ಆ್ಯಂಬುಲೆನ್ಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಹಾಡಿದ BBMP

|

Updated on: Jul 07, 2020 | 6:12 PM

[lazy-load-videos-and-sticky-control id=”JLbT5OmGMWo”]ಬೆಂಗಳೂರು: ಈ ವಾರದಲ್ಲಿ ಸರ್ಕಾರ ಕೊರೊನಾ ವಿರುದ್ಧದ ಸಮರದಲ್ಲಿ ಒಂದಷ್ಟು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕೊರೊನಾ ಸೋಂಕಿತರು ಬೀದಿ ಹೆಣಗಳಾಗುವುದನ್ನು ತಪ್ಪಿಸಲು ಸರ್ಕಾರ ಆಸ್ಪತ್ರೆಗಳಿಗೆ ಚಾಟಿ ಏಟು ಬೀಸಿದೆ. ಯಾವುದೇ ಸೋಂಕಿತ ಅಥವಾ ಮಾಮೂಲಿ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಕೋವಿಡ್ ಉಸ್ತುವಾರಿ ಸಚಿವ ಆರ್. ಅಶೋಕ್ ಘರ್ಜಿಸಿದ್ದಾರೆ.  ಈ ಮಧ್ಯೆ ಬಿಬಿಎಂಪಿ ಸಹ ಒಂದಷ್ಟು ಬಿಗಿ ಕ್ರಮಗಳನ್ನು ಕೈ ಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪಾಲಿಕೆ ವ್ಯಾಪ್ತಿಯ 8 ವಲಯಗಳಿಗೆ ತಲಾ ಒಂದಿಷ್ಟು ಆ್ಯಂಬುಲೆನ್ಸ್ […]

ಆ್ಯಂಬುಲೆನ್ಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಹಾಡಿದ BBMP
Follow us on

[lazy-load-videos-and-sticky-control id=”JLbT5OmGMWo”]ಬೆಂಗಳೂರು: ಈ ವಾರದಲ್ಲಿ ಸರ್ಕಾರ ಕೊರೊನಾ ವಿರುದ್ಧದ ಸಮರದಲ್ಲಿ ಒಂದಷ್ಟು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕೊರೊನಾ ಸೋಂಕಿತರು ಬೀದಿ ಹೆಣಗಳಾಗುವುದನ್ನು ತಪ್ಪಿಸಲು ಸರ್ಕಾರ ಆಸ್ಪತ್ರೆಗಳಿಗೆ ಚಾಟಿ ಏಟು ಬೀಸಿದೆ. ಯಾವುದೇ ಸೋಂಕಿತ ಅಥವಾ ಮಾಮೂಲಿ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಕೋವಿಡ್ ಉಸ್ತುವಾರಿ ಸಚಿವ ಆರ್. ಅಶೋಕ್ ಘರ್ಜಿಸಿದ್ದಾರೆ.

 ಈ ಮಧ್ಯೆ ಬಿಬಿಎಂಪಿ ಸಹ ಒಂದಷ್ಟು ಬಿಗಿ ಕ್ರಮಗಳನ್ನು ಕೈ ಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪಾಲಿಕೆ ವ್ಯಾಪ್ತಿಯ 8 ವಲಯಗಳಿಗೆ ತಲಾ ಒಂದಿಷ್ಟು ಆ್ಯಂಬುಲೆನ್ಸ್ ಮತ್ತು ಟೆಂಪೊ ಟ್ರಾವೆಲರ್​ಗಳನ್ನು ಹಂಚಿಕೆ ಮಾಡಿ ರೋಗಿಗಳನ್ನು ಕರೆದೊಯ್ಯಲು ಸೂಕ್ತ ವ್ಯವಸ್ಥೆ ಮಾಡಿದೆ. ವಿವಿರ ಇಂತಿದೆ.

ಕೊರೊನಾ ರೋಗಿಗಳನ್ನ ಶಿಫ್ಟ್ ಮಾಡಲು ಟೆಂಪೊ ಟ್ರಾವೆಲರ್ ಬಳಕೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಒಟ್ಟು‌ 71 ಆ್ಯಂಬುಲೆನ್ಸ್, 179 ಟೆಂಪೊ ಟ್ರಾವೆಲರ್​ಗಳನ್ನು ಇದಕ್ಕಾಗಿಯೇ ನಿಯೋಜಿಸಲಾಗಿದೆ. ಸೋಂಕಿತರನ್ನು ಶಿಫ್ಟ್ ಮಾಡಲು ಟೆಂಪೊ ಟ್ರಾವೆಲರ್, ಆ್ಯಂಬುಲೆನ್ಸ್ ಸೇರಿ ಒಟ್ಟು 250 ವಾಹನಗಳನ್ನು ಬಿಬಿಎಂಪಿ ನಿಯೋಜನೆ ಮಾಡಿದೆ.

ಬೆಂಗಳೂರು ದಕ್ಷಿಣ ವಲಯದಲ್ಲಿ 20 ಆ್ಯಂಬುಲೆನ್ಸ್ ಮತ್ತು 47 ಟೆಂಪೊ ಟ್ರಾವೆಲರ್​ಗಳು ಕಾರ್ಯ ನಿರ್ವಹಿಸಲಿವೆ. ಬೆಂಗಳೂರು ಪಶ್ಚಿಮ ವಲಯದಲ್ಲಿ 10 ಆ್ಯಂಬುಲೆನ್ಸ್ ಮತ್ತು 54 ಟೆಂಪೊ ಟ್ರಾವೆಲರ್ಸ್.  ಆರ್.ಆರ್ ನಗರ ವಲಯದಲ್ಲಿ 10 ಆ್ಯಂಬುಲೆನ್ಸ್, 10 ಟಿಟಿ ಇರಲಿವೆ. ಪೂರ್ವ ವಲಯದಲ್ಲಿ 6ಆ್ಯಂಬುಲೆನ್ಸ್ ಮತ್ತು 33 ಟಿಟಿ ಬಳಕೆ. ದಾಸರಹಳ್ಳಿ 5 ಆ್ಯಂಬುಲೆನ್ಸ್, 7 ಟಿಟಿ. ಯಲಹಂಕದಲ್ಲಿ 9 ಆ್ಯಂಬುಲೆನ್ಸ್ ಮತ್ತು 6 ಟಿಟಿ ಕಾರ್ಯ ನಿರ್ವಹಿಸಲಿವೆ. ಮಹದೇವ ಪುರದಲ್ಲಿ 5 ಆ್ಯಂಬುಲೆನ್ಸ್ , 11 ಟಿಟಿಗಳ ನಿಯೋಜನೆ. ಬೊಮ್ಮನಹಳ್ಳಿ 6 ಆ್ಯಂಬುಲೆನ್ಸ್ ಮತ್ತು 11 ಟಿಟಿಗಳು. ಸೋಂಕಿತರು ಹೆಚ್ಚಿರುವ ವಲಯಗಳಿಗೆ ಹೆಚ್ಚು ಆ್ಯಂಬುಲೆನ್ಸ್ ಮತ್ತು ಟೆಂಪೊ ಟ್ರಾವೆಲರ್ ನಿಯೋಜನೆ ಮಾಡಲಾಗಿದೆ.

Published On - 11:11 am, Tue, 7 July 20