ಚಲಿಸುವ ರೈಲಿನಿಂದ ಬಿದ್ದು ಯುವಕ-ಯುವತಿ ಸಾವು ಪ್ರಕರಣಕ್ಕೆ ತಿರುವು; ಮೃತರು ಅಜ್ಮೀರ್ ಮೂಲದ ದಂಪತಿ

Bellari Railway: 50 ಅಡಿ ದೂರದಲ್ಲಿ ಯುವತಿ ಹಾಗೂ ಯುವಕನ ಶವ ಪತ್ತೆಯಾಗಿದೆ. ಶವದ ಬಳಿ ಮೊಬೈಲ್ ಪತ್ತೆಯಾಗಿದ್ದು, ನಜ್ಜುಗುಜ್ಜಾಗಿರೋ ಮೊಬೈಲ್ ಅನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಲಿಸುವ ರೈಲಿನಿಂದ ಬಿದ್ದು ಯುವಕ-ಯುವತಿ ಸಾವು ಪ್ರಕರಣಕ್ಕೆ ತಿರುವು; ಮೃತರು ಅಜ್ಮೀರ್ ಮೂಲದ ದಂಪತಿ
ಹೊಸಪೇಟೆ: ಚಲಿಸುವ ರೈಲಿನಿಂದ ಬಿದ್ದು ಯುವಕ- ಯುವತಿ ಸಾವು
Edited By:

Updated on: Mar 12, 2022 | 10:05 PM

ವಿಜಯನಗರ: ಚಲಿಸುವ ರೈಲಿನಿಂದ ಬಿದ್ದು ಯುವಕ- ಯುವತಿ ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿತ್ತು. ಇವರಿಬ್ಬರೂ ಬಳ್ಳಾರಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲಿನಿಂದ ಬಿದ್ದಿರೋ ಶಂಕೆ ವ್ಯಕ್ತವಾಗಿತ್ತು. 50 ಅಡಿ ದೂರದಲ್ಲಿ ಯುವತಿ ಹಾಗೂ ಯುವಕನ ಶವ ಪತ್ತೆಯಾಗಿತ್ತು. ಮೃತರಿಬ್ಬರೂ ಗಂಡ-ಹೆಂಡತಿಯಾಗಿದ್ದು, ಮುಕೇಶ (30) ಮತ್ತು ಭಗವತಿ (25 ವರ್ಷ) ಎಂದು ಗುರುತಿಸಲಾಗಿದೆ. ಮುಕೇಶ, ಟೈಲ್ಸ್ ಕೆಲಸ ಮಾಡುತ್ತಿದ್ದ ಕಾರ್ಮಿಕ. ಮೃತರಿಬ್ಬರು ಅಜ್ಮೀರ್ ದ ನಿವಾಸಿಗಳು. ದಂಪತಿ ಟೈಲ್ಸ್ ಕೆಲಸಕ್ಕಾಗಿ ಅಜ್ಮೀರದಿಂದ ಬೆಂಗಳೂರಿಗೆ, ಹುಬ್ಬಳ್ಳಿ ಮಾರ್ಗವಾಗಿ ತೆರಳುಚವ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಮೃತ ಯುವಕನ ಸಹೋದರ ತಿಳಿಸಿದ್ದಾರೆ. ಬಾಗಿಲು ಬಳಿ ಕುಳಿತಿದ್ದ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಬಳ್ಳಾರಿಯ ರೈಲ್ವೆ ಪೊಲೀಸರು (Bellari Railway Police) ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಮನನೊಂದು ವಿಚಾರಣಾಧೀನ ಕೈದಿ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು
ಬಳ್ಳಾರಿ: ಮನನೊಂದು ವಿಚಾರಣಾಧೀನ ಖೈದಿ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆ ಕುಡಿತಿನಿ ಗ್ರಾಮದ ಪೀರ್​ ಸಾಬ್ (28) ಆತ್ಮಹತ್ಯೆ ಮಾಡಿಕೊಂಡ ಕೈದಿ. ಜಿಂದಾಲ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಪೀರಸಾಬ್ ಪತ್ನಿ ಮೇಲೆ ಹಲ್ಲೆ ಹಾಗೂ ಕಿರುಕುಳ ಆರೋಪದಲ್ಲಿ ಜೈಲು ಸೇರಿದ್ದ ಆರೋಪಿ. ಮೂರು ದಿನದ ಹಿಂದೆ ಪೀರ್​ಸಾಬ್ ಪತ್ನಿಯಿಂದ ಕುಡತಿನಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಪೀರ್​ ಸಾಬ್ ಜೈಲಿನ ಅಡುಗೆ ಕೋಣೆಯಲ್ಲಿ ತಾನು ಹಾಕಿಕೊಳ್ಳುವ ಶರ್ಟ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ನ್ಯಾಯಾಧೀಶರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಕ್ಷೇತ್ರಗಳಿಗೆ ಬಿಜೆಪಿ ಸರ್ಕಾರದಿಂದ ನಿರಂತರ ತಾರತಮ್ಯ ನಡೆಯುತ್ತಿದೆ: ರಾಮಲಿಂಗಾ ರೆಡ್ಡಿ ಗರಂ

ಇದನ್ನೂ ಓದಿ:
ಕೇಂದ್ರದಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಆಗಿಲ್ಲವೆಂಬುದು ವಾಸ್ತವ, ಬೊಮ್ಮಾಯಿ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ -ದೇವೇಗೌಡ

Published On - 3:29 pm, Sat, 12 March 22