ವಿವಾದದಲ್ಲಿ ವಿಜಯಾನಂದ ಕಾಶಪ್ಪನವರ: 2ನೇ ಮದುವೆ ವಿಚಾರಕ್ಕೆ ಮತ್ತೆ ರೆಕ್ಕೆಪುಕ್ಕ

| Updated By: ವಿವೇಕ ಬಿರಾದಾರ

Updated on: Jul 23, 2022 | 4:26 PM

ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಹೆಸರಿನ ಮಗು ಜನನ ಪ್ರಮಾಣಪತ್ರ ವೈರಲ್ ಆಗುತ್ತಿದ್ದು, ಅದರಲ್ಲಿ ತಂದೆ ವಿಜಯಾನಂದ ಕಾಶಪ್ಪನವರ್​ ತಾಯಿ ಪೂಜಾಶ್ರಿ ಎಸ್​ ಎಂದು ಉಲ್ಲೇಖವಾಗಿದೆ.

ವಿವಾದದಲ್ಲಿ ವಿಜಯಾನಂದ ಕಾಶಪ್ಪನವರ: 2ನೇ ಮದುವೆ ವಿಚಾರಕ್ಕೆ ಮತ್ತೆ ರೆಕ್ಕೆಪುಕ್ಕ
ವೈರಲ್​ ಆಗಿರುವ ಚಿತ್ರ
Follow us on

ಬಾಗಲಕೋಟೆ: ತಂದೆಯ ಕಾಲಂ ಎದುರಿನಲ್ಲಿ ‘ವಿಜಯಾನಂದ ಕಾಶಪ್ಪನವರ’ ಎಂಬ ಉಲ್ಲೇಖವಿರುವ ಜನನ ಪ್ರಮಾಣಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಹೆಸರು ಹುನಗುಂದ (Hungund) ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ (Vijayanand Kashappanavar) ಅವರದೇ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ವೈರಲ್ ಆಗಿರುವ ಪ್ರಮಾಣ ಪತ್ರದಲ್ಲಿ ತಾಯಿಯ ಹೆಸರು ‘ಪೂಜಾಶ್ರಿ ಎಸ್’ ಎಂದು ಉಲ್ಲೇಖಗೊಂಡಿದೆ. ಇದು ವಿಜಯಾನಂದ ಕಾಶಪ್ಪನವರ ಅವರು ಪೂಜಾಶ್ರಿ ಎಂಬ ನಟಿಯ ಜೊತೆ  ಎರಡನೇ ಮದುವೆ ಆಗಿದ್ದಾರಾ ಎಂಬ ಅನುಮಾನಗಳಿಗೆ ಕಾರಣವಾಗಿದೆ. ಇವರ ಮದುವೆ (Marriage) ಒಂದು ವರ್ಷದ ಹಿಂದೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಜನನ ಪ್ರಮಾಣ ಪತ್ರದಲ್ಲಿ ಮಗು 1-9-2021 ರಲ್ಲಿ ಹುಟ್ಟಿದ್ದು, ಹೆಣ್ಣುಮಗುವಿನ ಹೆಸರು ಉಲ್ಲೇಖವಾಗಿದೆ. ಜನ್ಮಸ್ಥಳ ಮದರ್ ಹುಡ್ ಆಸ್ಪತ್ರೆ ಬೆಂಗಳೂರು. ನೊಂದಣಿ ದಿನಾಂಕ 22-09-2021 ಎಂದು ಉಲ್ಲೇಖವಾಗಿದೆ. ವಿಜಯಾನಂದ ಕಾಶಪ್ಪನವರ  ಮತ್ತು ಮೊದಲ ಪತ್ನಿ ವೀಣಾ ಕಾಶಪ್ಪನವರ ಅವರ ಮಧ್ಯೆ ಒಂದು ವರ್ಷದ ಹಿಂದೆ ಜಗಳವಾಗಲು 2ನೇ ಮದುವೆಯೇ ಮುಖ್ಯ ಕಾರಣ ಎಂಬ ಮಾತು ಬಾಗಲಕೋಟೆಯಲ್ಲಿ ಈ ಹಿಂದೆ ಕೇಳಿಬಂದಿತ್ತು.

ಬಾಗಲಕೋಟೆ  ಜಿಲ್ಲಾ ಪಂಚಾಯತ್  ಮಾಜಿ ಅಧ್ಯಕ್ಷೆಯಾಗಿದ್ದ ವೀಣಾ ಕಾಶಪ್ಪನವರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ತಿಳಿಯದೆ ಹೇಗೆ ಮಾತನಾಡಲಿ: ಕಾಶಪ್ಪನವರ

ಮಗುವಿನ ಜನನ ಪ್ರಮಾಣ ಪತ್ರ ವೈರಲ್ ಆಗಿರುವ ಕುರಿತು ’ಟಿವಿ9’ ಪ್ರತಿನಿಧಿಗೆ ಪ್ರತಿಕ್ರಿಯಿಸಿದ ವಿಜಯಾನಂದ ಕಾಶಪ್ಪನವರ, ‘ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಮಾಹಿತಿ ಇಲ್ಲದೆ ಏನು ಮಾತಾಡಲಿ’ ಎಂದಷ್ಟೇ ಹೇಳಿದರು. ಫೊಟೋ ವೈರಲ್ ಬಗ್ಗೆ ನನಗೆ ಈ ಬಗ್ಗೆ ಗೊತ್ತಿಲ್ಲ. ನನಗೆ ದಾಖಲೆ ಕೊಡಿ. ದಾಖಲೆ ಕೊಟ್ಟರೆ ನಾನು ಮಾತನಾಡುತ್ತೇನೆ. ನಾನು ಇದಕ್ಕೆ ಪ್ರತಿಕ್ರಿಯೆ ನೀಡಲ್ಲ ಎಂದರು.

ವಯಕ್ತಿಕ ಬದುಕಿಗೆ ಹೋಗಬಾರದು. ವಯಕ್ತಿಕ ಜೀವನವೇ ಬೇರೆ,ರಾಜಕೀಯವೇ ಬೇರೆ. ವಿರೋಧಿಗಳು ಹೀಗೆ ಮಾಡೋದು ಸಹಜ ಎಂದು ಹೇಳಿದರು.

Published On - 3:06 pm, Sat, 23 July 22