ಐ ಆಮ್ ಕಿಂಗ್ ಮೇಕರ್, ನಾಟ್ ಎ ಕಿಂಗ್: ನಿರಂಜನಾನಂದಪುರಿ ಸ್ವಾಮೀಜಿ
ಕಳೆದ ಎರಡು ದಿನಗಳಿಂದ ಇಂತಹ ಸುದ್ದಿಗಳು ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಇಂದು ದಾವಣಗೆರೆಯಲ್ಲಿ ನಡೆದ ಪಾದಯಾತ್ರೆ ಬಹಿರಂಗ ಸಮಾವೇಶದಲ್ಲಿ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿಯೇ ಸ್ಪಷ್ಟ ಪಡಿಸಿದರು.
ದಾವಣಗೆರೆ: ರಾಜ್ಯದಲ್ಲಿ ಸ್ವಾಮೀಜಿಗಳು ಪಾದಾಯಾತ್ರೆಗಳ ಮೂಲಕ ಸರ್ಕಾರಗಳಿಗೆ ನಡುಕ ಹುಟ್ಟಿಸುತ್ತಿದ್ದು, ಒಂದು ಕಡೆ ಕುರುಬರು, ಇನ್ನೊಂದು ಕಡೆ ಲಿಂಗಾಯತ ಪಂಚಮಸಾಲಿಗಳು ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆಗಳ ಮೂಲಕವೇ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗುವ ಪ್ಲಾನ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಪಾದಯಾತ್ರೆಯಲ್ಲಿ ನಿರತರಾದ ಸ್ವಾಮೀಜಿಯೊಬ್ಬರು ಇದಕ್ಕೆ ಸ್ಪಷ್ಟನೆ ನೀಡುವಂತೆ ಒಂದಷ್ಟು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಜನವರಿ 15 ರಂದು ಮಕರ ಸಂಕ್ರಾಂತಿ ಸೂರ್ಯ ದಿಕ್ಕು ಬದಲಿಸುವ ದಿನ. ಅಂದೇ ನಾನು ರಾಜ್ಯದ ಕುರುಬರ ದಿಕ್ಕು ಬದಲಿಸುವೆ ಎಂದು ನಿರಂಜನಾನಂದಪುರಿ ಸ್ವಾಮೀಜಿ ಸಂಕಲ್ಪ ಮಾಡಿ ಪಾದಯಾತ್ರೆ ಆರಂಭಿಸಿದ್ದರು. ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ಪಾದಯಾತ್ರೆ ಆರಂಭವಾಗಿ ಐದು ದಿನವಾಗಿದ್ದು, ದಾವಣಗೆರೆ ಜಿಲ್ಲೆ ಪ್ರವೇಶ ಮಾಡಿದೆ.
2 ದಿನಗಳ ಕಾಲ ಜಿಲ್ಲೆಯಲ್ಲಿಯೇ ಪಾದಯಾತ್ರೆ ಇರುಲಿದ್ದು, ಆ ಮೂಲಕ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಬೇಕು ಎಂದು ಈ ಪಾದಯಾತ್ರೆ ಆರಂಭವಾಗಿತ್ತು. ಫೆಬ್ರುವರಿ 7ರಂದು ಪಾದಯಾತ್ರೆ ಬೆಂಗಳೂರು ತಲುಪಲಿದ್ದು, ಹೀಗೆ ಕುರುಬರ ಕಲ್ಯಾಣಕ್ಕಾಗಿ ಹೆಜ್ಜೆ ಹಾಕುತ್ತಿರುವ ಸ್ವಾಮೀಜಿಗೆ ದೆಹಲಿಯಿಂದ ಪೋನ್ ಬಂದಿದ್ದು, ಹೋರಾಟ ಇನ್ನಷ್ಟು ಜೋರಾಗಿ ಮಾಡಿ ನಿಮ್ಮನ್ನು ಮಂತ್ರಿ, ಮುಖ್ಯಮಂತ್ರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಇಂತಹ ಸುದ್ದಿಗಳು ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಇಂದು ದಾವಣಗೆರೆಯಲ್ಲಿ ನಡೆದ ಪಾದಯಾತ್ರೆ ಬಹಿರಂಗ ಸಮಾವೇಶದಲ್ಲಿ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿಯೇ ಸ್ಪಷ್ಟನೆ ನೀಡಿದರು. ನನಗೆ ಯಾವುದೇ ಪೋನ್ ಬಂದಿಲ್ಲ. ನಾನು ಕಿಂಗ್ ಮೇಕರ್, ನಾಟ್ ಎ ಕಿಂಗ್. ಭಕ್ತರಿಗೆ ಆರ್ಶೀವಾದ ನೀಡುವ ಸ್ವಾಮೀಜಿ ಎಂದು ತಿಳಿಸಿದರು.
ಅಧಿಕಾರಕ್ಕಾಗಿ ಇನ್ನೊಬ್ಬರ ಕಾಲಿಗೆ ಏಕೆ ಬೀಳಬೇಕು. ನೋ ಛಾನ್ಸ್ ಎಂದು ರಾಜಕೀಯ ಅಧಿಕಾರದ ವದಂತಿಗೆ ರೆಕ್ಕೆ ಪುಕ್ಕ ಬರುವ ಮೊದಲೇ ಸ್ವಾಮೀಜಿ ಸ್ಪಷ್ಟ ಪಡಿಸಿದ್ದಾರೆ. ದಿನದಿಂದ ದಿನಕ್ಕೆ ಪಾದಯಾತ್ರೆಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ದಾರಿಯೂದ್ದಕ್ಕೂ ಜನಸಾಗರವೇ ಸೇರುತ್ತಿದೆ. ಮೇಲಾಗಿ ಕುರಿಗಳನ್ನ ಮಾರಿ ಎಸ್ಟಿ ಹೋರಾಟಕ್ಕೆ ಕುರುಬರು ಲಕ್ಷ ಲಕ್ಷ ರೂಪಾಯಿ ಕೊಡುತ್ತಿದ್ದಾರೆ. ಒಟ್ಟಾರೆ ಸ್ವಾಮೀಜಿಯವರ ಹೋರಾಟದಲ್ಲಿಯೂ ರಾಜಕೀಯದ ಹಸ್ತಕ್ಷೇಪವಾಗುತ್ತಿದೆ ಎಂದರೆ ತಪ್ಪಾಲಿಕ್ಕಿಲ್ಲ.
Published On - 5:51 pm, Thu, 21 January 21