Bangalore: ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಪೊಲೀಸರ ಹೊಸ ‘ನೈಟ್’ ಪ್ಲ್ಯಾನ್

| Updated By: Rakesh Nayak Manchi

Updated on: Sep 10, 2022 | 7:19 AM

ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಹೊರ ಜಿಲ್ಲೆಗಳ ಅಪರಾಧಿಗಳಿಂದ ಕೃತ್ಯ ಹೆಚ್ಚಾಗಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ರಾತ್ರಿ ವೇಳೆ ಬೆಂಗಳೂರು ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.

Bangalore: ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಪೊಲೀಸರ ಹೊಸ ನೈಟ್ ಪ್ಲ್ಯಾನ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಹೊರ ಜಿಲ್ಲೆಗಳಿಂದ ನಗರಗಳಿಂದ ಬಂದು ಅಪರಾಧ ಎಸಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪರಾಧ ಚಟುವಟಿಕೆ ನಿಯಂತ್ರಿಸಲು ನಗರ ಪೊಲೀಸರು ಹೊಸ ಯೋಜನೆಯೊಂದನ್ನು ಹಾಕಿದ್ದಾರೆ. ಹೊರ ಜಿಲ್ಲೆಗಳಿಂದ ಅಪರಾಧ ಕೃತ್ಯ ಎಸಗಲು ಬರುತ್ತಿರುವವರನ್ನು ಮಟ್ಟಹಾಕಲು ಸಜ್ಜಾಗಿರುವ ಪೊಲೀಸರು, ರಾತ್ರಿ ವೇಳೆ ನಗರದ ಹೊರವಲಯದಲ್ಲಿ ಕಣ್ಗಾವಲಿನಲ್ಲಿ ಇರಲಿದ್ದು, ನಗರ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಲಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚನೆ ಮೇರೆಗೆ ಪ್ರತಿದಿನ ರಾತ್ರಿ 11ರಿಂದ ಬೆಳಗ್ಗೆ 5ಗಂಟೆಯವರೆಗೂ ತಪಾಸಣೆ ನಡೆಸಲಿದ್ದು, ಓರ್ವ ಇನ್ಸ್​​ಪೆಕ್ಟರ್​ ನೇತೃತ್ವದಲ್ಲಿ ತಪಾಸಣೆ ನಡೆಯಲಿದೆ.

ಠಾಣೆ ಮುಂದೆ ಕುಡುಕನ ರಂಪಾಟ

ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆ ಮುಂದೆ ಪಾನಮತ್ತನಾಗಿದ್ದ ಯುವಕನೊಬ್ಬ ರಂಪಾಟ ನಡೆಸಿದ ಪ್ರಸಂಗವೊಂದು ನಡೆದಿದೆ. ಕುಡಿದ ಅಮಲಿನಲ್ಲಿ ಬಂದು ತನ್ನ ಕಂಪ್ಲೈಂಟ್ ತೆಗೆದುಕೊಳ್ಳುವಂತೆ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ನನ್ನ ಸಹೋದರ ಕಳೆದು ಹೋಗಿದ್ದಾನೆ ಹುಡುಕಿಕೊಡಿ ಎಂದು ಒತ್ತಾಯಿಸಿದ್ದಾನೆ. ಯುವಕ ಪಾನಪತ್ತನಾಗಿರುವುದರಿಂದ ಪೊಲೀಸರು ಬೆಳಿಗ್ಗೆ ಬಂದು ಸೂಕ್ತ ಮಾಹಿತಿ ಕೊಡುವಂತೆ ಹೇಳಿದ್ದಾರೆ. ಆದರೂ ಕೇಳದ ಕುಡುಕ ಜೇಬಿನಲ್ಲಿ ಇದ್ದ ದುಡ್ಡು ಎಸೆದು ಸ್ಟೇಷನ್ ಮುಂದೆ ರಂಪಾಟ ನಡೆಸಿದ್ದಾನೆ. ಇದರಿಂದ ಬೇಸತ್ತ ಪೊಲೀಸರು ತಾವೇ ಹೊಯ್ಸಳ ವಾಹನದಲ್ಲಿ ಕರೆದೊಯ್ದು ಮನೆಗೆ ಬಿಟ್ಟುಬಂದಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 am, Sat, 10 September 22