ಬಾಗಲಕೋಟೆಯಲ್ಲಿ ಎಗ್​ರೈಸ್​ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ

| Updated By: sandhya thejappa

Updated on: Sep 05, 2021 | 5:43 PM

ಜುಮ್ಮಕಟ್ಟಿ ಗ್ರಾಮದ ಯುವಕ ರಮೇಶ ಕಂಬಾಡದ ಎಂಬುವವನ ಮೇಲೆ ಎಗ್​ರೈಸ್​ ಅಂಗಡಿ ಮಾಲೀಕ ಮಲಿಕ್ ಮತ್ತು ಕೆಲಸಗಾರರ ತಂಡ ಹಲ್ಲೆ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಎಗ್​ರೈಸ್​ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ
ಗಾಯಗೊಂಡ ಯುವಕ
Follow us on

ಬಾಗಲಕೋಟೆ: ಎಗ್​ರೈಸ್ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಜುಮ್ಮಕಟ್ಟಿ ಗ್ರಾಮದ ಯುವಕ ರಮೇಶ ಕಂಬಾಡದ ಎಂಬುವವನ ಮೇಲೆ ಎಗ್​ರೈಸ್​ ಅಂಗಡಿ ಮಾಲೀಕ ಮಲಿಕ್ ಮತ್ತು ಕೆಲಸಗಾರರ ತಂಡ ಹಲ್ಲೆ ನಡೆಸಿದ್ದಾರೆ. ಯುವಕನ ಬಾಯಿಯಿಂದ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದು, ಹಲ್ಲೆ ನಡೆಸಿದ ಅಂಗಡಿ ಮಾಲೀಕ ಮಲಿಕ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆಯಲ್ಲಿ ಅಂತ್ಯವಾದ ಜಗಳ
ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಕೊನೆಗೆ ಆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಸಂಭವಿಸಿದೆ. ಶ್ರೀರಾಂಪುರ ನಿವಾಸಿಯಾದ ಆನಂದ್ ಅದೇ ಏರಿಯಾದಲ್ಲಿ ಟೈಲರಿಂಗ್ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಕೆಲ ತಿಂಗಳಿಂದ ಆನಂದ್ ಮನೆಗೆ ಹೋಗದೆ ಬೆಳಗಾದರೆ ಬಾರ್, ಕತ್ತಲಾದರೆ ಸ್ನೇಹಿತರ ರೂಮ್​ನಲ್ಲಿ ಠಿಕಾಣಿ ಹಾಕುತ್ತಿದ್ದನಂತೆ.

ನಿನ್ನೆಯೂ ಕೂಡ ಎಂದಿನಂತೆ ಶ್ರೀರಾಂಪುರದಲ್ಲಿನ ಅನಿಲ್ ಬಾರ್ಗೆ ತೆರಳಿದ್ದಾನೆ. ಇದೇ ವೇಳೆ ಮೀನು ವ್ಯಾಪಾರಿ ಲೋಹಿತ್ ಅನ್ನೋನು ಕೂಡ ಬಾರ್​ಗೆ ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಲೋಹಿತ್, ಆನಂದ್ ಮೇಲೆ ಹಲ್ಲೆ ಮಾಡಿದ್ದಾನೆ.

ಇದನ್ನೂ ಓದಿ

ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಮೇಲೆ ಚಿಕ್ಕಮಗಳೂರಿನಲ್ಲಿ ಹಲ್ಲೆ: ವ್ಯಾಪಕ ಖಂಡನೆ

ಕೊವಿಡ್ ಸಮಯದಲ್ಲಿ ಬಾಲ್ಯವಿವಾಹ ಹೆಚ್ಚಾಗಿದೆ: ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್

(Egg rice shop owner attack on young man reason of not pay the money in Bagalkot)