ಅತ್ತೆ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷವಿಟ್ಟ ತಾಯಿ, 1 ಮಗು ಸಾವು

ಅತ್ತೆ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷವಿಟ್ಟ ತಾಯಿ, 1 ಮಗು ಸಾವು

ಮಂಡ್ಯ: ಅತ್ತೆ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷವಿಕ್ಕಿ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕಿತ್ಸೆ ಫಲಕಾರಿಯಾಗದೆ 1 ವರ್ಷದ ಲೋಹಿತ್ ಮೃತಪಟ್ಟಿದ್ದು, 3 ವರ್ಷದ ಪುನೀತ್ ಹಾಗೂ ತಾಯಿ ಸೌಜನ್ಯ(24) ಸ್ಥಿತಿ ಗಂಭೀರವಾಗಿದೆ.

ಅತ್ತೆ ತನ್ನ ಮಕ್ಕಳನ್ನು ಮಾತಾನಾಡಿಸುತ್ತಿದ್ದಳು ಎಂಬ ಏಕೈಕ ಕಾರಣಕ್ಕೆ ಸೌಜನ್ಯ ಗಲಾಟೆ ಮಾಡಿದ್ದಾಳೆ. ಈ ವಿಷಯ ಪತಿ ಶಿವಪ್ಪಗೆ ತಿಳಿದು ಮನೆಗೆ ಬಂದು ವಿಚಾರಿಸಿದಾಗ ಪತ್ನಿ ಸೌಜನ್ಯ ವಿಷ ಸೇವಿಸಿರುವ ವಿಷಯ ತಿಳಿದಿದೆ. ಆಸ್ಪತ್ರೆಗೆ ಕರೆದೊಯ್ಯುವಾಗಲೂ ಮಕ್ಕಳಿಗೆ ವಿಷ ನೀಡಿರುವ ವಿಚಾರವನ್ನು ಸೌಜನ್ಯ ಬಾಯ್ಬಿಟ್ಟಿಲ್ಲ.

ತಾಯಿ ಆಸ್ಪತ್ರೆಗೆ ಹೋದ ಬೆನ್ನಲ್ಲೇ ಮನೆಯಲ್ಲಿದ್ದ ಮಕ್ಕಳು ಸಹ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಮಕ್ಕಳನ್ನೂ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೆ ಲೋಹಿತ್ ಮೃತಪಟ್ಟಿದ್ದಾನೆ. ತಾಯಿ ಸೌಜನ್ಯಾ, ಪುನೀತ್​ಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 12:52 pm, Thu, 14 November 19

Click on your DTH Provider to Add TV9 Kannada