15 ದಿನ ಮಗು ಅನುಮಾಸ್ಪದ ಸಾವು:ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ

ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಪ್ರಿಯಾಂಕಾ ಏಕಾಏಕಿ ಸಾವನ್ನಪ್ಪಿದ್ದು, ತಂದೆಯೇ ಮಗುವಿಗೆ ವಿಷ ಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಇಂದು (ಮಾರ್ಚ್ 17) ಮಧ್ಯಾಹ್ನ ಮಗಳನ್ನ ನೋಡಲು ಸಣ್ಣದೊಂದು ಟ್ಯೂಬ್ ಹಿಡಿದುಕೊಂಡು ಬಂದಿದ್ದ. ಆದ್ರೆ, ತಂದೆ ಹೋದ ಬಳಿಕ ಕೆಲ ಹೊತ್ತಿನಲ್ಲಿ ಮಗು ಸಾವನ್ನಪ್ಪಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

15 ದಿನ ಮಗು ಅನುಮಾಸ್ಪದ ಸಾವು:ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ
ಪ್ರಾತಿನಿಧಿಕ ಚಿತ್ರ
Edited By:

Updated on: Mar 17, 2026 | 11:04 PM

ಬೆಳಗಾವಿ, (ಮಾರ್ಚ್ 17): 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು, ತಂದೆ ಮೇಲೆ ಅನುಮಾನ ವ್ಯಕ್ತವಾಗಿದೆ. ಹೌದು…ಳಗಾವಿ (Belagavi) ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಪ್ರಿಯಾಂಕಾ ಇಂದು (ಮಾರ್ಚ್ 17) ಏಕಾಏಕಿ ಸಾವನ್ನಪ್ಪಿದ್ದು, ತಂದೆಯೇ ಮಗುವಿಗೆ ವಿಷ ಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಮಗುವಿನ ತಂದೆ ಭೀಮರಾಯ ತಲೆಮರೆಸಿಕೊಂಡಿದ್ದಾನೆ. ಬಿಮ್ಸ್ ಆಸ್ಪತ್ರೆಗೆ ಡಿಸಿಪಿ ನಾರಾಯಣ್ ಬರಮನಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.

ಹೆರಿಗೆ ಹಿನ್ನೆಲೆ ಶೀಲಾ ತವರುಮನೆ ಉಕ್ಕಡ ಗ್ರಾಮದಲ್ಲಿ ಇದ್ದಳು. ಹೀಗಾಗಿ ಭೀಮರಾಯ ಇಂದು (ಮಾರ್ಚ್ 17) ಮಧ್ಯಾಹ್ನ ಉಕ್ಕಡ ಗ್ರಾಮ ಆಗಮಿಸಿ ಪತ್ನಿ ಹಾಗೂ ಮಗು ಪ್ರಿಯಾಂಕಾಳನ್ನ ನೋಡಿಕೊಂಡು ವಾಪಸ್ ತಮ್ಮೂರು ಕಡೆ ಹೋಗಿದ್ದಾನೆ. ಆದ್ರೆ, ಏಕಾಏಕಿ ಮಗು ಸಾವನ್ನಪ್ಪಿದೆ. ಇದರಿಂದ ಪೋಷಕರು ಕಂಗಾಲಾಗಿದ್ದು, ಮಗು ಚೆನ್ನಾಗಿತ್ತು ದಿಢೀರ್ ಏನಾಯ್ತು ಎಂದು ಯೋಚಿಸುವಾಗ ಮೃತ ಮಗುವಿನ ತಂದೆ ಭೀಮರಾಯನ ಮೇಲೆ ಅನುಮಾನ ಬಂದಿದೆ.

ಇದನ್ನೂ ಓದಿ: ಒಂದೇ ರೂಮ್​ನಲ್ಲಿದ್ದ ಸ್ನೇಹಿತರ ನಡುವೆ ಗಲಾಟೆ: ಸುತ್ತಿಗೆಯಿಂದ ಹೊಡೆದು ಗೆಳೆಯನ ಬರ್ಬರ ಹತ್ಯೆ

ಸಣ್ಣದೊಂದು ಟ್ಯೂಬ್ ಹಿಡಿದುಕೊಂಡು ಬಂದಿದ್ದ. ಅದೇ ಟ್ಯೂಬ್​ನಿಂದ ಮಗುವಿಗೆ ಕುಡಿಸಿದ್ದಾನೆ ಎಂದು ಪತ್ನಿ ಶೀಲಾ ಹಾಗೂ ಆಕೆಯ ಪೋಷಕರಿಂದ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಭೀಮರಾಯ ಸಹ ನಾಪತ್ತೆಯಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ  ಡಿಸಿಪಿ ನಾರಾಯಣ್ ಬರಮನಿ ಆಗಮಿಸಿ ಪರಿಶೀಲನೆ ಮಾಡಿದ್ದು, ಮೃತ ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಆಚೆ ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us