ಸಿರುಗುಪ್ಪ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೊಠಡಿಯಲ್ಲಿ ವಾಮಾಚಾರ

| Updated By: ವಿವೇಕ ಬಿರಾದಾರ

Updated on: Dec 04, 2023 | 10:17 AM

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕ ಆಸ್ಪತ್ರೆಗೆ ವಾಮಾಚಾರದ ಕಾಟ ಶುರುವಾಗಿದೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೊಠಡಿಯಲ್ಲಿ ವಾಮಾಚಾರ ಮಾಡಲಾಗಿದೆ. ವೈದ್ಯರ ಟೇಬಲ್​ ಮೇಲೆ ಮೇಲೆ ಕುಂಕುಮ, ನಿಂಬೆಹಣ್ಣು, ಎಲೆ ಮತ್ತು ಅಡಿಕೆ ಇಟ್ಟು ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ.

ಸಿರುಗುಪ್ಪ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೊಠಡಿಯಲ್ಲಿ ವಾಮಾಚಾರ
ಸಿರುಗುಪ್ಪ ತಾಲೂಕು ಆಸ್ಪತ್ರೆಯಲ್ಲಿ ವಾಮಾಚಾರ
Follow us on

ಬಳ್ಳಾರಿ ಡಿ.04: ಸಿರುಗುಪ್ಪ (Siruguppa) ತಾಲೂಕು ಆಸ್ಪತ್ರೆಯ (Hospital) ಮುಖ್ಯ ವೈದ್ಯಾಧಿಕಾರಿ ಹೆಚ್.ಎಸ್.ಗುರುನಾಥ ಅವರ ಕೊಠಡಿಯಲ್ಲಿ ವಾಮಾಚಾರ (Witchcraft) ಮಾಡಲಾಗಿದೆ. ಮುಖ್ಯ ವೈದ್ಯಾಧಿಕಾರಿ ಹೆಚ್.ಎಸ್.ಗುರುನಾಥ ಅವರ ಕೊಠಡಿ ಟೇಬಲ್ ಮೇಲೆ ವಾಮಾಚಾರ ಮಾಡಿರುವ ರೀತಿಯಲ್ಲಿ ಕುಂಕುಮ, ನಿಂಬೆಹಣ್ಣು, ಎಲೆ ಮತ್ತು ಅಡಿಕೆ ಪತ್ತೆಯಾಗಿವೆ. ಹೆಚ್.ಎಸ್.ಗುರುನಾಥ ಅವರು ಕೆಲಸ ಬಿಟ್ಟು ಹೋಗಲಿ ಅಂತ ವಾಮಾಚಾರ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ತಾಲೂಕಾಸ್ಪತ್ರೆ ಸಿಬ್ಬಂದಿ ಆತಂಕಗೊಂಡಿದ್ದಾರೆ. ಕೊಠಡಿಯ ಸಿಸಿಕ್ಯಾಮರಾ ರಿಪೇರಿಗೆ ಕಳಿಸಿದ್ದನ್ನು ಗಮನಿಸಿ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ.

ಕರ್ನಾಟಕ ವಿವಿ ಸಹಾಯಕ ಪ್ರಾಧ್ಯಾಪಕಿ ಚೇಂಬರ್​ನಲ್ಲಿ ವಾಮಾಚಾರ

ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಚೇಂಬರ್‌ನಲ್ಲಿ ವಾಮಾಚಾರ ಮಾಡಿರುವ ಪ್ರಕರಣ ಡಿಸೆಂಬರ್​ 2ರಂದು ಬೆಳಕಿಗೆ ಬಂದಿತ್ತು. ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಮಾ ಗುಂಡೂರಾವ್‌ ಅವರು ರಜೆ ಮೇಲೆ ತೆರಳಿದ್ದರು. ಶುಕ್ರವಾರ ವಾಪಸ್ ಆಗಮಿಸಿದಾಗ ಚೇಂಬರ್‌ನ ಕೀಲಿ ತೆಗೆದಾಗ ವಾಮಾಚಾರಕ್ಕೆ ಬಳಸುವ ವಸ್ತುಗಳು ಸಹಾಯಕ ಪ್ರಾಧ್ಯಾಪಕಿ ಡಾ.ರಮಾ ಗುಂಡೂರಾವ್‌ ಅವರ ಟೇಬಲ್​​ ಮೇಲೆ ಇದ್ದವು.

ಇದನ್ನೂ ಓದಿ: ಕೋಲಾರ: ವಾಮಾಚಾರಕ್ಕಾಗಿ ಸಮಾಧಿ ಅಗೆದು ಮಗುವಿನ ಶವ ಹೊರತೆಗೆದ ದುಷ್ಕರ್ಮಿಗಳು

ಟೇಬಲ್ ಮೇಲೆ ಕಪ್ಪು ಬಣ್ಣದ ಮಾಟದ ಗೊಂಬೆ, ಅದರೊಂದಿಗೆ 3 ಲಿಂಬೆ ಹಣ್ಣು ಎಸೆಯಲಾಗಿದ್ದು, ಅರಿಷಿಣ-ಕುಂಕುಮ ಹಾಕಲಾಗಿತ್ತು. ಗಾಬರಿಯಿಂದ ಹೊರ ನಡೆದ ಡಾ. ರಮಾ, ಕುಲಪತಿಗೆ ದೂರು ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ