ಬಳ್ಳಾರಿ, ಮಾರ್ಚ್ 26: ದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Election) ಕಾವು ಜೋರಾಗಿದೆ. ಮತದಾರರಿಗೆ ಹಣ-ಹೆಂಡ ಮತ್ತು ಉಡುಗೊರೆಗಳ ಮೂಲಕ ಆಮಿಷ ಒಡ್ಡಲಾಗುತ್ತಿದೆ. ಇದರ ಮೇಲೆ ಚುನಾವಣಾ ಅಧಿಕಾರುಗಳು ಕಣ್ಣಿಟ್ಟಿದ್ದಾರೆ. ಇನ್ನು ಬಳ್ಳಾರಿ (Ballary) ಗಣಿಧಣಿಗಳ ನಾಡು. ಚುನಾವಣೆಯ ಸಮಯದಲ್ಲಿ ಇಲ್ಲಿ ಹಣ ಹೊಳೆಯೇ ಹರಿಯುತ್ತದೆ. ಹಣ ಮತ್ತು ಉಡುಗೊರೆಗಳನ್ನು ಎಗ್ಗಿಲ್ಲದೆ ಹಂಚಲಾಗುತ್ತದೆ. ಮಾರ್ಚ್ 28ರಂದು ಬಳ್ಳಾರಿ ಮಹಾನಗರ ಪಾಲಿಕೆಯ (Bellary Municipal Corporation) ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ. ಪಾಲಿಕೆಯ ಗದ್ದುಗೆ ಏರಲು ಆಕಾಂಕ್ಷಿಗಳು ಬರಪೂರ ಉಡುಗೊರೆಗಳನ್ನು ಹಂಚುತ್ತಿದ್ದಾರೆ.
ಮುಲ್ಲಂಗಿ ನಂದೀಶ್, ಗಾದೆಪ್ಪ, ಪೇರಂ ವಿವೇಕ್ ಮತ್ತು ಪಕ್ಷೇತರ ಸದಸ್ಯ ಪ್ರಭಂಜನ್, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಕಾಂಕ್ಷಿಗಳಾಗಿದ್ದಾರೆ. ಮೂವರು ಪಾಲೆಕೆ ಸದಸ್ಯರ ಮನೆ – ಮನೆಗೆ ಹೋಗಿ ಊಡೂಗೊರೆ ಕೊಟ್ಟು ಬರುತ್ತಿದ್ದಾರೆ.
ಇದನ್ನೂ ಓದಿ: ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣು: ರಾಜ್ಯದ ವಿವಿಧಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ವಸ್ತುಗಳು ಜಪ್ತಿ
ಮುಲ್ಲಂಗಿ ನಂದೀಶ್ ಪಾಲಿಕೆ ಸದಸ್ಯರಿಗೆ ಬೆಳ್ಳಿ ತಟ್ಟೆ ಮತ್ತು ಕಾಂಗ್ರೆಸ್ ಚಿಹ್ನೆ ಇರುವ ಬಂಗಾರದ ಚಿಕ್ಕ ಆಭರಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಪಕ್ಷೇತರ ಸದಸ್ಯ ಪ್ರಭಂಜನ್ ರೇಷ್ಮೆ ಪಂಚೆ, ಸೀರೆ ಮತ್ತು ಇನ್ನಿಬ್ಬರುಡ್ರೈಪ್ರೂಟ್ಸ್ ಬಾಕ್ಸ್ ನೀಡಿ ಸನ್ಮಾನ ಮಾಡುತ್ತಿದ್ದಾರೆ.
ಒಟ್ಟು 39 ಸದ್ಯರ ಪೈಕಿ 21 ಕಾಂಗ್ರೆಸ್, 5 ಪಕ್ಷೇತರರು ಮತ್ತು 13 ಬಿಜೆಪಿ ಸದಸ್ಯರಿದ್ದಾರೆ. ಕೆಲವು ಸದಸ್ಯರು ಬಳ್ಳಾರಿ ಶಾಸಕ ಭರತ್ ರೆಡ್ಡಿ ಬೆಂಬಲಿಗರಾಗಿದ್ದರೇ, ಕೆಲವರು ಸಚಿವ ನಾಗೇಂದ್ರ ಬೆಂಬಲಿಗರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ