ಬಳ್ಳಾರಿ ಬಸ್​ ಅಪಘಾತ: ಮೃತ ಮೂರೂ ವಿದ್ಯಾರ್ಥಿಗಳು ಕೇಟರಿಂಗ್​ ಕೆಲಸವನ್ನೂ ಮಾಡುತ್ತಿದ್ದರು! ಹಾಸ್ಟೆಲ್​ ಅಧಿಕಾರಿಗಳ ಮೇಲೆ ಆಕ್ರೋಶ

| Updated By: ಆಯೇಷಾ ಬಾನು

Updated on: Dec 19, 2022 | 12:42 PM

Bellary Bus Accident: ಮೃತ ಮೂವರು ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿದ್ದು ಓದುತ್ತಾ, ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಹೋಟೆಲ್ ಒಂದರಲ್ಲಿ ಕ್ಯಾಟರಿಂಗ್ ಸರ್ವಿಸ್ ಕೆಲಸಕ್ಕೆ ಸೇರಿದ್ದರು.

ಬಳ್ಳಾರಿ ಬಸ್​ ಅಪಘಾತ: ಮೃತ ಮೂರೂ ವಿದ್ಯಾರ್ಥಿಗಳು ಕೇಟರಿಂಗ್​ ಕೆಲಸವನ್ನೂ ಮಾಡುತ್ತಿದ್ದರು! ಹಾಸ್ಟೆಲ್​ ಅಧಿಕಾರಿಗಳ ಮೇಲೆ ಆಕ್ರೋಶ
ಬಳ್ಳಾರಿ ಬಸ್​ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳು
Follow us on

ಬಳ್ಳಾರಿ: ಜಿಲ್ಲೆಯ ಹಲಕುಂದಿ ಬಳಿ ಮಧ್ಯರಾತ್ರಿ ಮೂವರು ವಿದ್ಯಾರ್ಥಿಗಳು(Students Death in Accident) ರಸ್ತೆ ದಾಟಲು ಹೋಗಿ ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆದು ಪ್ರಾಣ ಬಿಟ್ಟಿದ್ದಾರೆ. ಆದ್ರೆ ವಿದ್ಯಾರ್ಥಿಗಳು ತಡರಾತ್ರಿ ಹಲಕುಂದಿ ಬಳಿ ಏಕೆ ಹೋಗಿದ್ದರು ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಪೊಲೀಸರು ತನಿಖೆ ನಡೆಸಿ ಅನೇಕ ಸಂಗತಿಗಳನ್ನು ಬಯಲು ಮಾಡಿದ್ದಾರೆ.

ಮೃತ ಮೂವರು ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿದ್ದು ಓದುತ್ತಾ, ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಹೋಟೆಲ್ ಒಂದರಲ್ಲಿ ಕ್ಯಾಟರಿಂಗ್ ಸರ್ವಿಸ್ ಕೆಲಸಕ್ಕೆ ಸೇರಿದ್ದರು. ಬಡತನದಲ್ಲೂ ಓದಬೇಕು ಅಂತಾ ಕಷ್ಟದ ನಡುವೆಯೂ ಕೆಲಸ ಮಾಡಿಕೊಂಡು ಓದುತ್ತಿದ್ದ ವಿದ್ಯಾರ್ಥಿಗಳಿಗೆ ಯಮನಂತೆ ಬಂದ ಬಸ್​​ ಪ್ರಾಣ ಕಿತ್ತುಕೊಂಡಿದೆ. ನಿನ್ನೆ(ಡಿ.18) ರಾತ್ರಿ ಬಳ್ಳಾರಿ ಸಮೀಪದ ಹಲಕುಂದಿ ಬಳಿ ಕ್ಯಾಟರಿಂಗ್ ಕೆಲಸಕ್ಕೆ ಹೊಗಿ ವಿದ್ಯಾರ್ಥಿಗಳು ವಾಪಸ್ ಹಾಸ್ಟೆಲ್​ಗೆ ಮರಳಿ ಬರುವ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎಮ್ಮಿಗನೂರಿನ ಕನಕರಾಜು(19), ಮುರುಡಿ ಗ್ರಾಮದ ಶಂಕರ(18), ಸಂಡೂರು ತಾಲೂಕಿನ ನಾಗೇನಹಳ್ಳಿಯ ಹೊನ್ನೂರ(22) ಎಂಬ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಹಾಸ್ಟೆಲ್ ಬಿಟ್ಟು ಹೋಗಿದ್ದ 3 ವಿದ್ಯಾರ್ಥಿಗಳು ನಡುರಾತ್ರಿ ಬೆಂಗಳೂರು ಬಸ್​​ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವು

ಶಾವಾಗಾರದ ಬಳಿ ಬಂದ ಅಧಿಕಾರಿಗಳ ವಿರುದ್ದ ಆಕ್ರೋಶ

ಇನ್ನು ಮತ್ತೊಂದೆಡೆ ಶಾವಾಗಾರದ ಬಳಿ ಬಂದ ಎಸ್ಟಿ ಇಲಾಖೆಯ ಅಧಿಕಾರಿಯನ್ನ ವಿದ್ಯಾರ್ಥಿಗಳು ನೂಕಾಡಿ ಆಕ್ರೋಶ ಹೊರ ಹಾಕಿದ್ದಾರೆ. ಎಸ್ಸಿ ಎಸ್ಟಿ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳಿಗೆ ಕಿರುಕೊಳ‌ಕೊಡ್ತೀರಿ. ಸಾವಿಗೀಡಾದ ವಿದ್ಯಾರ್ಥಿಗಳು ಎರಡು ದಿನದಿಂದ ಹಾಸ್ಟೆಲ್ನಲ್ಲಿ ಇಲ್ಲ ಅಂತಾ ಸುಳ್ಳು ಹೇಳ್ತಿರಾ ಎಂದು ಅಕ್ರೋಶ ಹೊರ ಹಾಕಿದ್ದಾರೆ. ವಿಮ್ಸ್ ಶವಾಗಾರದ ಮುಂದೆ ನೂರಾರು ವಿದ್ಯಾರ್ಥಿಗಳು ಸೇರಿದ್ದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಹಾಗೂ ವಿದ್ಯಾರ್ಥಿಗಳು ವಾರ್ಡನ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ. ಅಧಿಕಾರಿಯನ್ನ ಸುತ್ತುವರೆದು ತರಾಟೆ ತೆಗೆದುಕೊಂಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:39 pm, Mon, 19 December 22