ಬೆಳಗಾವಿ ಪಾಲಿಕೆ ಪೌರ ಕಾರ್ಮಿಕ ಆತ್ಮಹತ್ಯೆ; ಗುತ್ತಿಗೆದಾರನ ಕಿರುಕುಳವೇ ಕಾರಣವೆಂದು ಕುಟುಂಬಸ್ಥರ ಆರೋಪ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 01, 2023 | 2:37 PM

ಬೆಳಗಾವಿ ಪಾಲಿಕೆ ಗುತ್ತಿಗೆದಾರನ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗುತ್ತಿಗೆದಾರನ ಬಳಿ ತೆಗೆದುಕೊಂಡಿದ್ದ 80 ಸಾವಿರ ಹಣದಲ್ಲಿ ಈಗಾಗಲೇ 50 ಸಾವಿರ ಕೊಟ್ಟಿದ್ದರು. ಆದರೂ ಕೂಡ ಮೂರು ತಿಂಗಳಿನಿಂದ ವೇತನ ಕೂಡ ನೀಡದೇ ನಿತ್ಯ ಕಿರುಕುಳ ನೀಡುತ್ತಿದ್ದರಂತೆ.

ಬೆಳಗಾವಿ ಪಾಲಿಕೆ ಪೌರ ಕಾರ್ಮಿಕ ಆತ್ಮಹತ್ಯೆ; ಗುತ್ತಿಗೆದಾರನ ಕಿರುಕುಳವೇ ಕಾರಣವೆಂದು ಕುಟುಂಬಸ್ಥರ ಆರೋಪ
ಮೃತ ವ್ಯಕ್ತಿ
Follow us on

ಬೆಳಗಾವಿ, ಸೆ.01: ಬೆಳಗಾವಿ (Belagavi) ಮಹಾನಗರ ಪಾಲಿಕೆ ಗುತ್ತಿಗೆದಾರನ ಕಿರುಕುಳ ತಾಳಲಾರದೆ 24 ವರ್ಷದ ಪೌರ ಕಾರ್ಮಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ನಡೆದಿದೆ. ಶಶಿಕಾಂತ ಢವಳೆ(26) ಮೃತ ವ್ಯಕ್ತಿ. ಶಶಿಕಾಂತ್, ಗುತ್ತಿಗೆದಾರ ಎನ್.ಡಿ ಪಾಟೀಲ್ ಎಂಬುವವರ ಬಳಿ 80ಸಾವಿರ ಸಾಲ ಪಡದಿದ್ದರು. ಈಗಾಗಲೇ ಐವತ್ತು ಸಾವಿರ ಸಾಲ ವಾಪಾಸ್ ನೀಡಿ, ಇನ್ನೂ ಬಾಕಿಯಿರುವ 30ಸಾವಿರ ರೂಪಾಯಿಯನ್ನು ಶೀಘ್ರದಲ್ಲಿ ಕೊಡುವುದಾಗಿ ಮನವಿ ಮಾಡಿದ್ದರು. ಆದರೆ, ಇದಕ್ಕೆ ಒಪ್ಪದೇ ಒಂದೂವರೆ ಲಕ್ಷ ಬಡ್ಡಿ ನೀಡುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದರಂತೆ.

3 ತಿಂಗಳಿನಿಂದ ವೇತನ ನೀಡದ ಗುತ್ತಿಗೆದಾರ

ಹೌದು, ತೆಗೆದುಕೊಂಡಿದ್ದ 80 ಸಾವಿರ ಹಣದಲ್ಲಿ ಈಗಾಗಲೇ 50 ಸಾವಿರ ಕೊಟ್ಟಿದ್ದರು. ಆದರೂ ಕೂಡ ಮೂರು ತಿಂಗಳಿನಿಂದ ವೇತನ ಕೂಡ ನೀಡದೇ ಗುತ್ತಿಗೆದಾರ ಎನ್‌.ಡಿ ಪಾಟೀಲ್ ಮತ್ತು ಸುಪರ್ವೈಸರ್ ಶಂಕರ್ ಅಷ್ಟೆಕರ್ ಸತಾಯಿಸುತ್ತಿದ್ದರಂತೆ. ಇದರಿಂದ ಶಶಿಕಾಂತ್ ತೀವ್ರ ನೊಂದಿದ್ದು, ನಿನ್ನೆ(ಆ.31) ರಾತ್ರಿ ಸಾಲಗಾರರ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ಪ್ರತ್ಯೇಕ ಘಟನೆ: ಮಂಗಳೂರಿನಲ್ಲಿ ಪ್ರಸಿದ್ಧ ಕಬಡ್ಡಿ ಆಟಗಾರ ಆತ್ಮಹತ್ಯೆ, ಬೆಂಗಳೂರಿನಲ್ಲಿ ಉದ್ಯಮಿ ಅನುಮಾನಾಸ್ಪದ ಸಾವು

ಸಾವಿಗೆ ಗುತ್ತಿಗೆದಾರ ಮತ್ತು ಸುಪರ್ವೈಸರ್ ಕಾರಣವೆಂದು ಕುಟುಂಬಸ್ಥರ ಆರೋಪ

ಇನ್ನು ನಿನ್ನೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಶಶಿಕಾಂತ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಆತನ ಸಾವಿಗೆ ಪೌರ ಕಾರ್ಮಿಕರ ಗುತ್ತಿಗೆದಾರ ಎನ್‌ಡಿ ಪಾಟೀಲ್ ಮತ್ತು ಸುಪರ್ವೈಸರ್ ಶಂಕರ್ ಅಷ್ಟೆಕರ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನಲೆ ಕ್ಯಾಂಪ್ ಪೊಲೀಸ್ ಠಾಣೆ ಬಳಿ ಪೌರ ಕಾರ್ಮಿಕರು ಮತ್ತು ಕುಟುಂಬಸ್ಥರಿಂದ ಧರಣಿ ನಡೆಸಲಾಗುತ್ತಿದೆ. ಕೂಡಲೇ ಇಬ್ಬರನ್ನೂ ಬಂಧಿಸಬೇಕು, ಜೊತೆಗೆ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ