ಱಗಿಂಗ್​ ತಡೆಗಟ್ಟಲು ಹಂಪಿ ವಿವಿ ಪ್ಲ್ಯಾನ್, ಬಾಂಡ್ ಪೇಪರ್​ ಕಂಡು ಹೌಹಾರಿದ ಸ್ಟೂಡೆಂಟ್ಸ್!

|

Updated on: Feb 27, 2020 | 2:38 PM

ಬಳ್ಳಾರಿ: ಆ ವಿವಿಯಲ್ಲಿ ಱಗಿಂಗ್ ಅನ್ನೋ ತಪ್ಪಿಸೋಕೆ ಹೊಸ ಐಡಿಯಾ ಮಾಡಲಾಗಿದೆ. ವಿವಿ ಆಡಳಿತ ಮಂಡಳಿಯ ಐಡಿಯಾಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಅದರಲ್ಲಿರುವ ಒಂದು ನಿಯಮ ವಿದ್ಯಾಗಳ ಆತಂಕಕ್ಕೆ ಕಾರಣವಾಗಿದೆ. ಕಾಲೇಜ್ ಅಂದ್ರೆ ಹಾಗೇ.. ಅಲ್ಲಿ ಱಗಿಂಗ್ ಅನ್ನೋದು ಇದ್ದೇ ಇರುತ್ತೆ. ಸಿನಿಯರ್ಸ್ ಜ್ಯೂನಿಯರ್ಸ್‌ಗೆ ಱಗ್ ಮಾಡ್ತಾನೆ ಇರ್ತಾರೆ. ಈಗ ಇದೆ ಱಗಿಂಗ್ ವಿಚಾರಕ್ಕೆ ಹಂಪಿಯ ಕನ್ನಡ ವಿವಿ ಸದ್ದು ಮಾಡುತ್ತಿದೆ. ಯೆಸ್‌, ಕನ್ನಡ ನಾಡು, ನುಡಿ, ಭಾಷೆ ಬೆಳವಣಿಗೆ ಇರುವ ಏಕೈಕ ವಿಶ್ವವಿದ್ಯಾಲಯ ಅಂದ್ರೆ […]

ಱಗಿಂಗ್​ ತಡೆಗಟ್ಟಲು ಹಂಪಿ ವಿವಿ ಪ್ಲ್ಯಾನ್, ಬಾಂಡ್ ಪೇಪರ್​ ಕಂಡು ಹೌಹಾರಿದ ಸ್ಟೂಡೆಂಟ್ಸ್!
Follow us on

ಬಳ್ಳಾರಿ: ಆ ವಿವಿಯಲ್ಲಿ ಱಗಿಂಗ್ ಅನ್ನೋ ತಪ್ಪಿಸೋಕೆ ಹೊಸ ಐಡಿಯಾ ಮಾಡಲಾಗಿದೆ. ವಿವಿ ಆಡಳಿತ ಮಂಡಳಿಯ ಐಡಿಯಾಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಅದರಲ್ಲಿರುವ ಒಂದು ನಿಯಮ ವಿದ್ಯಾಗಳ ಆತಂಕಕ್ಕೆ ಕಾರಣವಾಗಿದೆ.

ಕಾಲೇಜ್ ಅಂದ್ರೆ ಹಾಗೇ.. ಅಲ್ಲಿ ಱಗಿಂಗ್ ಅನ್ನೋದು ಇದ್ದೇ ಇರುತ್ತೆ. ಸಿನಿಯರ್ಸ್ ಜ್ಯೂನಿಯರ್ಸ್‌ಗೆ ಱಗ್ ಮಾಡ್ತಾನೆ ಇರ್ತಾರೆ. ಈಗ ಇದೆ ಱಗಿಂಗ್ ವಿಚಾರಕ್ಕೆ ಹಂಪಿಯ ಕನ್ನಡ ವಿವಿ ಸದ್ದು ಮಾಡುತ್ತಿದೆ.

ಯೆಸ್‌, ಕನ್ನಡ ನಾಡು, ನುಡಿ, ಭಾಷೆ ಬೆಳವಣಿಗೆ ಇರುವ ಏಕೈಕ ವಿಶ್ವವಿದ್ಯಾಲಯ ಅಂದ್ರೆ ಅದು ಹಂಪಿಯ ಕನ್ನಡ ವಿವಿ. ಪದವಿಗಳಿಗಿಂತ ಸಂಶೋಧನೆಗೆ ಈ ವಿವಿಯಲ್ಲಿ ಹೆಚ್ಚು ಪ್ರಾಮುಖ್ಯತೆಯಿದೆ. ಉನ್ನತ ವ್ಯಾಸಂಗಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಈ ವಿವಿಗೆ ವಿದ್ಯಾಭ್ಯಾಸ ಮಾಡಲು ಬರುತ್ತಾರೆ.

ಆದ್ರೆ, ವಿವಿ ಕ್ಯಾಂಪಸ್‌ನಲ್ಲಿ ಱಗಿಂಗ್ ತಡೆಯಲು ವಿವಿ ಆಡಳಿತ ಮಂಡಳಿ ಈ ವರುಷ 20 ರೂ ಬಾಂಡ್ ಪೇಪರ್ ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಕಡೆಯಿಂದ ದೃಢೀಕರಣ ಪತ್ರ ಬರೆಸಿಕೊಳ್ಳುತ್ತಿದೆ. ಇದು ಮೇಲ್ನೋಟಕ್ಕೆ ಒಳ್ಳೆಯ ಐಡಿಯಾ ಅನಿಸಿದ್ರು. ದೃಢೀಕರಣ ಪತ್ರದಲ್ಲಿರುವ 7ನೇ ಅಂಶ ವಿದ್ಯಾರ್ಥಿಗಳಿಗೆ ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ವಿವಿ ನೀಡುವ ಪ್ರೋತ್ಸಾಹ ಧನ ಹಾಗೂ ಶಿಷ್ಯವೇತನವನ್ನು ನಿರೀಕ್ಷಿಸುವಂತಿಲ್ಲ ಎಂಬ ಅಂಶ ಸಹಜವಾಗಿ ವಿದ್ಯಾರ್ಥಿಗಳ ನಿದ್ದೆಗೆಡಸಿದೆ.

ವಿಶ್ವವಿದ್ಯಾಲಯದ ಎಸ್ಇಪಿ, ಟಿಎಸ್‌ಪಿ ಅನುದಾನದಲ್ಲಿ ಎಸ್‌ಸಿ.ಎಸ್‌ಸ್ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ಪ್ರೋತ್ಸಾಹ ಧನ ವಿತರಣೆ ಮಾಡದಿರಲು ವಿವಿ ಚಿಂತನೆ ಮಾಡುತ್ತಿದೆಯಾ ಎಂಬ ಅನುಮಾನ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ವಿಶ್ವವಿದ್ಯಾಲಯದಲ್ಲಿ 300ಕ್ಕೂ ಹೆಚ್ಚು ಎಸ್ಸಿ, ಎಸ್ ಟಿ ವಿದ್ಯಾರ್ಥಿಗಳಿದ್ದು, ಇವರೆಲ್ಲರಿಗೂ ಎಸ್ಇಪಿ ಹಾಗೂ ಟಿಎಸ್‌ಪಿ ಅನುದಾನದಲ್ಲಿಯೇ ಮಾಸಿಕ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಅದರಂತೆ ವಿದ್ಯಾರ್ಥಿಗಳಿಗೆ ಪ್ರತಿತಿಂಗಳು 10 ಸಾವಿರ ನೀಡಲಾಗುತ್ತಿದೆ. ಕಳೆದ ವರ್ಷ ಪ್ರೋತ್ಸಾಹ ಧನ ವಿತರಣೆ ವಿಳಂಬವಾಗಿತ್ತು. ಇದಕ್ಕೆ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಮಾಡಿದ್ದರು.

ಯುಜಿಸಿ ನಿಯಮದ ಪ್ರಕಾರ ಱಗಿಂಗ್ ತಡೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಬಾಂಡ್ ಪತ್ರ ಬರೆಸಿಕೊಳ್ಳುವುದೇನೋ ಸರಿ. ಆದರೆ ಅದರಲ್ಲಿ ಉಲ್ಲೇಖವಾಗಿರುವ ಪ್ರೋತ್ಸಾಹ ಹಾಗೂ ಶಿಷ್ಯವೇತನ ನಿರೀಕ್ಷಿಸಬಾರದು ಎಂಬುವುದು ವಿವಿ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

Published On - 2:37 pm, Thu, 27 February 20