ಜನಾರ್ದನ ರೆಡ್ಡಿ ರಣಹೇಡಿ, ನಮ್ಮನ್ನ ಬಳಸಿಕೊಂಡು ಅಕ್ರಮವಾಗಿ ಹಣ ಗಳಿಸಿದ, ತನ್ನ ಬೇಳೆ ಬೇಯಿಸಿಕೊಂಡ – ತಮ್ಮನ ವಿರುದ್ಧ ಅಣ್ಣ ಸೋಮಶೇಖರ ರೆಡ್ಡಿ ಫುಲ್ ಬ್ಲಾಸ್ಟ್​​

|

Updated on: Jun 01, 2023 | 4:16 PM

Somashekar reddy: ಅಷ್ಟೇ ಅಲ್ಲ. ಜನಾ ರೆಡ್ಡಿಯ ಚಿಕ್ಕಂದಿನಿಂದ ಯಾರೇ ಆಗಲಿ ಅವನ ಕೈ ಕೆಳಗೆ ಇರಬೇಕು. ಅವನು ಹೇಳಿದ್ದು ಕೇಳಲಿಲ್ಲ ಅಂದ್ರೆ ಎಲ್ಲರನ್ನೂ ಡೆಮಾಲಿಷ್ ಮಾಡ್ತಾನೆ. ಆದರೆ ಮುಂದೆ, ಸಂಸತ್ ಚುನಾವಣೆಯಲ್ಲಿ ನಮ್ಮ ಬಲ ತೋರಿಸುತ್ತೇವೆ - ತಮ್ಮನಿಗೆ ಸೋಮಶೇಖರ ರೆಡ್ಡಿ ಭರ್ಜರಿ ಸವಾಲ್!

ಜನಾರ್ದನ ರೆಡ್ಡಿ ರಣಹೇಡಿ, ನಮ್ಮನ್ನ ಬಳಸಿಕೊಂಡು ಅಕ್ರಮವಾಗಿ ಹಣ ಗಳಿಸಿದ, ತನ್ನ ಬೇಳೆ ಬೇಯಿಸಿಕೊಂಡ - ತಮ್ಮನ ವಿರುದ್ಧ ಅಣ್ಣ ಸೋಮಶೇಖರ ರೆಡ್ಡಿ ಫುಲ್ ಬ್ಲಾಸ್ಟ್​​
ಜನಾರ್ದನ ರೆಡ್ಡಿ ರಣಹೇಡಿ - ಅಣ್ಣನ ವಿರುದ್ಧ ತಮ್ಮ ಸೋಮಶೇಖರ ರೆಡ್ಡಿ ಫುಲ್ ಬ್ಲಾಸ್ಟ್​​
Follow us on

ಬಳ್ಳಾರಿ: ಕಿರಿಯ ಸಹೋದರ ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhan reddy) ವಿರುದ್ದ ಬಳ್ಳಾರಿಯಲ್ಲಿ (Bellary) ಮಾಜಿ ಶಾಸಕ ಜಿ ಸೋಮಶೇಖರ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕುಟುಂಬದ ಜಗಳ ಮತ್ತೊಮ್ಮೆ ಬೀದಿಗೆ ಬಿದ್ದಿದೆ. ಇದೇ ಜನಾರ್ದನ ರೆಡ್ಡಿ ಹಿಂದೆ ಎಲ್ಲರನ್ನೂ ಖರೀದಿ ಮಾಡಿ ಮತ್ತೊಬ್ಬ ಸೋದರ ಕರುಣಾಕರ ರೆಡ್ಡಿಯನ್ನ ಗೆಲ್ಲಿಸಿದ್ದರು. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇರುವವರನ್ನ ಖರೀದಿ ಮಾಡಿ ಅವರದೇ ಕೆಆರ್ ಪಿಪಿ ಪರವಾಗಿ ಕೆಲಸ ಮಾಡಿಕೊಂಡರು ಎಂದು ಸೂಕ್ಷ್ಮವಾಗಿ ಜನಾ ರೆಡ್ಡಿ ಕಾರ್ಯವೈಖರಿ ಬಗ್ಗೆ ಹೇಳಿದ್ದಾರೆ. ನಮ್ಮ ವಿರುದ್ದ ಜನಾರ್ದನರೆಡ್ಡಿ ರಣಹೇಡಿ (Coward) ಅಂತಾ ಪದ ಬಳಸಿದ್ದಾರೆ. ನಮಗೆ ಏನ್ ಪದ ಬಳಸಿ ಏನ್ ಮಾತನಾಡಿದ್ದಾರೆ, ಪರವಾಗಿಲ್ಲ ಹೇಳಿ ಅಂತಾನೂ ಪತ್ರಕರ್ತರಿಗೆ ಸೋಮಶೇಖರರೆಡ್ಡಿ (Somashekar reddy) ಕಿಚಾಯಿಸಿದರು. ಅಂದಹಾಗೆ ಮಾಜಿ ಹೆಡ್ ಕಾನ್ಸಟೇಬಲ್ ಪುತ್ರರಾದ ಗಾಲಿ ಕರುಣಾಕರ ರೆಡ್ಡಿ ಗಾಲಿ, ಸೋಮಶೇಖರ್ ರೆಡ್ಡಿ ಮತ್ತು ಗಾಲಿ ಜನಾರ್ದನ ರೆಡ್ಡಿ ಒಡಹುಟ್ಟಿದವರು. ಹಿರಿಯ ಸಹೋದರ ಕರುಣಾಕರ ರೆಡ್ಡಿ, ಮಧ್ಯದವರು ಸೋಮಶೇಖರ್ ರೆಡ್ಡಿ ಮತ್ತು ಕೊನೆಯ ಪುತ್ರ ಜನಾರ್ದನ ರೆಡ್ಡಿ.

ಅವನ ಮಾತು ಕೇಳಿದಿದ್ದರೆ ಎಲ್ಲರನ್ನೂ ಡೆಮಾಲಿಷ್ ಮಾಡ್ತಾನೆ:

ನಾನು ಬೆಳಸಿದ ಹೇಡಿಗಳು ಮನೆಯಲ್ಲಿದ್ದಾರೆ. ನಾನು ಸದನಕ್ಕೆ ಬಂದಿದ್ದೇನಿ ಅಂತಾ ಜನಾರ್ದನರೆಡ್ಡಿ ಹೇಳಿದ್ದಾರೆ. ನನಗೆ ಮತ್ತು ಶ್ರೀರಾಮುಲು, ಸೋಮಲಿಂಗಪ್ಪ, ಸುರೇಶಬಾಬು, ಕರುಣಾಕರರೆಡ್ಡಿಗೆ ರಣಹೇಡಿ ಅಂತಾ ಕರೆದಿದ್ದಾರೆ. ಆದರೆ ನಿಜವಾದ ರಣಹೇಡಿ ಜನಾರ್ದನರೆಡ್ಡಿ; ನಾವಲ್ಲ ಎಂದು ಸೋಮಶೇಖರರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ. ಅವನು ನಮ್ಮನ್ನ ಬಳಸಿಕೊಂಡು ಅವನ ಬೇಳೆ ಬೇಯಿಸಿಕೊಂಡ. ನಮ್ಮನ್ನ ಬಳಸಿಕೊಂಡು ಜನಾರ್ದನರೆಡ್ಡಿ ಅಕ್ರಮವಾಗಿ ಹಣ ಗಳಿಸಿದ. ನಿಜವಾದ ರಣಹೇಡಿ ನಾವಲ್ಲ. ಜನಾರ್ದನರೆಡ್ಡಿ ರಣಹೇಡಿ ಎಂದೂ ತಮ್ಮ ಹಳೆಯ ಗುಟ್ಟುಗಳನ್ನು ರಟ್ಟು ಮಾಡಿದ್ದಾರೆ.

ಅಷ್ಟೇ ಅಲ್ಲ. ಜನಾರ್ದನ ರೆಡ್ಡಿಯ ಚಿಕ್ಕಂದಿನಿಂದ ಒಂದು ಗುಣವನ್ನು ಜಾಲಾಡಿದ್ದಾರೆ. ಯಾರೇ ಆಗಲಿ ಅವರೆಲ್ಲಾ ಅವನ ಕೈ ಕೆಳಗೆ ಇರಬೇಕು. ಅವನು ಹೇಳಿದ್ದು ಕೇಳಲಿಲ್ಲ ಅಂದ್ರೆ ಅವನು ಎಲ್ಲರನ್ನೂ ಡೆಮಾಲಿಷ್ ಮಾಡ್ತಾನೆ. ಆದರೆ ಇಂದು ನಾವೆಲ್ಲಾ ಒಂದಾಗಿದ್ದೇವೆ. ನಾವೂ ಜನಾರ್ದನರೆಡ್ಡಿಯನ್ನ ಎದುರಿಸುತ್ತೇವೆ.  ಮುಂದೆ ಸಂಸತ್ ಚುನಾವಣೆಯಲ್ಲಿ ನಮ್ಮ ಬಲ ತೋರಿಸುತ್ತೇವೆ ಎಂದು ತಮ್ಮನಿಗೆ ಭರ್ಜರಿ ಸವಾಲ್ ಹಾಕಿದ್ದಾರೆ ಸೋಮಶೇಖರ ರೆಡ್ಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Thu, 1 June 23