Bellary: ಅನಧಿಕೃತವಾಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ ತಂಡ ಪೊಲೀಸರ ವಶಕ್ಕೆ

| Updated By: ವಿವೇಕ ಬಿರಾದಾರ

Updated on: Dec 21, 2022 | 10:36 PM

ಅನಧಿಕೃತವಾಗಿ ಮತದಾರರಿಂದ ಮಾಹಿತಿ ಸಂಗ್ರಹಿಸುತ್ತಿದ್ದ ದೆಹಲಿಯ ಖಾಸಗಿ ಸಂಸ್ಥೆಯ 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Bellary: ಅನಧಿಕೃತವಾಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ ತಂಡ ಪೊಲೀಸರ ವಶಕ್ಕೆ
ಅನಧಿಕೃತವಾಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದವರು ಪೊಲೀಸರ ವಶಕ್ಕೆ
Follow us on

ಬಳ್ಳಾರಿ: ಅನಧಿಕೃತವಾಗಿ ಮತದಾರರ ಮಾಹಿತಿ (Voters Information) ಸಂಗ್ರಹಿಸುತ್ತಿದ್ದ ದೆಹಲಿಯ ಖಾಸಗಿ ಸಂಸ್ಥೆಯ 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ತಂಡ ಹೊಸಪೇಟೆ (Hospet) ತಾಲೂಕಿನ ಕೊಂಡನಾಯಕನಹಳ್ಳಿಯಲ್ಲಿ ಅನಧಿಕೃತವಾಗಿ ಮಾಹಿತಿ ಸಂಗ್ರಹಿಸುತ್ತಿತ್ತು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು ಇಬ್ಬರು ಯುವತಿಯರು ಸೇರಿ 7 ಜನರನ್ನು ವಶಕ್ಕೆ ಪಡೆದಿದ್ದಾರೆ.

ನವದೆಹಲಿಯ (Delhi) ‘ಧ್ರುವ’ ಸರ್ವೆ ಸಂಸ್ಥೆಗೆ ಸೇರಿದ 7 ಜನರು ಈಗಾಗಲೇ ರಾಜ್ಯದ 12 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಯಲ್ಲಿ ನಾವು ಗುಪ್ತಚರ ಸಂಸ್ಥೆಯಿಂದ ಬಂದಿದ್ದೇವೆ. ವಿಧಾನಸಭೆ ಚುನಾವಣೆ ಕುರಿತು ಪ್ರತಿಯೊಬ್ಬರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಬರುವ ಚುನಾವಣೆಯಲ್ಲಿ ನೀವು ಯಾವ ಪಕ್ಷಕ್ಕೆ ಮತ ಚಲಾಯಿಸುತ್ತೀರಿ? ಯಾವ ಪಕ್ಷ ಗೆದ್ದರೆ ಉತ್ತಮ? ಹೀಗೆ ಹಲವು ರೀತಿಯ ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಪೊಲೀಸರ ಎದರು ಬಾಯಿ ಬಿಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೈಸೂರು ದಶಪಥ ರಸ್ತೆಗೆ ಕಾವೇರಿ ಎಕ್ಸ್‌ಪ್ರೆಸ್‌ವೇ ಎಂದು ಹೆಸರಿಡಲು ಪ್ರತಾಪ್ ಸಿಂಹ​, ನಿತಿನ್​ ಗಡ್ಕರಿಗೆ ಮನವಿ

ಇನ್ನು ಸರ್ವೆ ನಡೆಸುತ್ತಿದ್ದವರ ಬಳಿ ಖಾಸಗಿ ಕಂಪನಿಯ ಐ.ಡಿ. ಕಾರ್ಡ್‌ಗಳು ಪತ್ತೆಯಾಗಿದೆ. ಇವರು ಅನುಮತಿ ಪಡೆಯದೆ ಮಾಹಿತಿ ಸಂಗ್ರಹಿಸುತ್ತಿದ್ದು, ಇವರಿಗೆ ಯಾರು ಅನುಮತಿ ಕೊಟ್ಟಿದ್ದಾರೆ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಹೊಸಪೇಟೆಯ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ