ಬೆಂಗಳೂರು: ಒಂದು ವರ್ಷ ಕಳೆದು ಹೋಗಿದ್ಯ ಅಂತ ಅನ್ನಿಸುತ್ತಿದೆ. ಎಲ್ಲಿ ಹೋದ್ರು ಅವರ ಬಗ್ಗೇನೇ ಮಾತು ಎಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಕಣ್ಣೀರಾಕಿದ್ದಾರೆ.
ನನ್ನನ್ನು ಇಷ್ಟೆಲ್ಲಾ ನಡೆಸಿಕೊಂಡು ಬಂದಿದ್ದು ಅಂಬರೀಶ್ ಅವರೇ. ಪ್ರತಿಕ್ಷಣ ಅವರನ್ನ ನಾನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ದರ್ಶನ್ ಸಹ ಬಂದು ಪೂಜೆ ಸಲ್ಲಿಸಿದ್ದಾರೆ. ಅವರು ಈಗ ನಮ್ಮ ಕುಟುಂಬದವ್ರ ಥರಾ ಇದ್ರಲ್ಲಿ ಆಶ್ಚರ್ಯವಿಲ್ಲ.
ಸರ್ಕಾರ ಬದಲಾದ ಕಾರಣ ಸ್ಮಾರಕ ತಡವಾಗ್ತಿದೆ: ಇಂದು ನಗರದ ಅರಮನೆ ಮೈದಾನದಲ್ಲೂ ವಿಶೇಷ ಪೂಜೆ ಇದೆ. ಅವ್ರ ಅಭಿಮಾನಿಗಳು, ಸ್ನೇಹಿತರ ಜೊತೆಗೆ ಸೆಲೆಬ್ರೆಟಿಗಳು ಕೂಡ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದಲಾದ ಕಾರಣ ಅಂಬಿ ಸ್ಮಾರಕ ತಡವಾಗ್ತಿದೆ. ಈ ಬಗ್ಗೆ ಫಿಲ್ಮ್ ಚೇಂಬರ್ ಮೂಲಕ ಸರ್ಕಾರವನ್ನ ಅಪ್ರೋಚ್ ಮಾಡಲಾಗಿದೆ ಎಂದರು. ಅಂಬಿ ಸಮಾಧಿಗೆ ಪುತ್ರ ಅಭಿಷೇಕ್, ರಾಕ್ಲೈನ್ ವೆಂಕಟೇಶ್ ಸಹ ಪೂಜೆ ಸಲ್ಲಿಸಿದರು.
ವರ್ಷ ತುಂಬೋ ಮೊದಲೇ ರೆಬೆಲ್ ಸ್ಟಾರ್ ಅಂಬರೀಶ್ ಪುಣ್ಯ ತಿಥಿ: ಅಂಬಿ, ಕಳೆದ ವರ್ಷ ನವೆಂಬರ್ 24ರಂದು ಇಹಲೋಕ ತ್ಯಜಿಸಿದ್ದರು. ಆದ್ರೆ ವರ್ಷ ತುಂಬೋದ್ರಳಗೆ ಪುಣ್ಯ ತಿಥಿ ಮಾಡ್ಬೇಕು ಅನ್ನೋ ಕಾರಣದ ಜೊತೆಗೆ ಅಂಬರೀಶ್ ನಕ್ಷತ್ರದ ಪ್ರಕಾರ ಇಂದೇ ತಿಥಿ ಕಾರ್ಯ ನಗದಿಪಡಿಸಿದರು. ಹಾಗಾಗಿ ಅಂಬಿ ಕುಟುಂಬಸ್ಥರು 10 ದಿನ ಮೊದಲೇ ಪುಣ್ಯತಿಥಿ ಪೂಜೆ ಸಲ್ಲಿಸಿದರು ಕುಟುಂಬದ ಆಪ್ತರು ತಿಳಿಸಿದರು.