ಬೆಳಗಾವಿ: ಪ್ರೀತಿಸಿ ಮದುವೆಯಾದ ದಂಪತಿ, ರಕ್ಷಣೆ ಕೋರಿ ವಿಡಿಯೋ ಮೂಲಕ ಸಿಎಂ, ಸಚಿವರ ಮೊರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 15, 2023 | 6:21 PM

ಪ್ರೀತಿಸಿ ಮದುವೆಯಾದ ಸರೋಜಿನಿ ಹಾಗೂ ಪ್ರಕಾಶ್ ಇವರಿಬ್ಬರನ್ನು ಕಂಡಲ್ಲಿ ಕೊಲ್ಲುವುದಾಗಿ ಯುವತಿ ಸರೋಜಿನಿ ತಂದೆ ಲಗಮಣ್ಣ, ಅಣ್ಣ ಪ್ರಸಾದ್, ಹಾಗೂ ಅವರ ಮಾವಂದಿರು ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ. ಜೊತೆಗೆ ಮನೆಗೆ ಹೋಗಲು ಪ್ರಕಾಶ್ ಕುಟುಂಬವನ್ನು ದಾರಿ ಬಿಡುತ್ತಿಲ್ಲವಂತೆ. ಸಧ್ಯ ನಾವು ಗುಜರಾತ್​ನಲ್ಲಿ ವಾಸವಿದ್ದು, ಪ್ರಕಾಶ್ ಕುಟುಂಬಸ್ಥರಿಗೆ ರಕ್ಷಣೆ ನೀಡಲು ಮನವಿ ಮಾಡಿದ್ದಾರೆ.

ಬೆಳಗಾವಿ: ಪ್ರೀತಿಸಿ ಮದುವೆಯಾದ ದಂಪತಿ, ರಕ್ಷಣೆ ಕೋರಿ ವಿಡಿಯೋ ಮೂಲಕ ಸಿಎಂ, ಸಚಿವರ ಮೊರೆ
ಪ್ರಾತಿನಿಧಿಕ ಚಿತ್ರ
Follow us on

ಬೆಳಗಾವಿ, ಅ,15: ಪ್ರೀತಿಸಿ ಮದುವೆ(Love Marriage)ಯಾದ ದಂಪತಿ ರಕ್ಷಣೆ ಕೋರಿ ಸಿಎಂ, ಸಚಿವರ ಮೊರೆ ಹೋದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನ್​ಪುರ ಗ್ರಾಮದಲ್ಲಿ ನಡೆದಿದೆ. ಹೌದು, ದಂಪತಿಯಾದ ಸರೋಜಿನಿ ಮನಗುತ್ತಿ ಮತ್ತು ಪ್ರಕಾಶ್​ ಹಳೇಗೌಡರ ಅವರು ವಿಡಿಯೋ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಮನವಿ ಸಲ್ಲಿಸಿದ್ದಾರೆ. ಇನ್ನು ಇವರಿಬ್ಬರು ಎದುರು ಬದುರು ಮನೆ ನಿವಾಸಿಗಳಾಗಿದ್ದು, ಪ್ರೀತಿಸುತ್ತಿದ್ದರು. ಪ್ರೇಮ ವಿವಾಹಕ್ಕೆ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಓಡಿಹೋಗಿ  ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.

ಪ್ರಕಾಶ್ ಕುಟುಂಬಕ್ಕೆ ಸರೋಜಿನಿ ಕುಟುಂಬಸ್ಥರಿಂದ ಜೀವ ಬೆದರಿಕೆ ಆರೋಪ

ಹೌದು, ಸರೋಜಿನಿ ಹಾಗೂ ಪ್ರಕಾಶ್ ಇವರಿಬ್ಬರನ್ನು ಕಂಡಲ್ಲಿ ಕೊಲ್ಲುವುದಾಗಿ ಯುವತಿ ಸರೋಜಿನಿ ತಂದೆ ಲಗಮಣ್ಣ, ಅಣ್ಣ ಪ್ರಸಾದ್, ಹಾಗೂ ಅವರ ಮಾವಂದಿರು ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ. ಜೊತೆಗೆ ಮನೆಗೆ ಹೋಗಲು ಪ್ರಕಾಶ್ ಕುಟುಂಬವನ್ನು ದಾರಿ ಬಿಡುತ್ತಿಲ್ಲವಂತೆ. ಸಧ್ಯ ನಾವು ಗುಜರಾತ್​ನಲ್ಲಿ ವಾಸವಿದ್ದು, ಪ್ರಕಾಶ್ ಕುಟುಂಬಸ್ಥರಿಗೆ ರಕ್ಷಣೆ ನೀಡಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಪ್ರೀತಿಸಿ ಮದುವೆಯಾದ ಮೊದಲ‌ ಪತ್ನಿಗೆ ಟಾರ್ಚರ್; ವಿಚ್ಛೇದನ ನೀಡದೆ ಹಿಂದೂ ಯುವತಿಯನ್ನು ವಿವಾಹವಾದ ಮುಸ್ಲಿಂ ಯುವಕ

ಇಲ್ಲೇ ಬಂದು ದೂರು ನೀಡಲು ಹೇಳಿದ ಬೆಳಗಾವಿ ಎಸ್​ಪಿ

ಇನ್ನು ಈ ಕುರಿತು ಬೆಳಗಾವಿ ಎಸ್​ಪಿ ಅವರನ್ನು ಸಂಪರ್ಕಿಸಿದರೆ, ಅವರು ಇ-ಮೇಲ್ ಮೂಲಕ ದೂರು ನೀಡಿದರೆ ದಾಖಲಿಸಿಕೊಳ್ಳಲು ಆಗಲ್ಲ, ಇಲ್ಲೇ ಬಂದು ದೂರು ನೀಡುವಂತೆ ಹೇಳಿದ್ದಾರಂತೆ. ಹೀಗಾಗಿ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸರೋಜಿನಿ, ಪ್ರಕಾಶ್​ ಹಳೇಗೌಡರ ಮನವಿ ಮಾಡಿದ್ದು, ನನ್ನ ಗಂಡ ಪ್ರಕಾಶ್ ಕುಟುಂಬಕ್ಕೆ ಏನಾದರೂ ಆದರೆ ನನ್ನ ತಂದೆ, ಕುಟುಂಬಸ್ಥರೇ ಹೊಣೆ ಎಂದು ಯುವತಿ ಹೇಳಿದ್ದಾರೆ. ಈ ವಿಡಿಯೋ ಬಿಡುಗಡೆ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಯುವಜೋಡಿ ವಿಡಿಯೋ ಮೂಲಕ ಸಿಎಂ, ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ