ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆ; ಜಮೀನುಗಳಿಗೆ ನೀರು ನುಗ್ಗಿ 200 ಎಕರೆಗೂ ಹೆಚ್ಚು ಬೆಳೆ ನಾಶ
ಬೆಳಗಾವಿ ಜಮೀನುಗಳಿಗೆ ನುಗ್ಗಿದ ನೀರು

ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆ; ಜಮೀನುಗಳಿಗೆ ನೀರು ನುಗ್ಗಿ 200 ಎಕರೆಗೂ ಹೆಚ್ಚು ಬೆಳೆ ನಾಶ

Edited By:

Updated on: Jul 11, 2022 | 6:25 PM

ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಬೆಳಗಾವಿ ನಗರ ಹೊರ ವಲಯದಲ್ಲಿ ಹರಿದು ಹೋಗುವ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದೆ.

ಬೆಳಗಾವಿ: ಬೆಳಗಾವಿ (Belagavi) ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಬೆಳಗಾವಿ ನಗರ ಹೊರ ವಲಯದಲ್ಲಿ ಹರಿದು ಹೋಗುವ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದೆ. ನಾಲಾ ನೀರು  ರೈತರ ಜಮೀನಿಗೆ ನುಗ್ಗಿದ್ದು, ಎರಡು ನೂರು ಎಕರೆಗೂ ಅಧಿಕ ಹೊಲದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಭತ್ತ (Paddy), ಜೋಳ (Corn) ಸೇರಿದಂತೆ ತರಕಾರಿ ಬೆಳೆಗಳು ಸಂಪೂರ್ಣ ಜಲಾವೃತ್ತಗೊಂಡಿವೆ. ಇದರಿಂದ ಯಳ್ಳೂರು, ವಡಗಾಂವ, ಶಹಾಪುರ್ ಭಾಗದ ರೈತರು ಕಂಗಾಲಾಗಿದ್ದಾರೆ. ಸತತ ನಾಲ್ಕು ವರ್ಷದಿಂದ ಬಳ್ಳಾರಿ ನಾಲಾ ನೀರಿಗೆ ರೈತರು ಬೆಳೆ ಕಳೆದುಕೊಳ್ಳುತ್ತಿದ್ದಾರೆ.