ಮತ್ತೊಂದು ಬಹುಕೋಟಿ ವಂಚನೆ‌ ಪ್ರಕರಣ ಬೆಳಕಿಗೆ: 2 ಸಾವಿರ ಕೋಟಿ ಗುಳುಂ

|

Updated on: Nov 14, 2019 | 2:07 PM

ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ವಂಚನೆ‌ ಬಯಲಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಮುಖಂಡ ಕಿರಣ್ ಠಾಕೂರ್ ಒಡೆತನದ ಸೊಸೈಟಿ ವಿರುದ್ಧ ಧೋಖಾ ಆರೋಪ ಕೇಳಿಬಂದಿದೆ. ಕಿರಣ್ ಠಾಕೂರ್ ಒಡೆತನದ ಲೋಕಮಾನ್ಯ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರು ಹಣ ಠೇವಣಿ ಮಾಡಿದ್ದರು. ಠೇವಣಿದಾರರು ಇಟ್ಟಿದ್ದ 2 ಸಾವಿರ ಕೋಟಿ ಹಣವನ್ನು ದುರುಪಯೋಗ ಮಾಡಿದ್ದಾರೆ ಎನ್ನಲಾಗಿದೆ. ಶಾಸಕ ಅಭಯ ಪಾಟೀಲ್ ಸೇರಿ 60 ಶಾಸಕರಿಂದ ಇ.ಡಿ, ಕೇಂದ್ರ ಹಣಕಾಸು ಇಲಾಖೆ, ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು. ಪ್ರಕರಣ ಸಂಪೂರ್ಣ […]

ಮತ್ತೊಂದು ಬಹುಕೋಟಿ ವಂಚನೆ‌ ಪ್ರಕರಣ ಬೆಳಕಿಗೆ: 2 ಸಾವಿರ ಕೋಟಿ ಗುಳುಂ
Follow us on

ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ವಂಚನೆ‌ ಬಯಲಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಮುಖಂಡ ಕಿರಣ್ ಠಾಕೂರ್ ಒಡೆತನದ ಸೊಸೈಟಿ ವಿರುದ್ಧ ಧೋಖಾ ಆರೋಪ ಕೇಳಿಬಂದಿದೆ.

ಕಿರಣ್ ಠಾಕೂರ್ ಒಡೆತನದ ಲೋಕಮಾನ್ಯ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರು ಹಣ ಠೇವಣಿ ಮಾಡಿದ್ದರು. ಠೇವಣಿದಾರರು ಇಟ್ಟಿದ್ದ 2 ಸಾವಿರ ಕೋಟಿ ಹಣವನ್ನು ದುರುಪಯೋಗ ಮಾಡಿದ್ದಾರೆ ಎನ್ನಲಾಗಿದೆ.

ಶಾಸಕ ಅಭಯ ಪಾಟೀಲ್ ಸೇರಿ 60 ಶಾಸಕರಿಂದ ಇ.ಡಿ, ಕೇಂದ್ರ ಹಣಕಾಸು ಇಲಾಖೆ, ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು. ಪ್ರಕರಣ ಸಂಪೂರ್ಣ ತನಿಖೆಗೆ ಸಹಕಾರ ಇಲಾಖೆಗೆ ಸೂಚನೆ ಕೊಟ್ಟಿದೆ. ಸಹಕಾರ ಇಲಾಖೆ ರಿಜಿಸ್ಟ್ರಾರ್ ಶಿವಪ್ರಕಾಶ್ ನೇತೃತ್ವದಲ್ಲಿ ಅಧಿಕಾರಿಗಳು ಟಿಳಕವಾಡಿ ಬ್ರ್ಯಾಂಚ್​ಗೆ ಭೇಟಿ ನೀಡಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.

Published On - 2:06 pm, Thu, 14 November 19