ಬಾಗಲಕೋಟೆ: ಜಿಲ್ಲೆಯಲ್ಲಿ ದಿನೇ ದಿನೇ ನಕಲಿ ಬಾಬಾಗಳ ಹಾವಳಿ ಹೆಚ್ಚಾಗಿದೆ. ಇವರಿಂದ ಜನ ನಂಬಿ ಮೋಸ ಹೋಗುತ್ತಿದ್ದಾರೆ. ನಗರದ ಎಸ್ಪಿ ಕಚೇರಿ ಪಕ್ಕದಲ್ಲೇ ಬಾಬಾಗಳ ವಂಚನೆ ನಡೆಯುತ್ತಿದೆ. ನಕಲಿ ಬಾಬಾಗಳು ಮುಗ್ಧ ಜನರನ್ನು ನಂಬಿಸಿ ದುಡ್ಡು ಮಾಡುತ್ತಿದ್ದಾರೆ.
ಇಲ್ಲಿ ಬಾಬಾಗಳು ಮುಲಾಮು ಹಚ್ಚಿದ್ರೆ ಕೈ ಕಾಲು ಬೇನೆ ಮಾಯಾವಾಗುತ್ತಂತೆ. ಒಂದು ಗ್ಲಾಸ್ನಲ್ಲಿ ನೀಲಗಿರಿ ಬೀಜ ನೆನೆಸಿಟ್ಟು, ಆ ನೀರನ್ನು ಕುಡಿದ್ರೆ ಕೆಮ್ಮು ಮಂಗಮಾಯವಾಗುತ್ತಂತೆ ಎಂಬ ಪುಕಾರುಗಳು ಹೆಚ್ಚಾಗಿದ್ದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಮೂಲದ ಬಾಬಾಗಳು ಜನರನ್ನು ಮೂಢರಂನಾಗಿಸಿ ವಂಚಿಸುತ್ತಿದ್ದಾರೆ.
ಇನ್ನು ಈ ವಂಚನೆ ಜಾಲದ ನೇತೃತ್ವ ಪಡೆದಿರೋದು ಲಾಲಸಾಬ್ ಪೈಲ್ವಾನ್ ಎಂಬ ಬಾಬಾ. ಇವರೆಲ್ಲಾ ಆಯುರ್ವೇದಿಕ್ ಚಿಕಿತ್ಸೆ ನೀಡುವ ನೆಪದಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಂದ 150-200ರಂತೆ ಸಾವಿರಾರು ಜನರಿಂದ ಯಾವುದರ ಭಯವಿಲ್ಲದೇ ರಾಜಾರೋಷವಾಗಿ ಹಣ ಸುಲಿಗೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ವಂಚನೆ ನಡೆಯುತ್ತಿದ್ರೂ ಪೊಲೀಸ್ ಇಲಾಖೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
Published On - 2:44 pm, Mon, 17 February 20