ಟ್ರ್ಯಾಕ್ಟರ್ ಡಿಕ್ಕಿ: ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ರೂ ನೆರವಿಗೆ ಬಾರದ ಜನ.. ನರಳಿ ನರಳಿ ಜೀವ ಬಿಟ್ಟ ಮೂಕಪ್ರಾಣಿಗಳು
ರಸ್ತೆಯಲ್ಲಿ ಹೋಗುತ್ತಿದ್ದ ರಾಸುಗಳಿಗೆ ಟ್ರ್ಯಾಕ್ಟರ್ ಡಿಕ್ಕಿಹೊಡೆದ ಪರಿಣಾಮ ಮೂರು ಜಾನುವಾರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ 3 ಹಸುಗಳು ಮೃತಪಟ್ಟಿದ್ದರೆ, 2 ಎಮ್ಮೆಗಳಿಗೆ ಗಂಭೀರವಾಗಿ ಗಾಯಗಳಾಗಿದೆ.
ಯಾದಗಿರಿ: ರಸ್ತೆಯಲ್ಲಿ ಹೋಗುತ್ತಿದ್ದ ರಾಸುಗಳಿಗೆ ಟ್ರ್ಯಾಕ್ಟರ್ ಡಿಕ್ಕಿಹೊಡೆದ ಪರಿಣಾಮ ಮೂರು ಜಾನುವಾರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ 2 ಎಮ್ಮೆಗಳಿಗೆ ಗಂಭೀರ ಗಾಯಗಳಾಗಿದೆ.
ಅಪಘಾತಕ್ಕೆ ಈಡಾದ ಮೂಕಪ್ರಾಣಿಗಳು ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ನೆರೆದಿದ್ದವರೂ ನಿರ್ಲಕ್ಷ್ಯ ತೋರಿದ್ದು ಮಾತ್ರ ನಿಜಕ್ಕೂ ಮನಕಲುಕುವಂತಿತ್ತು. ಅಪಘಾತದಲ್ಲಿ ಗಾಯಗೊಂಡು ರಸ್ತೆ ಮೇಲೆ ನರಳಾಡುತ್ತಿದ್ದ ಜಾನುವಾರುಗಳ ಸಹಾಯಕ್ಕೆ ಬಾರದೆ ಸ್ಥಳೀಯರು ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಾ ನಿಂತ್ತಿದ್ದ ದೃಶ್ಯ ಕಂಡುಬಂತು.
ಇತ್ತ, ಜಾನುವಾರುಗಳಿಗೆ ಗುದ್ದಿದ ಟ್ರ್ಯಾಕ್ಟರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಜಾಗದ ಕಡತ ವಿಲೇವಾರಿಗೆ ಲಂಚ ಸ್ವೀಕರಿಸುವ ವೇಳೆ.. ಗ್ರಾಮ ಲೆಕ್ಕಿಗ ACB ಬಲೆಗೆ
Published On - 5:13 pm, Thu, 21 January 21