ಕೊರೊನಾ ವಿರುದ್ಧ ಹೋರಾಡಿ ಗೆದ್ದ 107 ವರ್ಷದ ವೃದ್ಧೆ; ಬೆಂಗಳೂರಿನ ಆಸ್ಪತ್ರೆಯಿಂದ ಇಂದು ಶತಾಯುಷಿ ಡಿಸ್ಚಾರ್ಜ್

|

Updated on: May 24, 2021 | 1:21 PM

107 ವರ್ಷದ ಶತಾಯುಷಿ ಅವರಿಗೆ 20 ದಿನದ ಹಿಂದೆ ಕೊರೊನಾ ಧೃಡಪಟ್ಟಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೃದ್ಧೆಯ ಮಗ ಶಂಕರ್ ಡಾಕ್ಟರ್​ ಆಗಿದ್ದು, ಇವರೇ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸಿದ ಶತಾಯುಷಿ ಇಂದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ ಇವರನ್ನು ಡಿಸ್ಚಾರ್ಜ್ ಮಾಡಿ ಇಂದು ಮನೆಗೆ ಕರೆದುಕೊಂಡು ಹೋಗಲಾಗಿದೆ.

ಕೊರೊನಾ ವಿರುದ್ಧ ಹೋರಾಡಿ ಗೆದ್ದ 107 ವರ್ಷದ ವೃದ್ಧೆ; ಬೆಂಗಳೂರಿನ ಆಸ್ಪತ್ರೆಯಿಂದ ಇಂದು ಶತಾಯುಷಿ ಡಿಸ್ಚಾರ್ಜ್
ಕೊರೊನಾ ವಿರುದ್ಧ ಹೋರಾಡಿ ಗೆದ್ದ 107 ವರ್ಷದ ಶತಾಯುಷಿ
Follow us on

ಬೆಂಗಳೂರು: ಕೊರೊನಾ ದೇಶದೆಲ್ಲೇಡೆ ತೀವ್ರವಾಗಿದ್ದು, ಸಾವು- ನೋವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಪರಿಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದ್ದು, ಕೊವಿಡ್ ಕೇರ್ ಸೆಂಟರ್, ಆಕ್ಸಿಜನ್, ವೆಂಟಿಲೇಟರ್ ಬೆಡ್ ಹೀಗೆ ನಾನಾ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ ಕೊವಿಡ್ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಯುವಕರು, ವಯಸ್ಕರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದು, ಆತಂಕ ಹೆಚ್ಚಾಗಿದೆ. ಹೀಗಿರುವಾಗ ಬೆಂಗಳೂರಿನಲ್ಲೊಂದು ಹೊಸ ಉತ್ಸಾಹ ನೀಡುವ ಘಟನೆ ನಡೆದಿದ್ದು, 107 ವರ್ಷದ ವೃದ್ಧೆ ಕೊವಿಡ್​ನಿಂದ ಗುಣಮುಖರಾಗಿದ್ದಾರೆ.

107 ವರ್ಷದ ಶತಾಯುಷಿ ಅವರಿಗೆ 20 ದಿನದ ಹಿಂದೆ ಕೊರೊನಾ ಧೃಡಪಟ್ಟಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೃದ್ಧೆಯ ಮಗ ಶಂಕರ್ ಡಾಕ್ಟರ್​ ಆಗಿದ್ದು, ಇವರೇ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸಿದ ಶತಾಯುಷಿ ಇಂದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ ಇವರನ್ನು ಡಿಸ್ಚಾರ್ಜ್ ಮಾಡಿ ಇಂದು ಮನೆಗೆ ಕರೆದುಕೊಂಡು ಹೋಗಲಾಗಿದೆ.

ನಮ್ಮ ತಾಯಿ 107 ವರ್ಷ ವಯಸ್ಸಿನವರು. ಅವರ ಆಹಾರ ಪದ್ಧತಿಯೇ ಅವರನ್ನು ರಕ್ಷಣೆ ಮಾಡಿದೆ. ನಿತ್ಯ ರಾಗಿ ಮುದ್ದೆ ಊಟ ಮಾಡುತ್ತಿದ್ದರು. ಕೊರೊನಾದ ಸಣ್ಣ ಲಕ್ಷಣ ಕಾಣಿಸಿಕೊಂಡಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ ಎಂದು ಶತಾಯುಷಿ ಅವರ ಪುತ್ರ ಡಾ. ಶಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ:

ಕೊರೊನಾದಿಂದ ಗುಣಮುಖ; ಮಾಜಿ ಪ್ರಧಾನಿ ದೇವೇಗೌಡ ಆಸ್ಪತ್ರೆಯಿಂದ ಬಿಡುಗಡೆ

2020 Year in Review | ಕೊರೊನಾ ಆವರಿಸಿದ ಕಹಿ, ಅದರಿಂದ ಚೇತರಿಸಿಕೊಳ್ಳುವ ವಿಶ್ವಾಸ ಮೂಡಿಸಿದ ಸಿಹಿ

Published On - 1:15 pm, Mon, 24 May 21