AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9ನಲ್ಲಿ ವರದಿ ಪ್ರಸಾರದ ಬಳಿಕ ಎಚ್ಚೆತ್ತ ಸಚಿವ; ಧರಣಿ ನಿರತರಿಂದ ಮನವಿ ಸ್ವೀಕರಿಸಿದ ಗೋವಿಂದ ಕಾರಜೋಳ

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ. ಟೆಂಡರ್ ಯಾರಿಗೆ ಆಗುತ್ತೋ ಅವರೇ ಅರಿಯರ್ಸ್ ಹಣ, ರೈತರ ಹೆಚ್ ಆ್ಯಂಡ್ ಟಿ ಲೋನ್ 62 ಕೋಟಿ ರೂ. ನೀಡಬೇಕು.

ಟಿವಿ9ನಲ್ಲಿ ವರದಿ ಪ್ರಸಾರದ ಬಳಿಕ ಎಚ್ಚೆತ್ತ ಸಚಿವ; ಧರಣಿ ನಿರತರಿಂದ ಮನವಿ ಸ್ವೀಕರಿಸಿದ ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
TV9 Web
| Updated By: sandhya thejappa|

Updated on: Sep 05, 2021 | 12:55 PM

Share

ಬಾಗಲಕೋಟೆ: ರನ್ನ ಸಕ್ಕರೆ ಕಾರ್ಖಾನೆಯನ್ನು (Ranna Sugar Factory) ಆರಂಭಿಸುವಂತೆ ಕಾರ್ಮಿಕರು, ರೈತರು ಜಿಲ್ಲೆಯ ಮುಧೋಳ ನಗರದಲ್ಲಿ ನಡೆಸಿದ ಪ್ರತಿಭಟನೆ ಬಗ್ಗೆ ಟಿವಿ9 ನಲ್ಲಿ ಸುದ್ದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾದ ಬಳಿಕ ಸಚಿವ ಗೋವಿಂದ ಕಾರಜೋಳ (Govind Karjol) ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದ್ದಾರೆ. ಈ ವೇಳೆ ಕಾರ್ಮಿಕರ ಪರ ಮಾತನಾಡಿದ ಅವರು, ಕಾರ್ಖಾನೆ ಆಡಳಿತ ಮಂಡಳಿ ಸೂಪರ್ಸೀಡ್ ಮಾಡಬೇಕು. ರನ್ನ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ. ಟೆಂಡರ್ ಯಾರಿಗೆ ಆಗುತ್ತೋ ಅವರೇ ಅರಿಯರ್ಸ್ ಹಣ, ರೈತರ ಹೆಚ್ ಆ್ಯಂಡ್ ಟಿ ಲೋನ್ 62 ಕೋಟಿ ರೂ. ನೀಡಬೇಕು. ಸಿಬ್ಬಂದಿಯ ವೇತನ ಕೊಟ್ಟು ಕಾರ್ಖಾನೆ ಆರಂಭಿಸಬೇಕು. ಸಿಎಂ ಬೊಮ್ಮಾಯಿ ಜತೆ ಚರ್ಚೆ ವೇಳೆ ಇದನ್ನು ಹೇಳಿದ್ದೇನೆ. ಸಚಿವ ಮುರುಗೇಶ್ ನಿರಾಣಿಯನ್ನು ಕರೆಸಿ ಚರ್ಚಿಸಿದ್ದೇನೆ ಎಂದು ಸಚಿವ ಕಾರಜೋಳ ಹೇಳಿದರು.

ಈ ಕಾರ್ಖಾನೆ ರಾಜಕೀಯ ವೇದಿಕೆ ಆಗಬಾರದು. ಯಾರಾದರೂ ಬಂದು ರಾಜಕೀಯ ತೀರಿಸಿಕೊಳ್ಳಲು ಭಾಷಣ ಮಾಡುವವರಿಗೆ ಅವಕಾಶ ಕೊಡಬೇಡಿ. ಪ್ರಮಾಣಿಕವಾಗಿ ಬೆಂಬಲ ಕೊಡುವವರಿಗೆ ಸ್ವಾಗತ ಮಾಡಿ. ಆದರೆ ಇಲ್ಲಿ ಕೆಲವರು ಎಮ್ಎಲ್ಎ, ಎಂಪಿ ಆಗುವ ಸಲುವಾಗಿ ಭಾಷಣ ಮಾಡುತ್ತಿದ್ದಾರೆ. 1994 ರಲ್ಲಿ ಕಾರ್ಖಾನೆ ಆರಂಭಕ್ಕೆ ಅಡ್ಡಿ ಮಾಡಿದವರು ಯಾರು ಅಂತ ನಿಮಗೆ ಗೊತ್ತಿದೆ ಎಂದು ಆರ್.ಬಿ ತಿಮ್ಮಾಪುರ ಬಗ್ಗೆ ಹೇಳಿದರು.

ನಾನು ಬದುಕಿರುವವರೆಗೆ ಕಾರ್ಖಾನೆ ಹೊಗೆ ಹೋಗಬೇಕು ಅಂತ ಹೇಳಿದ್ದೇನೆ. ಎಮ್ಎಲ್ಎ, ಎಮ್​ಪಿ ಆಗುತ್ತೀನಿ ಅಂತ ಅಂದುಕೊಂಡರೆ ಏನು ಮಾಡುವುದಕ್ಕೆ ಆಗಲ್ಲ. ಅಂಥವರು ಈ ಜನ್ಮದಲ್ಲೇ ಎಮ್ಎಲ್ಎ, ಎಮ್​ಪಿ ಆಗಲ್ಲ ಎಂದರು. ಇದೇ ವೇಳೆ ಮಾತನಾಡಿದ ಅವರು, ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಾಗ ನೀವು ಯಾಕೆ ಬೆಂಬಲಕ್ಕೆ ನಿಲ್ಲಲಿಲ್ಲ? ನನಗೆ ಎಷ್ಟು ನೋವಾಗಿದೆ ಗೊತ್ತಾ? ಸರಕಾರದಿಂದ ಆಗ ಷೇರು ಹಣ ತಂದು ಕೊಟ್ಟಿದ್ದೇನೆ. ತರುವಾಗ ಕಣ್ಣೀನ ನೀರು ಕಪಾಳಕ್ಕೆ ಬಂದಿದ್ದವು. ಎಲ್ಲ ಮಾಡಿಯೂ ನನ್ನ ಕೆಳಗಿಳಿಸಿದರು ಎಂದು ತಿಳಿಸಿದರು.

ಇದನ್ನೂ ಓದಿ

ದೇಶದಾದ್ಯಂತ ಚಳುವಳಿ ಮುಂದುವರಿಸಲು ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದೇವೆ: ರೈತ ನಾಯಕ ರಾಕೇಶ್ ಟಿಕಾಯತ್ ಸಕ್ಕರೆ ಕಾರ್ಖಾನೆ ವಿರುದ್ಧ ಸಿಡಿದ್ದೆದ್ದ ರೈತ ಮುಖಂಡರು; ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಅಹೋರಾತ್ರಿ ಧರಣಿ

(Govinda Karajola received a plea from Ranna sugar factory workers in Bagalkot)