ಮುಂದಿನ ದಿನಗಳಲ್ಲಿ ಸಂಸದರ ವ್ಯಾಪ್ತಿ ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ- ಸಂಸದೆ ಸುಮಲತಾ

ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಬೇಕೆಂದು ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕಾರ್ಖಾನೆ ಆರಂಭಿಸುವುದಾಗಿ ರೈತರಿಗೆ ಮಾತು ಕೊಟ್ಟಿದ್ದೇನೆ. ಈ ಮಾತನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಮುಂದಿನ ದಿನಗಳಲ್ಲಿ ಸಂಸದರ ವ್ಯಾಪ್ತಿ ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ- ಸಂಸದೆ ಸುಮಲತಾ
ಸುಮಲತಾ ಅಂಬರೀಷ್​
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 20, 2021 | 9:30 PM

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ರೈತರಿಗೆ ಮಾತು ಕೊಟ್ಟಿದ್ದೇನೆ. ಹೀಗಾಗಿ, ಸರ್ಕಾರ ಅಥವಾ ಖಾಸಗಿಯವರು ಕಾರ್ಖಾನೆ ಆರಂಭ ಮಾಡಲಿ ಎಂದು ಸುಮಲತಾ ಅಂಬರೀಶ್​ ಹೇಳಿದ್ದಾರೆ.

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದಲ್ಲಿ ಮಾತನಾಡಿದ ಸುಮಲತಾ, ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಬೇಕೆಂದು ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕಾರ್ಖಾನೆ ಆರಂಭಿಸುವುದಾಗಿ ರೈತರಿಗೆ ಮಾತು ಕೊಟ್ಟಿದ್ದೇನೆ. ಈ ಮಾತನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭವಾಗುವುದಕ್ಕೆ ವಿಘ್ನಗಳು ಎದುರಾಗುತ್ತಲೇ ಇವೆ ಎಂದ ಅವರು, ಸಕ್ಕರೆ ಕಾರ್ಖಾನೆ ಆರಂಭಿಸುವುದಕ್ಕೂ ಕೆಲವರು ಅಡಚಣೆ ಮಾಡಿ, ಕಿರುಕುಳ ನೀಡುತ್ತಿದ್ದಾರೆ. ಮಂಡ್ಯದಲ್ಲಿ ಶೂಟಿಂಗ್ ಮಾಡಬಾರದು, ಕಂಪನಿ ಬರಬಾರದು ಎನ್ನುತ್ತಾರೆ. ಹೀಗೆ ಆದರೆ ಮಂಡ್ಯ ಜಿಲ್ಲೆ ಉದ್ಧಾರವಾಗುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಚಿತ್ರೀಕರಣ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ, ನನ್ನ ಪುತ್ರನ ಸಿನಿಮಾ ಶೂಟಿಂಗ್‌ಗೂ ನನಗೆ ಸಂಬಂಧವಿಲ್ಲ. ಟೀಕಾಕಾರರ ಹೇಳಿಕೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಎಲ್ಲಾದರೂ ಶೂಟಿಂಗ್ ಮಾಡಿದ್ರೆ ಅದು ನಮ್ಮದಾಗುತ್ತಾ. ಹಣ ಪಾವತಿ ಮಾಡಿ ಶೂಟಿಂಗ್ ಮಾಡುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವರ್ಷದಲ್ಲಿ ನಾಲ್ಕು ತ್ರೈ ಮಾಸಿಕ ಸಭೆ
ವರ್ಷದಲ್ಲಿ ನಾಲ್ಕು ತ್ರೈ ಮಾಸಿಕ ಸಭೆ ನಡೆಸಿದ ರಾಜ್ಯದ ಮೊದಲ ಸಂಸದೆ ಎಂಬ ಕೀರ್ತಿಗೆ ಸುಮಲತಾ ಪಾತ್ರರಾಗಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಹೆಚ್ಚು ಸಭೆ ನಡೆಸಿದ ಕೀರ್ತಿಗೆ ಪಾತ್ರವಾಗಿರೊ ವಿಚಾರ ನನಗೆ ಸಂತಸ ತಂದಿದೆ. ಆದರೆ, ಈ ವಿಚಾರ ನನಗೆ ಗೊತ್ತಿರಲಿಲ್ಲ. ಮೊನ್ನೆ ನಡೆದ ಸಭೆಯಲ್ಲಿ ಜಿ.ಪಂ. ಸಿಇಒ ಅವರು ನನಗೆ ಈ ವಿಚಾರ ತಿಳಿಸಿದ್ದರು. ಈ ಸಭೆಯಿಂದ ಸರ್ಕಾರದ ಕೆಲವು ಇಲಾಖೆಗಳ ಸಮಸ್ಯೆಗಳೇನು, ಅಲ್ಲಿನ ಲೋಪದೋಷಗಳೇನು ಎನ್ನುವುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಸಂಸದರ ವ್ಯಾಪ್ತಿ ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.

Photos ಅಭಿ​ ‘ಬ್ಯಾಡ್ ಮ್ಯಾನರ್ಸ್’ ಬಗ್ಗೆ ಕೇಳಿ ಬೆರಗಾದ ದಚ್ಚು ಮತ್ತು ಸುಮಲತಾ: ಶೂಟಿಂಗ್​ ಸ್ಪಾಟ್​ಗೆ ಭೇಟಿ