ಬಾಗಲಕೋಟೆ: ಒಂದೇ ಟ್ರ್ಯಾಕ್ಟರ್ ಇಂಜಿನ್ಗೆ ಕಬ್ಬು ತುಂಬಿದ್ದ 16 ಟ್ರೇಲರ್ ಜೋಡಿಸಿ ರೈತರು ಸಾಹಸ ಪ್ರದರ್ಶಿಸಿದ್ದಾರೆ. ಮುಧೋಳ ತಾಲೂಕಿನ ಉತ್ತೂರು ಗ್ರಾಮದ ರೈತರು ಹೊಸ ದಾಖಲೆಯನ್ನೇ ಬರೆದಿದ್ದಾರೆ. ರೈತರಾದ ಪುಂಡಲೀಕ ಕೊಳೂರ ಅವರು ತಮ್ಮ ಟ್ರ್ಯಾಕ್ಟರ್ ಬಳಸಿ ತಮ್ಮದೇ ಹೊಲದಲ್ಲಿನ ಕಬ್ಬನ್ನು ಸ್ನೇಹಿತರ ಜೊತೆ ಸೇರಿ ಈ ಸಾಹಸ ಮೆರೆದಿದ್ದಾರೆ.
16 ಜನರ ತಂಡದಿಂದ 16 ಟ್ರೇಲರ್ ಕಬ್ಬು ಲೋಡ್ ಮಾಡಿ 16 ಟ್ರೇಲರ್ ಮೂಲಕ ಕಬ್ಬನ್ನು ಐಸಿಪಿಎಲ್ ಕಾರ್ಖಾನೆಗೆ ಸಾಗಿಸಿದ್ದಾರೆ. ಕಳೆದ ವಾರ ಇದೇ ರೀತಿ 12 ಟ್ರೇಲರ್ ಕಬ್ಬು ಸಾಗಿಸಿ ದಾಖಲೆ ಮಾಡಿದ್ದರು ಈಗ16 ಟ್ರೇಲರ್ ಕಬ್ಬು ಲೋಡ್ ಮಾಡಿ ತಮ್ಮ ದಾಖಲೆಯನ್ನೇ ಮುರಿದಿದ್ದಾರೆ. ಈ ದಾಖಲೆ ವೀಕ್ಷಿಸಲು ರಸ್ತೆಯುದ್ದಕ್ಕೂ ಜನಸಾಗರವೇ ನೆರದಿತ್ತು.
Published On - 2:59 pm, Fri, 14 February 20