Bangalore: ಸ್ಥಳ ಮಹಜರು ನಡೆಸಲು ಬಂಧಿತ ಪಿಎಫ್​ಐ ಮುಖಂಡರನ್ನು ಕಾಡಿಗೆ ಕರೆದೊಯ್ದ ಪೊಲೀಸರು

| Updated By: Rakesh Nayak Manchi

Updated on: Oct 02, 2022 | 12:14 PM

ಬಂಧಿತ ನಾಲ್ವರು ಪಿಎಫ್ಐ ಮುಖಂಡರನ್ನು ಬೆಂಗಳೂರಿನ ಕೆಜಿ ಹಳ್ಳಿ ಠಾಣಾ ಪೊಲೀಸರು ಸ್ಥಳ ಮಹಜರು ನಡೆಸುವ ಸಲುವಾಗಿ ಚಾಮರಾಜನಗರ ಹಾಗೂ ತಮಿಳುನಾಡಿನ ಸತ್ಯಮಂಗಲ ಕಾಡಿಗೆ ಕರೆದೊಯ್ದಿದ್ದಾರೆ.

Bangalore: ಸ್ಥಳ ಮಹಜರು ನಡೆಸಲು ಬಂಧಿತ ಪಿಎಫ್​ಐ ಮುಖಂಡರನ್ನು ಕಾಡಿಗೆ ಕರೆದೊಯ್ದ ಪೊಲೀಸರು
ಸ್ಥಳ ಮಹಜರು ನಡೆಸಲು ಬಂಧಿತ ಪಿಎಫ್​ಐ ಮುಖಂಡರನ್ನು ಅರಣ್ಯಕ್ಕೆ ಕರೆದೊಯ್ದ ಪೊಲೀಸರು
Follow us on

ಬೆಂಗಳೂರು: ಪಿಎಫ್​ಐ (PFI) ಮುಖಂಡರನ್ನು ಬಂಧಿಸಿದ್ದ ನಗರದ ಕೆಜಿ ಹಳ್ಳಿ ಠಾಣಾ ಪೊಲೀಸರು (K.G.Halli Police) ತೀವ್ರ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಒಂದೊಂದಾಗಿಯೇ ಬಾಯಿಬಿಡುತ್ತಿದ್ದಾರೆ. ಅದರಂತೆ A1 ನಾಸಿರ್ ಪಾಷಾ ವಿಚಾರಣೆ ವೇಳೆ ಸತ್ಯಮಂಗಲ ಕಾಡಿನ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹಿನ್ನೆಲೆ ಪೊಲೀಸರು ನಾಸಿರ್ ಸಹಿತ ನಾಲ್ವರನ್ನು ಸ್ಥಳ ಮಹಜರು ನಡೆಸುವ ಸಲುವಾಗಿ ಚಾಮರಾಜನಗರ ಹಾಗು ತಮಿಳುನಾಡಿನ ಸತ್ಯಮಂಗಲ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

A1 ನಾಸಿರ್ ಪಾಷಾ ಸಹಿತ ನಾಲ್ವರನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ತಾನು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳು ಸತ್ಯಮಂಗಲ ಅರಣ್ಯಕ್ಕೆ ಹೋಗಿರುವುದಾಗಿ ನಾಸಿರ್ ಬಾಯಿಬಿಟ್ಟಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುತ್ತಿದ್ದಾರೆ. ಆರೋಪಿಗಳು ಯಾವ ಕಾರಣಕ್ಕೆ ಸತ್ಯಮಂಗಲಕ್ಕೆ ಹೋಗಿದ್ದರು ಎಂಬುದು ಗೊತ್ತಾಗಿಲ್ಲ. ಆದರೆ ಅರಣ್ಯ ಪ್ರದೇಶದಲ್ಲಿ ಪಿಎಫ್​ಐ ಕಾರ್ಯಕರ್ತರಿಗೆ ತರಬೇತಿ ನೀಡಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನಗರದ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಪಿಎಫ್​ಐ ಕಚೇರಿಗಳ ಮೇಲೆ ಗುರುವಾರ (ಸೆ.22) ದಾಳಿ ನಡೆದ ಸಂದರ್ಭದಲ್ಲಿ ಒಟ್ಟು 14 ಮಂದಿಯನ್ನು ಬಂಧಿಸಿದ್ದರು. ಕೆಜಿ ಹಳ್ಳಿ ಪೊಲೀಸರಿಂದ ಪಿಎಫ್​ಐ ವಿರುದ್ದ ಸೆ.21ರಂದು ಪ್ರಕರಣ ದಾಖಲಿಸಿ ಎನ್​ಐಎ ಜೊತೆ ಕಾರ್ಯಾಚರಣೆ ನಡೆಸಿ ಈ ಬಂಧನ ಪ್ರಕ್ರಿಯೆ ನಡೆಸಿದ್ದರು. ಮತ್ತೋರ್ವನನ್ನು ದೆಹಲಿಯಲ್ಲಿ ಬಂಧಿಸಿದ್ದರು. ಆರೋಪಿಗಳ ಬಳಿಯಿಂದ ಪೊಲೀಸರು ಮೊಬೈಲ್, ಲ್ಯಾಪ್​ಟಾಪ್​, ಪೆನ್​ಡ್ರೈವ್​ನ್ನು ವಶಕ್ಕೆ ಪಡೆದಿದ್ದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Sun, 2 October 22