ಪಾಲಿಕೆ ಚುನಾವಣೆ: ಮತದಾರರಿಗೆ ಪ್ರಧಾನಿ ಮೋದಿ ಭಾವಚಿತ್ರದ ಚೀಟಿ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ, ಕಿಡಿಕಿಡಿ

| Updated By: guruganesh bhat

Updated on: Sep 03, 2021 | 2:51 PM

ವೈಭವ ನಗರದ ವಾರ್ಡ್ 45ರಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಸುದ್ದಿ ತಿಳಿದು ಮತಗಟ್ಟೆಗೆ ಆಗಮಿಸಿದ ಸಿಬ್ಬಂದಿಯನ್ನೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಲಿಕೆ ಚುನಾವಣೆ: ಮತದಾರರಿಗೆ ಪ್ರಧಾನಿ ಮೋದಿ ಭಾವಚಿತ್ರದ ಚೀಟಿ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ, ಕಿಡಿಕಿಡಿ
ಲಕ್ಷ್ಮೀ ಹೆಬ್ಬಾಳ್ಕರ್
Follow us on

ಬೆಳಗಾವಿ: ಇಂದು (ಸೆಪ್ಟೆಂಬರ್ 3) ನಡೆಯುತ್ತಿರುವ ಬೆಳಗಾವಿ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಾಯಕರು ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರದ ಚೀಟಿ ಕೊಟ್ಟು ಮತದಾನ ಮಾಡಲು ಪ್ರಚೋದಿಸುತ್ತಿದ್ದಾರೆಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಅಲ್ಲದೇ ಅವರು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರ ಬಳಿಯಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿದ್ದ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಬಿಜೆಪಿ ನಾಯಕರೇ ಮತದಾರರಿಗೆ ಚೀಟಿ ಕೊಟ್ಟು ಕಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಯಿಂದ ಮಾಜಿ ಮೇಯರ್ ಬಸಪ್ಪ ಅವರ ಪತ್ನಿ ಸ್ಪರ್ಧೆ ಮಾಡಿದ್ದು, ಬಸಪ್ಪ ಅವರೇ ಈ ಗುರುತಿನ ಚೀಟಿ ಕೊಟ್ಟುಕಳುಹಿಸಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಈ ಬೆನ್ನಲ್ಲೇ, ವೈಭವ ನಗರದ ವಾರ್ಡ್ 45ರಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಸುದ್ದಿ ತಿಳಿದು ಮತಗಟ್ಟೆಗೆ ಆಗಮಿಸಿದ ಸಿಬ್ಬಂದಿಯನ್ನೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಗೊಂದಲದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ, ವಾರ್ಡ್ ನಂ 32 ರ ಕಾಂಗ್ರೆಸ್ ಅಭ್ಯರ್ಥಿ ಅನಂತಕುಮಾರ ಬ್ಯಾಕೋಡ, ಬಿಜೆಪಿಗೆ ಹಾಗೂ ಎಂಇಎಎಸ್​ಗೆ ಸೋಲುವ ಮುನ್ಸೂಚನೆ ಸಿಕ್ಕಿದೆ. ಅದಕ್ಕೆ ಮರು ಚುನಾವಣೆ ಮಾತನಾಡುತ್ತಿದ್ದಾರೆ. ಒಂದು ವಾರ್ಡ್​ನಲ್ಲಿ ಹೆಸರು ಇರದಿದ್ದರೂ ಪಕ್ಕದ ವಾರ್ಡ್​ನಲ್ಲಿ ಹೆಸರು ಇರುತ್ತದೆ‌. ದಯವಿಟ್ಟು ಎಲ್ಲ ಮತದಾರರು ಮತ ಹಾಕಬೇಕು ಎಂದು ಹೇಳಿದರು.

ಇದನ್ನೂ ಓದಿ: 

ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಶುರು

ಪೌರ ಕಾರ್ಮಿಕರಿಗೆ ಸದ್ಯದಲ್ಲೇ ಕೈಮಗ್ಗದ ಸಮವಸ್ತ್ರ; ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹೊಸ ಪ್ರಯೋಗ

(Belagavi Local Body Election MLA Laxmi Hebbalkar accused BJP leaders give PM Modi picture for voting)