ಬಳ್ಳಾರಿ: ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಯೋಜನೆಯೊಂದನ್ನ ಜಾರಿಗೊಳಿಸಲಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಎಸ್ಎಸ್ ನಕುಲ್ ಅವರ ಮಾರ್ಗದರ್ಶನದಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಲು ಶೇಂಗಾ ಚಿಕ್ಕಿ ಘಟಕ ಆರಂಭಿಸಲಾಗಿದೆ. ಹೊಸಪೇಟೆ ರೇಣುಕಾ ಯಲ್ಲಮ್ಮ ಟ್ರಾನ್ಸ್ಜೆಂಡರ್ ಸ್ವಸಹಾಯ ಸಂಘದ ಶೇಂಗಾ ಚಿಕ್ಕಿ ಘಟಕವನ್ನು ಹೊಸಪೇಟೆ ನಗರದಲ್ಲಿ ಪ್ರಾರಂಭಿಸಲಾಗಿದೆ.
ಚಿಕ್ಕಿ ಘಟಕ ಆರಂಭ:
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸಾಲ ಸೌಲಭ್ಯ ಪಡೆದು ಅಂಗನವಾಡಿ ಮಕ್ಕಳಿಗೆ ಶೇಂಗಾ ಚಿಕ್ಕಿ ತಯಾರಿಸುವ ಘಟಕವನ್ನ ಆರಂಭಿಸಲಾಗಿದೆ. ಈ ಮೂಲಕ ಜಿಲ್ಲೆಯ ಕೆಲ ಮಂಗಳಮುಖಿಯರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಹೊಸಪೇಟೆಯಲ್ಲಿರುವ 300 ಮಂಗಳಮುಖಿಯರ ಪೈಕಿ 12 ಜನರನ್ನ ಗುರುತಿಸಿ ಶ್ರೀ ರೇಣುಕಾ ಎಲ್ಲಮ್ಮ ಟ್ರಾನ್ಸ್ಜೆಂಡರ್ ಸ್ವಸಹಾಯ ಸಂಘ ರಚಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಗ್ರಾಮಾಂತರ ಸ್ತ್ರೀ ಶಕ್ತಿ ಒಕ್ಕೂಟದ ಮೂಲಕ ಕಡಿಮೆ ಬಡ್ಡಿ ದರದಲ್ಲಿ 2 ಲಕ್ಷ ಸಾಲ ಸೌಲಭ್ಯ ನೀಡಲಾಗಿದೆ. ಇನ್ನೂ ಶೇಂಗಾ ಚಿಕ್ಕಿ ಘಟಕ ಆರಂಭ ಮಾಡುವ ಮುನ್ನ 15 ದಿನಗಳ ಕಾಲ ಎಲ್ಲಾ ಸದಸ್ಯರಿಗೆ ಸೂಕ್ತ ತರಬೇತಿ ನೀಡಲಾಗಿದೆ.
ಅಪೌಷ್ಠಿಕ ನಿವಾರಿಸುವಲ್ಲಿ ಶೇಂಗಾ ಚಿಕ್ಕಿ ಪ್ರಮುಖ ಪಾತ್ರ:
ಹೊಸಪೇಟೆ ತಾಲೂಕಿನಲ್ಲಿ 385 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಿಗೆ ಹಿಂದೆ ಶೇಂಗಾ ಮತ್ತು ಬೆಲ್ಲದ ಉಂಡೆ ನೀಡಲಾಗುತ್ತಿತ್ತು. ಈಗ ಇದರ ಬದಲಾಗಿ 11 ಗ್ರಾಂ ಮಕ್ಕಳಿಗೆ ಹಾಗೂ 15ಗ್ರಾಂ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ನೀಡಲಾಗುತ್ತಿದೆ. ಪ್ರತಿ ತಿಂಗಳು 7 ಲಕ್ಷ ಚಿಕ್ಕಿ ಬೇಡಿಕೆ ಇದೆ. ಆದರೆ ಪ್ರತಿ ದಿನ ಮಂಗಳಮುಖಿಯರು 4 ಸಾವಿರ ಚಿಕ್ಕಿ ತಯಾರು ಮಾಡುತ್ತಿದ್ದು, ಈ ಪ್ರಮಾಣವನ್ನ ಮತ್ತಷ್ಟು ಹೆಚ್ಚು ಮಾಡಲು ಮುಂದಾಗಿದ್ದಾರೆ. ಅಪೌಷ್ಠಿಕ ನಿವಾರಿಸುವಲ್ಲಿ ಶೇಂಗಾ ಚಿಕ್ಕಿ ಪ್ರಮುಖ ಪಾತ್ರ ವಹಿಸುತ್ತಿದೆ. ಜೊತೆಗೆ ಮಂಗಳಮುಖಿಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಬಹುದು ಅನ್ನೋ ದೃಷ್ಟಿಯಿಂದ ಜಿಲ್ಲಾಡಳಿತ ಇಂತಹ ಯೋಜನೆಯನ್ನ ಜಾರಿಗೊಳಿಸಿದೆ.
ರಾಜ್ಯದಲ್ಲಿಯೇ ಮೊದಲ ಪ್ರಯೋಗ:
Published On - 7:26 pm, Wed, 10 June 20