿದ್ದಾತ ನಿನ್ನೆ ರಾತ್ರಿ ವೇಳೆ ಮಲಗಿದ್ದ ಹೆಂಡತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾಗಿದ್ದಾನೆ.
ಇಂದು ಬೆಳಗ್ಗೆ ಮಹಿಳೆ ಕಾಣುತ್ತಿಲ್ಲವೆಂದು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಣಪತಿ ಹಾಗೂ ಉಮಾಶ್ರೀಗೆ ಮೂರು ಜನ ಮಕ್ಕಳಿದ್ದು, ತಂದೆಯ ಹೀನಕೃತ್ಯದಿಂದಾಗಿ ಮಕ್ಕಳು ತಾಯಿಯನ್ನು ಕಳೆದುಕೊಳ್ಳುವಂತಾಗಿದೆ.
Published On - 8:50 pm, Mon, 21 December 20