ಬೆಂಗಳೂರು: ಕೊರೊನಾ ವ್ಯಾಕ್ಸಿನ್.. ಇದೊಂದು ಬ್ರಹ್ಮಾಸ್ತ್ರಕ್ಕಾಗಿ ಎಲ್ಲರೂ ಎದುರು ನೋಡ್ತಾಯಿದ್ರು. ಈಗ ವ್ಯಾಕ್ಸಿನ್ ಬಂದಿದೆ. ವ್ಯಾಕ್ಸಿನ್ ಹಂಚಿಕೆ ಅತಿದೊಡ್ಡ ಅಭಿಯಾನವೂ ಆರಂಭವಾಗಿದೆ. ಕೊರೊನಾ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ ಹೆಲ್ತ್ ವಾರಿಯರ್ಸ್‌ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗ್ತಿದೆ. ಆದ್ರೆ ವ್ಯಾಕ್ಸಿನ್ ಪಡೆಯೋಕೆ ಹೆಲ್ತ್ ವಾರಿಯರ್ಸ್ ಹಿಂದೇಟು ಹಾಕ್ತಿದ್ದಾರೆ. ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ನೊಂದಾಯಿಸಿಕೊಂಡಿದ್ದ ಹೆಲ್ತ್ ವಾರಿಯರ್ಸ್ ಯಾರೂ ಮುಂದೆ ಬರ್ತಿಲ್ಲ.
ಎಲ್ಲೋ ಒಂದೆರೆಡು ಕಡೆ ವ್ಯಾಕ್ಸಿನ್ ಅಡ್ಡಪರಿಣಾಮ ನೀಡಿದೆ ಅಂತಾ ಸುದ್ದಿ ಹಬ್ಬಿತ್ತು. ಇದನ್ನ ಕೇಳಿಯೆ ಹೆಲ್ತ್ ವಾರಿಯರ್ಸ್ ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಇದರಿಂದ ಹೆಲ್ತ್ ವಾರಿಯರ್ಸ್‌ಗೆ ಅಂತಾ ಮೀಸಲಿಟ್ಟ ವ್ಯಾಕ್ಸಿನ್ ಬಳಕೆ ಆಗದೇ ಕೋಲ್ಡ್ ಸ್ಟೋರೇಜ್‌ನಲ್ಲಿ ಹಾಗೇ ಬಿದ್ದಿದೆ. ಐಸಿಎಂಆರ್ ಸುದ್ದಿಗೋಷ್ಠಿ ನಡೆಸಿದ ಕೈ ಮುಗಿದ್ದು ಕೇಳಿಕೊಂಡ್ರೂ ನಮ್ಮ ಹೆಲ್ತ್ ವಾರಿಯರ್ಸ್ ವ್ಯಾಕ್ಸಿನ್ ಸಹವಾಸಕ್ಕೆ ಹೋಗ್ತಿಲ್ವಂತೆ. ಹೀಗಾಗಿ ಸರ್ಕಾರ ಹೆಲ್ತ್ ವಾರಿಯರ್ಸ್‌ಗೆ ಅಂತಾ ಬಂದಿರುವ ವ್ಯಾಕ್ಸಿನ್‌ಗಳನ್ನ ಫ್ರೆಂಟ್ ಲೈನ್ ವಾರಿಯರ್ಸ್‌ಗೆ ನೀಡಲು ಪ್ಲ್ಯಾನ್ ಮಾಡಿದೆ.
ನಿತ್ಯ ಕೇವಲ ನಾಲ್ಕೈದು ಸಾವಿರ ಲಸಿಕೆ ಮಾತ್ರ ಬಳಕೆ
ಅಂದಹಾಗೆ ಬಿಬಿಎಂಪಿ ನಿತ್ಯ 20 ಸಾವಿರ ಹೆಲ್ತ್ ವಾರಿಯರ್ಸ್‌ಗೆ ಲಸಿಕೆ ರವಾನೆ ಮಾಡ್ತಿದೆ. ಅದರಲ್ಲಿ ಕೇವಲ ನಾಲ್ಕೈದು ಸಾವಿರ ಲಸಿಕೆ ಬಳಕೆ ಆಗಿ ಉಳಿದ ವ್ಯಾಕ್ಸಿನ್‌ಗಳು ವಾಪಸ್ ಆಗ್ತಿವೆ. ಕೆಲ ವಾರಿಯರ್ಸ್‌ಗಳು ಕಾದು ನೋಡುವ ತಂತ್ರ ಹಾಗೂ ವ್ಯಾಕ್ಸಿನ್ ಸಹವಾಸವೆ ಬೇಡ ಅಂತಾ ಸೈಲೆಂಟ್ ಆಗಿದ್ದಾರೆ. ಹೀಗಾಗಿ ಬಿಬಿಎಂಪಿ ಬಳಿ ಇರುವ ವ್ಯಾಕ್ಸಿನ್ ಗಳು ಬಳಕೆನೇ ಆಗ್ತಿಲ್ಲ.
ಜೊತೆಗೆ ವ್ಯಾಕ್ಸಿನ್ ಪಡೆಯಲು ನಿರ್ದಿಷ್ಟ ಕಾಲಾವಧಿ ನಿಗದಿಯಾಗದಿರುವ ಕಾರಣ ವ್ಯಾಕ್ಸಿನ್ ಪಡೆಯಲು ಯಾರು ಬರ್ತಿಲ್ಲ. ಆದ್ರೆ ಬಿಬಿಎಂಪಿಗೆ 1ಲಕ್ಷದ 68 ಸಾವಿರ ಜನ ಹೆಲ್ತ್ ವಾರಿಯರ್ಸ್ ಗೆ ಲಸಿಕೆ ನೀಡಬೇಕು. ನೀಡ್ದೆ ಹೋದ್ರೆ ಕೇಂದ್ರಕ್ಕೆ ಲೆಕ್ಕ ಕೊಡ್ಬೇಕು. ಹೀಗಾಗಿ ಬಿಬಿಎಂಪಿ ಮತ್ತು ಸರ್ಕಾರ ಕೊರೊನಾ ಟೈಮ್‌ನಲ್ಲಿ ಕೆಲಸ ಮಾಡಿದ ಫ್ರೆಂಟ್ ಲೈನ್ ವಾರಿಯಗಳಾದ ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಿದೆ.
ಇಲ್ಲಿವರೆಗೂ ಕೇವಲ 20 ಸಾವಿರ ವ್ಯಾಕ್ಸಿನ್‌ಗಳು ಮಾತ್ರ ಬಳಕೆ ಆಗಿವೆ. ಸರ್ಕಾರಿಂದ ಒಂದು ಲಕ್ಷಕ್ಕೂ ಅಧಿಕ ವ್ಯಾಕ್ಸಿನ್ ಬಾಟೆಲ್‌ಗಳು ಬಿಬಿಎಂಪಿ ಕೈ ಸೇರಿವೆ. ಆದ್ರೆ ನಾಲ್ಕು ದಿನದಲ್ಲಿ ಕೇವಲ 20 ಸಾವಿರ ವ್ಯಾಕ್ಸಿನ್ ಬಳಕೆ ಆಗಿದೆ. ಮುಂದಿನ ಒಂದು ವಾರದೊಳಗೆ 60 ಸಾವಿರ ವ್ಯಾಕ್ಸಿನ್ ಖಾಲಿಯಾಗೋದು ಅನುಮಾನವಾಗಿದೆ. ಹೀಗಾಗಿ ಹೆಲ್ತ್ ವಾರಿಯರ್ಸ್‌ಗೆ ಎರಡನೇ ಅವಕಾಶ ನೀಡಿದ್ದು ಈಗಲೂ ಲಸಿಕೆ ಪಡೆಯಲು ಬಾರದೆ ಹೋದ್ರೆ ಬಂದ ಲಸಿಕೆಗಳನ್ನ ಫ್ರೆಂಟ್ ಲೈನ್ ವಾರಿಯರ್ಸ್ ಗೆ ಕೊಟ್ಟು, ಟಾರ್ಗೆಟ್ ರೀಚ್ ಆಗುವ ಯೋಚನೆ ನಡೆದಿದೆ. ಇನ್ನು ಹೆಲ್ತ್ ವಾರಿಯರ್ಸ್ ತಮಗೆ ನೀಡಿರುವ ಸಮಯದಲ್ಲಿ ಬಾರದೆ, ನಂತರ ಬಂದ್ರೆ, ನೋ ಸ್ಟಾಕ್ ಬೋರ್ಡ್ ಹಾಕಲು ಪ್ಲ್ಯಾನ್ ಸಿದ್ಧವಾಗ್ತಿದೆ.
ಕೊರೊನಾ ಲಸಿಕೆಯೇನೋ ಬಂತು.. ಆದರೆ, ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಜನರೇ ಬರುತ್ತಿಲ್ಲ.. ಏನಿರಬಹುದು ಕಾರಣ?