ಬೆಂಗಳೂರು: ನಗರ ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಆರೋಪಗಳ ಸುರಿಮಳೆ ಕೇಳಿಬಂದ ಬೆನ್ನಲ್ಲೆ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸ್ಥಾನಕ್ಕೆ ಬಿ.ಎಂ. ಲಕ್ಷ್ಮೀ ಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ ಡಿಸಿಪಿ ನಿಶಾ ಜೇಮ್ಸ್ ವಿರುದ್ಧ 25ಕ್ಕೂ ಹೆಚ್ಚು ಎಫ್ಡಿಎ, ಎಸ್ಡಿಎಗಳು ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂಗೆ ದೂರು ನೀಡದ್ದರು.
ನಿಶಾ ಜೇಮ್ಸ್ ವಿರುದ್ಧ ಕೇಳಿಬಂದ ಆರೋಪ ಏನು?
ಸಾಮಾನ್ಯ ವಿಷಯಗಳನ್ನ ದೊಡ್ಡದಾಗಿ ಮಾಡಿ ಕಾನೂನುಬಾಹಿರವಾಗಿ ಶಿಸ್ತುಕ್ರಮಕ್ಕೆ ಮುಂದಾಗುತ್ತಾರೆ. ಉದ್ದೇಶಪೂರ್ವಕವಾಗಿ ಸಿಬ್ಬಂದಿಗಳನ್ನ ತಡರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ನಿಶಾ ಜೇಮ್ಸ್ ಸಂಜೆ 6 ರ ನಂತರ ಕೆಲಸ ಶುರುಮಾಡಿ ರಾತ್ರಿ 3ಕ್ಕೆ ಮುಗಿಸುತ್ತಾರೆ. ಇದರಿಂದ ಪತ್ನಿ ಮಕ್ಕಳು ಪೋಷಕರ ಜೊತೆ ಸಮಯ ಕಳೆಯಲು ಆಗುತ್ತಿಲ್ಲ. ನಿಶಾ ಜೇಮ್ಸ್ ಕಿರುಕುಳದಿಂದಾಗಿ ನಮಗೆ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ರಾಹೀನತೆಯಿಂದ ಮರೆವು ಸೇರಿದಂತೆ ಹಲವು ಕಾಯಿಲೆ ಬರುತ್ತಿವೆ ಎಂದು ಆರೋಪಿಸಿ ನೀಡಿದ ದೂರಿನ ಪ್ರತಿ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Thu, 20 October 22